ವಿಜಯಸಾಕ್ಷಿ ಸುದ್ದಿ, ಶಿರಹಟ್ಟಿ: ಶಿರಹಟ್ಟಿ ಪಟ್ಟಣದಲ್ಲಿಯ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ವಿದ್ಯಾರ್ಥಿನಿಯರ ವಸತಿ ನಿಲಯಕ್ಕೆ ಕಾಂಪೌಂಡ್ ನಿರ್ಮಾಣ ಹಾಗೂ ವಸತಿ ನಿಲಯಕ್ಕೆ ಬೇಕಾದ ಪೀಠೋಪಕರಣ ಹಾಗೂ ಇತರೆ ಸೌಲಭ್ಯಗಳನ್ನು ಒದಗಿಸಬೇಕೆಂದು ಆಗ್ರಹಿಸಿ ಶನಿವಾರ ಶಿರಹಟ್ಟಿಯಲ್ಲಿ ಕರ್ನಾಟಕ ಪ್ರಜಾಪರ ವೇದಿಕೆ ವತಿಯಿಂದ ಉನ್ನತ ಶಿಕ್ಷಣ ಸಚಿವ ಡಾ. ಎಂ.ಸಿ. ಸುಧಾಕರ ಅವರಿಗೆ ಮನವಿ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ವೇದಿಕೆಯ ತಾಲೂಕಾಧ್ಯಕ್ಷ ಹಸನ್ ತಹಸೀಲ್ದಾರ, ಗ್ರಾಮೀಣ ಘಟಕದ ಪರಿಶಿಷ್ಟ ಜಾತಿ ಮತ್ತು ಪಂಗಡದ ವಿದ್ಯಾರ್ಥಿನಿಯರಿಗೆ ಅನುಕೂಲವಾಗುವಂತೆ ಪಟ್ಟಣದ ಶ್ರೀ ಜ.ಫಕೀರೇಶ್ವರ ಸರಕಾರಿ ಪ್ರಥಮದರ್ಜೆ ಕಾಲೇಜಿನ ಹಿಂದುಗಡೆ ವಸತಿ ನಿಲಯವನ್ನು ಎಸ್ಸಿಪಿ ಮತ್ತು ಟಿಎಸ್ಪಿ ಯೋಜನೆಯಡಿ 99 ಲಕ್ಷ ರೂ ವೆಚ್ಚದಲ್ಲಿ ನಿರ್ಮಾಣ ಮಾಡಿದ್ದು, ಕಟ್ಟಡಕ್ಕೆ ಸೂಕ್ತ ಕಾಂಪೌಂಡ್ ಇಲ್ಲದೆ ಕಟ್ಟಡ ಬಳಕಗೆ ಬಾರದೆ ನಿರುಪಯುಕ್ತವಾಗಿದೆ. ಆದ್ದರಿಂದ ಸಚಿವರು ಈ ಬಗ್ಗೆ ವಿಶೇಷ ಗಮನಹರಿಸಬೇಕೆಂದು ವಿನಂತಿಸಿದರು.
ಈ ಸಂದರ್ಭದಲ್ಲಿ ಶರೀಫ ಗುಡಿಮನಿ, ಸತೀಶ ನರಗುಂದ, ಬಸವರಾಜ ಅಕ್ಕಿ, ಕಳಕಪ್ಪ ಬಿಸನಳ್ಳಿ, ಸುನೀಲಗೌಡ ಪಾಟೀಲ ಮುಂತಾದವರು ಉಪಸ್ಥಿತರಿದ್ದರು.