ಕರ್ನಾಟಕ ನನಗೆ ಗೊತ್ತಿಲ್ಲ, ಹೈದ್ರಾಬಾದ್​ನಲ್ಲಿದೆ ನನ್ನ ಮನೆ ಎಂದ್ರಾ ‘ಕಿರಿಕ್’ ನಟಿ: ರಶ್ಮಿಕಾ ವಿರುದ್ಧ ರವಿ ಗಣಿಗ ಕಿಡಿ!

0
Spread the love

ಬೆಂಗಳೂರು:- ನ್ಯಾಷನಲ್ ಕ್ರಷ್ ರಶ್ಮಿಕಾ ಮಂದಣ್ಣ ವಿರುದ್ಧ ಕಾಂಗ್ರೆಸ್ ಶಾಸಕ ರವಿ ಗಣಿಗ ಹಿಗ್ಗಾಮುಗ್ಗಾ ವಾಗ್ದಾಳಿ ಮಾಡಿದ್ದಾರೆ.

Advertisement

ಸಿನಿಮಾದವರಿಗೆ ಡಿಕೆಶಿ ವಾರ್ನ್ ವಿಚಾರವಾಗಿ ಮಾತನಾಡಿದ ರವಿ ಗಣಿಗ ಅವರು ಡಿಕೆ ಶಿವಕುಮಾರ್ ಹೇಳಿಕೆ ಸಮರ್ಥಿಸಿಕೊಂಡಿದ್ದಾರೆ. ಸಿನಿಮಾದವರಿಗೆ ಜವಾಬ್ದಾರಿ ಇಲ್ಲ ಎಂದಿದ್ದಾರೆ. ಕಳೆದ ವರ್ಷ ಸಿನಿಮೋತ್ಸವ ಉದ್ಘಾಟನೆಗೆ ರಶ್ಮಿಕಾಗೆ ಆಹ್ವಾನ ನೀಡಲಾಗಿತ್ತಂತೆ. ನಮ್ಮ ಜನರು ಹತ್ತು ಬಾರಿ ಅವರ ಮನೆಗೆ ಅಲೆದಾಡಿದ್ರು. ಆದ್ರೆ ಅವರು ಬರಲಿಲ್ಲ.

ರಶ್ಮಿಕಾ ಚಿತ್ರರಂಗಕ್ಕೆ ಕಾಲಿಟ್ಟಿದ್ದು ಕನ್ನಡದ ಕಿರಿಕ್ ಪಾರ್ಟಿ ಸಿನಿಮಾದಿಂದ. ಕಳೆದ ಬಾರಿ ಚಲನಚಿತ್ರೋತ್ಸವಕ್ಕೆ ಕರೆದಿದ್ದೆವು. ಆದರೆ ನಾನು ಇರೋದು ಹೈದರಾಬಾದ್​​ನಲ್ಲಿ. ನನ್ನ ಮನೆ ಇಲ್ಲೇ ಇದೆ. ಕರ್ನಾಟಕ ಎಲ್ಲಿದೆ ನನಗೆ ಗೊತ್ತಿಲ್ಲ. ನನಗೆ ಟೈಮ್ ಇಲ್ಲ, ನಾನು ಬರಲ್ಲ ಎಂದು ರಶ್ಮಿಕಾ ಹೇಳಿದ್ರು. ಇದನ್ನೆಲ್ಲಾ ನೋಡಿ ಸುಮ್ನೆ ಇರ್ಬೇಕಾ ಎಂದು ಶಾಸಕ ರವಿ ಗಣಿಗ ಕಿಡಿಕಾರಿದ್ರು.

‘ನಮ್ಮ ಶಾಸಕರು ರಶ್ಮಿಕಾ ಮನೆಗೆ ಹೋಗಿ ಹತ್ತಾರು ಬಾರಿ ಕರೆದ್ರೂ ಬರಲಿಲ್ಲ. ಇಷ್ಟೊಂದು ಉದ್ಧಟತನ ತೋರಿಸುತ್ತಿದ್ದಾರೆ. ಕನ್ನಡದಿಂದಲೇ ಬೆಳೆದ ಇವರೆಲ್ಲಾ ಕನ್ನಡದ ಬಗ್ಗೆ ಉದ್ಧಟತನ ತೋರುತ್ತಾ ಇದ್ದಾರೆ. ಇವರಿಗೆ ಬುದ್ಧಿ ಕಲಿಸಬೇಕೋ ಬೇಡವೋ? ನಾನು ಸಿಎಂ ಹಾಗೂ ಡಿಸಿಎಂಗೆ ಪತ್ರ ಬರೆಯುತ್ತೇನೆ. ಸಿನಿಮಾದವರಿಗೆ ನೀಡಿರೋ ಸಬ್ಸಿಡಿಯನ್ನು ಪರಾಮರ್ಶಿಸಬೇಕು ಎಂದು ಪತ್ರಬರೆಯುತ್ತೇನೆ’ ಎಂದು ರವಿ ಗಣಿಗ ಹೇಳಿದ್ದಾರೆ.


Spread the love

LEAVE A REPLY

Please enter your comment!
Please enter your name here