ಬೆಂಗಳೂರು:- ಸಿಎಂ ಸ್ಥಾನದಿಂದ ಸಿದ್ದರಾಮಯ್ಯ ಅವರೇ ಬಿಟ್ಟು ಹೋಗುವಂತೆ ಡಿಕೆಶಿ ಮಾಡ್ತಾರೆ ಎಂದು ವಿಪಕ್ಷ ನಾಯಕ ಆರ್ ಅಶೋಕ್ ಹೇಳಿದ್ದಾರೆ.
ಮಾಜಿ ಸಿಎಂ ವೀರಪ್ಪ ಮೊಯ್ಲಿ ಹೇಳಿಕೆ ಕುರಿತು ಮಾತನಾಡಿದ ಅಶೋಕ್, ಮೊಯ್ಲಿಯವರ ಅಬ್ಬರದ ಭಾಷಣ ನೋಡಿದ್ದೇನೆ. ಡಿಕೆಶಿ ಸಿಎಂ ಆಗೋದನ್ನು ಯಾರಿಂದಲೂ ತಪ್ಪಿಸಲು ಆಗಲ್ಲ ಅಂದಿದ್ದಾರೆ. ಆಗ ಡಿಕೆಶಿ ಮೊಗದಲ್ಲಿ ಹಾಲಿನ ಮಳೆಯೋ, ಜೇನಿನ ಹೊಳೆಯೋ ಎನ್ನುವಂತಹ ಖುಷಿ ಇತ್ತು ಎಂದರು.
ಇದು ಸಿದ್ದರಾಮಯ್ಯ ಅವರ ಲಾಸ್ಟ್ ಬಜೆಟ್ ಆಗಬಹುದು. ಲಾಸ್ಟ್ ಆದರೂ ಲೀಸ್ಟ್ ಅಲ್ಲ. ಅತೀ ಹೆಚ್ಚು ಸಾಲಮಾಡಿ ಡಿಕೆಶಿಗೆ ಬಿಟ್ಟು ಹೋಗಬಹುದು. ಸಿದ್ದರಾಮಯ್ಯ ಇರುತ್ತಾರೋ, ಹೋಗುತ್ತಾರೆ ಎನ್ನುವ ಎಪಿಸೋಡ್ ಕಳೆದ 2 ವರ್ಷಗಳಿಂದ ನಡೆಯುತ್ತಲೇ ಇದೆ ಎಂದು ಹೇಳಿದರು.
ಮೊಯ್ಲಿಯವರು ಮಾಜಿ ಸಿಎಂ, ಮಾಜಿ ಕೇಂದ್ರ ಸಚಿವ ಆಗಿದ್ದವರು. ಅವರಿಗೆ ಪವರ್ ಶೇರ್ ಒಪ್ಪಂದದ ಬಗ್ಗೆ ಗೊತ್ತಿದೆ. ಹಾಗಾಗಿ ಧೈರ್ಯವಾಗಿ ಮೊಯ್ಲಿ ಹಾಗೆ ಹೇಳಿದ್ದಾರೆ. ಆದರೆ ಸಿದ್ದರಾಮಯ್ಯ ನಾನೇ ಸಿಎಂ ಅಂತಿದ್ದಾರೆ. ನಾವು ಮಾತನಾಡಿದರೆ ಜಾತಕ ಹೇಳುತ್ತಾರೆ ಅಂತಾರೆ. ಹಾಗಾದರೆ ಶನಿಬಲ, ಗುರುಬಲ ಯಾಕೆ ಕೇಳುತ್ತಾರೆ. ಕೋಡಿ ಮಠದ ಸ್ವಾಮೀಜಿ ಸಹ ಸಿದ್ದರಾಮಯ್ಯ ಸುಲಭಕ್ಕೆ ಅಧಿಕಾರ ಕೊಡಲ್ಲ ಅಂದಿದ್ದಾರೆ. ಸಿಎಂ ಸ್ಥಾನ ಸಾಕಪ್ಪ ಅಂತ ಖುದ್ದು ಸಿದ್ದರಾಮಯ್ಯ ಅವರೇ ಅಧಿಕಾರ ಬಿಟ್ಟು ಹೋಗುವಂತೆ ಡಿಕೆಶಿ ಮಾಡುತ್ತಾರೆ ಎಂದರು.