6 ಸಾವಿರ ಲಂಚ ಸ್ವೀಕಾರ: ‘ಲೋಕಾ’ ಬಲೆಗೆ ಬಿದ್ದ ಶಿರಸಿ ನ್ಯಾಯಾಲಯದ ಹೆಚ್ಚುವರಿ ಎಪಿಪಿ!

0
Spread the love

ಶಿರಸಿ:- 6 ಸಾವಿರ ಲಂಚ ಸ್ವೀಕರಿಸುತ್ತಿದ್ದ ಶಿರಸಿ ನ್ಯಾಯಾಲಯದ ಹೆಚ್ಚುವರಿ ಎಪಿಪಿ ‘ಲೋಕಾ’ ಅಧಿಕಾರಿಗಳ ಬಲೆಗೆ ಬಿದ್ದಿದ್ದಾರೆ. ಪ್ರಕಾಶ್ ಲಮಾಣಿ ಲೋಕಾ ಬಲೆಗೆ ಬಿದ್ದವರು.

Advertisement

ಪ್ರಕರಣವೊಂದರಲ್ಲಿ ಆರು ಸಾವಿರ ರೂಪಾಯಿ ಲಂಚ ಸ್ವೀಕರಿಸುತ್ತಿರುವ ವೇಳೆ ಲೋಕಾಯುಕ್ತ ಪೊಲೀಸರು ದಾಳಿ ಮಾಡಿ ಹಿಡಿದಿದ್ದಾರೆ. ಸೀಜ್ ಆಗಿದ್ದ ಮುದ್ದೆ ಮಾಲನ್ನು ರಿಲೀಸ್ ಮಾಡಿಸಲು ಪವನ್ ಕುಮಾರ್ ಅವರ ಬಳಿ ಹಣಕ್ಕೆ ಬೇಡಿಕೆ ಇಟ್ಟಿದ್ದರು. ಅದರಂತೆ ಫೆಬ್ರವರಿ 28 ರಂದು ಪವನ್ ಕುಮಾರ್ ಅವರಿಂದ 6 ಸಾವಿರ ರೂ. ಲಂಚದ ಹಣ ಪಡೆಯುತ್ತಿರುವಾಗ ಲೋಕಾಯುಕ್ತ ಇನ್ಸ್​ಪೆಕ್ಟರ್ ವಿನಾಯಕ ಬಿಲ್ಲವ ಹಾಗೂ ಸಿಬ್ಬಂದಿ ದಾಳಿ ಮಾಡಿ ಹಿಡಿದಿದ್ದಾರೆ.

ಸದ್ಯ ಎಪಿಪಿ ಪ್ರಕಾಶ್ ಲಾಮಾಣಿ ಅವರನ್ಜು ಲೋಕಾಯುಕ್ತ ಅಧಿಕಾರಿಗಳು ವಶಕ್ಕೆ ಪಡೆದುಕೊಂಡಿದ್ದು, ತನಿಖೆ ಮುಂದುವರಿಸಿದ್ದಾರೆ.


Spread the love

LEAVE A REPLY

Please enter your comment!
Please enter your name here