ಲಕ್ಷ್ಮೇಶ್ವರ ತಾಲೂಕಿನ ಒಡೆಯರ ಮಲ್ಲಾಪುರ ಗ್ರಾಮದ ಹತ್ತಿರ ಶುಕ್ರವಾರ ಚಾಲಕನ ನಿಯಂತ್ರಣ ತಪ್ಪಿದ ಬಸ್ಸು ಕಂದಕಕ್ಕೆ ನುಗ್ಗಿದ್ದು, ಅದೃಷ್ಟವಶಾತ್ ಹೆಚ್ಚಿನ ಅಪಾಯ ತಪ್ಪಿದೆ. ಲಕ್ಷ್ಮೇಶ್ವರದಿಂದ ಒಡೆಯರ ಮಲ್ಲಾಪುರ ಮಾರ್ಗವಾಗಿ ಹೊಸರಿತ್ತಿ ಕಡೆಗೆ ಹೋಗುತ್ತಿದ್ದ ಲಕ್ಷ್ಮೇಶ್ವರ ಡಿಪೋ ಬಸ್ (ಕೆಎ-42 ಎಫ್ 1653) ರಸ್ತೆ ತಿರುವುನಲ್ಲಿ ಬಸ್ಸಿನ ಪಾಟಾ ಕಟ್ ಆಗಿ ಚಾಲಕನ ನಿಯಂತ್ರಣ ತಪ್ಪಿ ಕಂದಕಕ್ಕೆ ಮುಗುಚಿದೆ. ಚಾಲಕ ಮತ್ತು ನಿರ್ವಾಹಕ ಮಾತ್ರ ಗಾಯಗೊಂಡಿದ್ದಾರೆ. ಶಾಲಾ-ಕಾಲೇಜು ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿದ್ದರೂ ಯಾವುದೇ ಅಪಾಯವಾಗಿಲ್ಲ.
Advertisement