ಕಲಬುರ್ಗಿ:- ಕಲಬುರಗಿಯ ಮಹಾದೇವ ನಗರದಲ್ಲಿ ನವವಿವಾಹಿತ ನೇಣಿಗೆ ಶರಣಾಗಿದ್ದು, ಪತ್ನಿಯ ಕಿರುಕುಳ ಆರೋಪ ಕೇಳಿ ಬಂದಿದೆ.
Advertisement
30 ವರ್ಷದ ಆಳಂದದ ರಾಕೇಶ್ ಮೃತ ದುರ್ದೈವಿ. ಕಳೆದ 4 ತಿಂಗಳ ಹಿಂದೆ ಹಿರಿಯರ ಸಮ್ಮುಖದಲ್ಲಿ ರಾಕೇಶ್ ಮದುವೆಯಾಗಿತ್ತು. ಮದುವೆ ಬಳಿಕ ಮನೆ ಕೆಲಸ ಸೇರಿ ಇತರೆ ವಿಷಯಗಳಿಗೆ ರಾಕೇಶ್ಗೆ ಪತ್ನಿ ನಿತ್ಯ ಕಿರುಕುಳ ಕೊಡುತ್ತಿದ್ದಳು ಎಂದು ಆರೋಪಿಸಲಾಗಿದೆ.
ಮಾತು ಕೇಳದೇ ಇದ್ದರೆ ಪೊಲೀಸರಿಗೆ ದೂರು ಕೊಡುವುದಾಗಿ ಪದೇ ಪದೇ ಬೆದರಿಕೆ ಹಾಕುತ್ತಿದ್ದಳು. ಇದೇ ಕಾರಣಕ್ಕೆ ಕಿರುಕುಳ ತಾಳಲಾರದೇ ನೇಣು ಬಿಗಿದುಕೊಂಡ ರಾಕೇಶ್ ಆತ್ಮಹತ್ಯೆಗೆ ಶರಣಾಗಿದ್ದಾನೆ ಎಂದು ಆರೋಪಿಸಲಾಗಿದೆ.
ಘಟನೆ ಸಂಬಂಧ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.