ಅರ್ಥಿಕ ಸಂಗತಿಗಳ ಜ್ಞಾನ ಅವಶ್ಯಕ

0
Spread the love

ವಿಜಯಸಾಕ್ಷಿ ಸುದ್ದಿ, ಗದಗ: ಸಂಘಟನೆಯ ಮೂಲಕ ಸಮಸ್ಯೆಗಳು ನಿವಾರಣೆಯಾಗಬಲ್ಲವು. ಅದರಲ್ಲೂ ಶಿಕ್ಷಣ ಸಮುದಾಯದಲ್ಲಿ ವಿವಿಧ ಕಾರಣಗಳಿಂದ ಸಮಸ್ಯೆಗಳು ಎದುರಾಗುತ್ತಿದ್ದು, ಅಂತಹ ಸಮಸ್ಯೆಗಳನ್ನು ಸಂಘಟನೆಯಿದ ಮಾತ್ರ ಪರಿಹರಿಸಲು ಸಾಧ್ಯ ಎಂದು ಜಿ.ಎಸ್.ಎಸ್ ಮಹಾವಿದ್ಯಾಲಯದ ಅರ್ಥಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಡಾ. ಶೌಕತಅಲಿ ಮೇಗಲಮನಿ ನುಡಿದರು.

Advertisement

ಕರ್ನಾಟಕ ವಿಶ್ವವಿದ್ಯಾಲಯ ಧಾರವಾಡದ ಸಮಾಜ ವಿಜ್ಞಾನ ಮೌಲ್ಯಮಾಪನ ಕೇಂದ್ರದಲ್ಲಿ ಜರುಗಿದ ಕರ್ನಾಟಕ ವಿಶ್ವವಿದ್ಯಾಲಯದ ಕಾಲೇಜು ಅರ್ಥಶಾಸ್ತ್ರ ಪ್ರಾಧ್ಯಾಪಕ ಪರಿಷತ್ತಿನ ಸಾಮಾನ್ಯ ಸಭೆಯಲ್ಲಿ ಅವರು ಮಾತನಾಡಿದರು.

ಪ್ರಪಂಚದಲ್ಲಿ ಹಣದಿಂದಲೇ ಎಲ್ಲಾ ಚಟುವಟಿಕೆಗಳು ನಡೆಯುತ್ತವೆ. ಈ ಹಣವನ್ನು ಅರ್ಥಶಾಸ್ತ್ರ ಮಾತ್ರ ವ್ಯಯಸ್ಥಿತವಾಗಿ ಅಧ್ಯಯನ ಮಾಡುತ್ತಿದ್ದು, ಇಂತಹ ಆರ್ಥಿಕ ಸಂಗತಿಗಳ ಬಗ್ಗೆ ಸಮಾಜದ ಪ್ರತಿಯೊಬ್ಬರಿಗೂ ಜ್ಞಾನವಿರಬೇಕು. ಈ ನಿಟ್ಟದಲ್ಲಿ ಪರಿಷತ್ತಿನ ಸದಸ್ಯರ ಪ್ರಯತ್ನ ಬೇಕೆಂದು ಹೇಳಿದರು.

ಪರಿಷತ್ತಿನ ಉಪಾಧ್ಯಕ್ಷರಾಗಿ ಡಾ. ರವಿ ನಾಯಿಕ, ಕಾರ್ಯದರ್ಶಿಯಾಗಿ ಡಾ. ಸುರೇಶ ನ್ಯಾಮತಿ, ಖಜಾಂಚಿಯಾಗಿ ಪ್ರೊ. ಪ್ರಸನ್ನ ಪಾಂಡ್ರೆ ಆಯ್ಕೆಗೊಂಡಿದ್ದು, ಜಂಟಿ ಕಾರ್ಯದರ್ಶಿಯಾಗಿ ಡಾ. ಅನ್ನಪೂರ್ಣ, ಗದಗ ಜಿಲ್ಲಾ ಉಪಾಧ್ಯಕ್ಷರಾಗಿ ಡಾ. ವ್ಹಿ.ಎ. ನಿಂಗೋಜಿ, ಧಾರವಾಡ ಜಿಲ್ಲಾ ಉಪಾಧ್ಯಕ್ಷರಾಗಿ ಡಾ. ಮನೋಹರ ಸಿ.ಪಿ., ಕಾರವಾರ ಜಿಲ್ಲಾ ಉಪಾಧ್ಯಕ್ಷರಾಗಿ ಪ್ರೊ. ಸುನೀತಾ ಜೋಗ, ಡಾ. ದೇವದಾಸ ಪ್ರಭು ಆಯ್ಕೆಗೊಂಡರು.

ಮಹಿಳಾ ಪ್ರತಿನಿಧಿಯಾಗಿ ಪ್ರೊ. ಸರಸ್ವತಿ ಪಾಟೀಲ, ಪ್ರೊ. ಪರವೀನ ಶೇಖ, ಪ್ರೊ. ಜಯಲಕ್ಷ್ಮಿ ಹೆಚ್.ಎಸ್., ಅತಿಥಿ ಪ್ರಾಧ್ಯಾಪಕರ ಪ್ರತಿನಿಧಿಯಾಗಿ ಪ್ರೊ. ಎಸ್.ಎನ್. ಪಾಟೀಲ, ಪ್ರೊ. ಎಸ್.ಜಿ. ಉಳಗೇರ, ಪ್ರೊ. ಯಮನೂರ ಆಯ್ಕೆಗೊಂಡರು. ಸಮಾರಂಭದಲ್ಲಿ ಪ್ರೊ. ಬಿ.ಎಂ. ನದ್ದಿಮುಲ್ಲಾ ಮಾತನಾಡಿದರು. ಡಾ. ಸುರೇಶ ನ್ಯಾಮತಿ ವಂದಿಸಿದರು.


Spread the love

LEAVE A REPLY

Please enter your comment!
Please enter your name here