ಕೊಡಗಿನ ಬೆಡಗಿ ನಟಿ ರಶ್ಮಿಕಾ ಮಂದಣ್ಣ ಚಿತ್ರರಂಗಕ್ಕೆ ಎಂಟ್ರಿಕೊಟ್ಟು ಹಲವು ವರ್ಷಗಳೆ ಕಳೆದಿದೆ. ಕಿರಿಕ್ ಪಾರ್ಟಿ ಸಿನಿಮಾದ ಮೂಲಕ ಸಿನಿ ಜರ್ನಿ ಆರಂಭಿಸಿದ ನಟಿ ಸದ್ಯ ದಕ್ಷಿಣ ಭಾರತ ಚಿತ್ರರಂಗದ ಬಹುಬೇಡಿಕೆಯ ನಟಿ. ಈ ಹಿಂದೆ ‘ಛಾವ’ ಸಿನಿಮಾದ ಇವೆಂಟ್ನನಲ್ಲಿ ‘ನಾನು ಹೈದರಾಬಾದ್ ಮೂಲದವಳು’ ಎಂದು ಹೇಳಿ ಕನ್ನಡಿಗರ ಕೆಂಗಣ್ಣೀಗೆ ಗುರಿಯಾಗಿದ್ದರು. ಇದೀಗ ಕರವೇ ರಾಜ್ಯಾಧ್ಯಕ್ಷ ಟಿಎ ನಾರಾಯಣ ಗೌಡ ಕೂಡ ಆ ಕುರಿತು ಮಾತನಾಡಿದ್ದು, ರಶ್ಮಿಕಾ ಹೇಳಿಕೆಯನ್ನು ತೀವ್ರಗಾಗಿ ಖಂಡಿಸಿದ್ದಾರೆ.
‘ನಾನು ಇತ್ತೀಚೆಗೆ ಆಂಧ್ರ ಪ್ರದೇಶದಲ್ಲಿ ನಡೆದ ಒಂದು ಕಾರ್ಯಕ್ರಮವನ್ನು ವೀಕ್ಷಣೆ ಮಾಡುತ್ತಿದೆ. ಅದು ಚಲನಚಿತ್ರಕ್ಕೆ ಸಂಬಂಧ ಪಟ್ಟ ಕಾರ್ಯಕ್ರಮ. ಅದರಲ್ಲಿ ಕೊಡಗಿನ ಹೆಣ್ಣುಮಗಳು, ಕನ್ನಡದಿಂದ ಪರಿಚಯವಾಗಿ ರಾಷ್ಟ್ರದ ಬೇರೆ ಬೇರೆ ಭಾಷೆಯಲ್ಲಿ ಸಿನಿಮಾ ಮಾಡುತ್ತಿರುವವಳು, ಅಪ್ಪಟ ಕನ್ನಡದ ಹೆಣ್ಮಗಳು ರಶ್ಮಿಕಾ ಮಂದಣ್ಣ ತಾನು ಆಂಧ್ರಪ್ರದೇಶದವಳು ಅಂತ ಹೇಳಿಕೆ ನೀಡದಳು. ನೀವು ಒಂದಷ್ಟು ಚಿಗುರಿದ ಬಳಿಕ, ನಿಮಗೆ ಬೇರೆ ಬೇರೆ ಭಾಷೆಯಲ್ಲಿ ಒಂದಷ್ಟು ಅವಕಾಶ ಸಿಕ್ಕ ಕೂಡಲೇ ಕನ್ನಡದ ನಾಡನ್ನು ಮರೆಯುತ್ತೀರಿ’ ಎಂದು ನಾರಾಯಣ ಗೌಡ ಹೇಳಿದ್ದಾರೆ.
‘ಈ ನೆಲದ ಭಾಷೆ, ಸಂಸ್ಕೃತಿ ಬಗ್ಗೆ ನಿಮಗೆ ಗೌರವ ಇರಬೇಕು. ನೀವು ಎಷ್ಟೇ ದೊಡ್ಡ ವ್ಯಕ್ತಿಗಳಾಗಿ ಬೆಳೆದರೂ ಸಹ ಈ ನೆಲದ ಋಣವನ್ನು ತೀರಿಸಬೇಕು. ಕುವೆಂಪು ಹೇಳಿದ ಹಾಗೆ ಎಲ್ಲಾದರೂ ಇರು ಎಂತಾದರೂ ಇರು ಎಂದೆಂದಿಗೂ ನೀ ಕನ್ನಡವಾಗಿರು ಎಂಬುದನ್ನು ಇನ್ಮೇಲಾದರೂ ಚೆನ್ನಾಗಿ ಅರ್ಥ ಮಾಡಿಕೊಳ್ಳಿ’ ಎಂದು ರಶ್ಮಿಕಾ ಮಂದಣ್ಣರನ್ನುದ ನಾರಾಯಣ ಗೌಡ ತರಾಟೆಗೆ ತೆಗೆದುಕೊಂಡಿದ್ದಾರೆ.