ಪಾಸ್‌ಪೋರ್ಟ್ ಮಾಡಿಸಲು ಇನ್ಮುಂದೆ ಈ ನಿಯಮ ಕಡ್ಡಾಯ: ಕೇಂದ್ರದ ಆ ಮಹತ್ವದ ಸೂಚನೆ ಏನು?

0
Spread the love

ನವದೆಹಲಿ:- ಪಾಸ್‌ಪೋರ್ಟ್ ಮಾಡಿಸಲು ಕೇಂದ್ರ ಸರ್ಕಾರವು ನಾಗರೀಕರಿಗೆ ಮಹತ್ವದ ಸೂಚನೆ ಕೊಟ್ಟಿದೆ. 1980ರ ಪಾಸ್‌ಪೋರ್ಟ್‌ ನಿಯಮಗಳನ್ನು ತಿದ್ದುಪಡಿ ಮಾಡಿದ್ದು, ಜನನ ಪ್ರಮಾಣಪತ್ರಗಳನ್ನು ಜನ್ಮ ದಿನಾಂಕದ ಏಕೈಕ ಪುರಾವೆಯನ್ನಾಗಿ ಮಾಡಲಾಗಿದೆ.

Advertisement

ಫೆ. 24ರಂದು ವಿದೇಶಾಂಗ ಸಚಿವಾಲಯ ಹೊರಡಿಸಿದ ಅಧಿಕೃತ ಅಧಿಸೂಚನೆಯಲ್ಲಿ ಈ ಕುರಿತು ಹೇಳಲಾಗಿದೆ. ಪಾಸ್‌ಪೋರ್ಟ್ ಕಾಯ್ದೆ 1967ರ ಸೆಕ್ಷನ್ 24ರ ನಿಬಂಧನೆಗಳ ಅಡಿಯಲ್ಲಿ ಪಾಸ್‌ಪೋರ್ಟ್ ನಿಯಮಗಳನ್ನು ತಿದ್ದುಪಡಿ ಮಾಡಲಾಗಿದೆ ಎಂದು ತಿಳಿಸಲಾಗಿದೆ.

ಜನನ ಪ್ರಮಾಣಪತ್ರವು 2023ರ ಅಕ್ಟೋಬರ್ 1ರಂದು ಅಥವಾ ನಂತರ ಜನಿಸಿದ ವ್ಯಕ್ತಿಗಳಿಗೆ ಮಾತ್ರ ಜನ್ಮ ದಿನಾಂಕದ ಪುರಾವೆಯಾಗಿ ಕಾರ್ಯನಿರ್ವಹಿಸಲಿದೆ. ಆದರೆ, ಅಕ್ಟೋಬರ್ 1, 2023ಕ್ಕಿಂತ ಮೊದಲು ಜನಿಸಿದವರು ಹುಟ್ಟಿದ ದಿನಾಂಕದ ಪುರಾವೆಯಾಗಿ ಇತರ ದಾಖಲೆಗಳನ್ನು ಸಲ್ಲಿಸಬಹುದು. ಅವರು ಬರ್ತ್‌ ಸರ್ಟಿಫಿಕೆಟ್‌ ಸಲ್ಲಿಸುವುದು ಕಡ್ಡಾಯವಲ್ಲ.

ಅಕ್ಟೋಬರ್ 1, 2023ಕ್ಕೂ ಮೊದಲು ಜನಿಸಿದವರಿಗೆ ಜನನ ಪ್ರಮಾಣ ಪತ್ರ ಬದಲು ಇತರೆ ದಾಖಲಾತಿಗಳನ್ನು ಸಲ್ಲಿಸಲು ಅನುಮತಿ ಇತ್ತು. ಪರ್ಯಾಯ ದಾಖಲೆಗಳು ಅಂದ್ರೆ ಅಧಿಕೃತ ಶಿಕ್ಷಣ ಸಂಸ್ಥೆಗಳ ಶಾಲೆ ವರ್ಗಾವಣೆ ಪತ್ರ, ಮೆಟ್ರಿಕ್ಯುಲೇಷನ್ ಪ್ರಮಾಣಪತ್ರ ನೀಡಲು ಅವಕಾಶವಿತ್ತು. ಆದರೆ ಇನ್ಮುಂದೆ ಅಕ್ಟೋಬರ್ 1, 2023ರ ನಂತರ ಜನಿಸಿದವರು ಜನನ ಪ್ರಮಾಣ ಪತ್ರ ಸಲ್ಲಿಸದೇ ಇದ್ದರೆ ಪಾಸ್‌ಪೋರ್ಟ್ ಪಡೆಯುವಂತಿಲ್ಲ.

ದೇಶದಲ್ಲಿ ಜನನ ಮತ್ತು ಮರಣಗಳ ನೋಂದಣಿ ಕಾಯಿದೆ, 2023 ಜಾರಿಯಾಗಿದೆ. ಇದರ ಪ್ರಕಾರ ಜನನ ಪ್ರಮಾಣ ಪತ್ರವನ್ನು ಬಹಳ ಮುಖ್ಯವಾದ ಒಂದೇ ದಾಖಲೆ ಎಂದು ಪರಿಗಣಿಸಲಾಗುತ್ತದೆ. ಅಕ್ಟೋಬರ್ 1, 2023ರ ಬಳಿಕ ಪಾಸ್‌ಪೋರ್ಟ್, ಶಾಲಾ ಪ್ರವೇಶಾತಿ, ಡ್ರೈವಿಂಗ್ ಲೈಸೆನ್ಸ್‌, ಮತದಾರರ ಚೀಟಿ, ಮದುವೆ ಪ್ರಮಾಣ ಪತ್ರ, ಸರ್ಕಾರಿ ಉದ್ಯೋಗಗಳ ನೇಮಕಾತಿ, ಆಧಾರ್ ಕಾರ್ಡ್ ನಂಬರ್ ಎಲ್ಲದಕ್ಕೂ ಜನನ ಪ್ರಮಾಣ ಪತ್ರವನ್ನು ಕಡ್ಡಾಯಗೊಳಿಸಲಾಗಿದೆ.


Spread the love

LEAVE A REPLY

Please enter your comment!
Please enter your name here