ಡಾ. ಪಂ. ಪುಟ್ಟರಾಜಶ್ರೀ ಕವಿ ಗವಾಯಿಗಳವರು

0
Spread the love

ಪದ್ಮ ಭೂಷಣ ಪವಿತ್ರ ಪ್ರಶಸ್ತಿಗೆ ಭಾಜನರಾಗಿ,

Advertisement

ಪದ್ಮ ಕಮಲ ಗುರು ಕುಮಾರೇಶನ ಮಾನಸ ಪುತ್ರರಾಗಿ

ಭೂ ಮಂಡಲ ಕಂಡ ಅಪರೂಪದ ನಡೆದಾಡುವ ದೇವಋಷಿಯಾಗಿ

ಷಟಸ್ಥಲ, ಪಂಚಾಚಾರ, ಅಷ್ಟಾವರಣಗಳ ತ್ರಿವೇಣಿ ಸಂಗಮವಾಗಿ,

ಕಣಕಣದ ಕನ್ನಡದ ಮಣ್ಣಿನಲ್ಲಿ -ಮನಗಳಲ್ಲಿ ಪುಟ್ಟರಾಜ ನೆಲೆಯಾಗಿ

 

ಡಾಕ್ಟರೇಟ್ ಪದವಿಗೆ ಮಾನ್ಯರಾಗಿ, ಪಂಚಾಕ್ಷರ ಗವಾಯಿಗಳ ಶಿಷ್ಯರಾಗಿ

ಪಂಡಿತ ಬಿರುದು ಪಡೆದು ಶ್ರೇಷ್ಠರಾಗಿ, ವೀರೇಶ್ವರ ಪುಣ್ಯಾಶ್ರಮಕ್ಕೆ ಕಳಸವಾಗಿ

 

ಪುಣ್ಯವಂತ ದಂಪತಿಗಳ ಕರುಳಿನ ಕುಡಿಯಾಗಿ,

ಪುಟ್ಟರಾಜ ಹೆಸರನ್ನು ನಭೋಮಂಡಲದಲ್ಲಿ ಮೂಡಿಸಿದ ಯೋಗಿಯಾಗಿ,

ರಾಜ ಮರ್ಯಾದೆ ಪಡೆದ ಸಂಗೀತ ಸರಸ್ವತಿಯ ಋಷಿಯಾಗಿ

ಜನ್ಮ ಭೂಮಿಗೆ ಹೆಸರು, ಕೀರ್ತಿ ನೀಡಿದ ಸುಜ್ಞಾನಿಯಾಗಿ

ಶ್ರೀ ಸಾಮಾನ್ಯರ ಬದುಕಿಗೆ ಆಧಾರ ಸ್ತಂಭವಾಗಿ

 

ಕನಕ ಪುರಂದರ ಪ್ರತಿಷ್ಠಿತ ಪ್ರಶಸ್ತಿಗೆ ಪುರಸ್ಕೃತರಾಗಿ

ವಿಶ್ವವಿಖ್ಯಾತಿಯ ತುಲಾಭಾರ ಸೇವೆಗಳ ಚಕ್ರವರ್ತಿಯಾಗಿ

 

ಗವಾಯಿ ಎಂಬ ಬಿರುದಿಗೆ ಸಾರ್ಥಕರಾಗಿ

ವಾದ್ಯಗಳ ನುಡಿಸುವ ಗಾರುಡಿಗರಾಗಿ

ಯಿಂದುಮತಿಯ ಕನ್ನಡ ಕುವರರಾಗಿ

ಗದುಗನ್ನು ಗದ್ದುಗೆ ಮಾಡಿ ಭಿಕ್ಷಾ

ಜೋಳಗಿಯನ್ನು ಹೊತ್ತು ಅಂದ-ಅನಾಥ ಮಕ್ಕಳಿಗೆ ತಂದೆಯಾಗಿ

ವಚನ ಸಿರಿಯ ದಾಸೋಹದ ಕಾಯಕ ಯೋಗಿಯಾಗಿ

ರುದ್ರವೀಣೆಯ ಸಂಗೀತದ ಸುಪುತ್ರರಾಗಿ ಮೆರೆದ ಯೋಗಿ ಶಿವಯೋಗಿ.

 

– ಬಸವರಾಜ. ಮ.ಕುಕನೂರ.

 ನಾರಾಯಣಪೂರ, ಗದಗ.


Spread the love

LEAVE A REPLY

Please enter your comment!
Please enter your name here