ವಿಜಯಸಾಕ್ಷಿ ಸುದ್ದಿ, ಗದಗ: ಜನರ ನಡುವೆ ಜನತಾ ಪ್ರಣಾಳಿಕೆಯ ಚರ್ಚೆಯ ಕಾರ್ಯಕ್ರಮವು ಮಾರ್ಚ್ 5ರಂದು ಗದುಗಿನ ಡಾ. ಬಿ.ಆರ್. ಅಂಬೇಡ್ಕರ ಸಭಾಭವನದಲ್ಲಿ ನಡೆಸಲಾಗುವುದು ಎಂದು ಆಲ್ ಇಂಡಿಯಾ ಬಹುಜನ ಸಮಾಜ ಪಾರ್ಟಿ ಗದಗ ಜಿಲ್ಲಾ ಘಟಕದ ಅಧ್ಯಕ್ಷ ಬಸವರಾಜ ಯಲ್ಲಪ್ಪ ನವಲಗುಂದ ತಿಳಿಸಿದರು.
ನವ ಕರ್ನಾಟಕ ನಿರ್ಮಾಣ ಆಂದೋಲನ ಸಮಿತಿ ಆಶ್ರಯದಲ್ಲಿ ನಗರದ ಪತ್ರಿಕಾ ಭವನದಲ್ಲಿ ವಿವಿಧ ಪ್ರಗತಿಪರ ಸಂಘಟನೆಗಳ ಮುಖಂಡರೊಂದಿಗೆ ಸುದ್ದಿಗೋಷ್ಠಿ ನಡೆಸಿ ಅವರು ಮಾತನಾಡುತ್ತಿದ್ದರು.
ಈ ಕಾರ್ಯಕ್ರಮಕ್ಕೆ ವಿವಿಧ ರಾಜಕೀಯ ಮುಖಂಡರು, ದಲಿತ, ರೈತ, ಕಟ್ಟಡ ಕಾರ್ಮಿಕ, ಕೂಲಿ ಕಾರ್ಮಿಕ, ಪರಿಸರ ಹೋರಾಟಗಾರರು ಕನ್ನಡ ಸಂಘಟನೆಗಳು, ದಲಿತ ಸಂಘಟನೆಗಳು, ವರ್ತಕರು, ಸಾಹಿತಿಗಳು, ಈ ಸಮಾರಂಭದಲ್ಲಿ ಪಾಲ್ಗೊಳ್ಳಲಿದ್ದಾರೆ. ಮಾಜಿ ಕೇಂದ್ರ ಸಚಿವರಾದ ಸಿ.ಎಂ. ಇಬ್ರಾಹಿಂ, ಮಾಜಿ ರಾಜ್ಯ ಸಚಿವರಾದ ಬಿ.ಟಿ. ಲಲಿತಾ ನಾಯಕ, ಕರ್ನಾಟಕ ರಾಜ್ಯ ರೈತ ಸಂಘ ಹಸಿರು ಸೇನೆಯ ಅಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ, ರಾಷ್ಟ್ರೀಯ ಆಲ್ ಇಂಡಿಯಾ ಬಹುಜನ ಸಮಾಜ ಪಾರ್ಟಿ ಸಂಯೋಜಕ ಗೋಪಿನಾಥ ಜಿ., ಆಲ್ ಇಂಡಿಯಾ ಬಹುಜನ ಸಮಾಜ ಪಾರ್ಟಿ ಕರ್ನಾಟಕ ರಾಜ್ಯ ಘಟಕದ ಅಧ್ಯಕ್ಷ ಮಾರಚಂದ್ರ ಮುನಿಯಪ್ಪ, ಎಐಬಿಎಸ್ ರಾಜ್ಯ ಸಂಯೋಜಕ ಆರ್. ಮುನಿಯಪ್ಪ, ಡಿ.ಎಸ್.ಎಸ್ನ ಪಿ.ಎನ್. ಮೂರ್ತಿ ಸೇರಿದಂತೆ ಪ್ರಮುಖರಾದ ಮೋಹನರಾಜ, ಪುಟ್ಟರಾಜು, ಎಚ್.ಡಿ. ಬಸವರಾಜ, ಶಿವರಾಂ, ಆರ್.ಎಮ್.ಎನ್. ರಮೇಶ, ಡಾ. ದಸ್ತಗಿರಿ ಮುಲ್ಲಾ ಮುಂತಾದವರು ಪಾಲ್ಗೊಳ್ಲಲಿದ್ದು, ಕಾರ್ಯಕ್ರಮವನ್ನು ಅರ್ಥಗರ್ಭಿತವಾಗಿ ನಡೆಸಲಾಗುವುದು ಎಂದು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಶಂಕರಗೌಡ ಜಯನಗೌಡ, ಮಂಜುನಾಥ ಬುರ್ಲಿ, ಬಸವರಾಜ ವಡ್ಡರ, ಶಿವಯ್ಯ ಶಶಿಮಠ, ಯಮನಪ್ಪ ಭಜಂತ್ರಿ, ಬಸಪ್ಪ ವಡ್ಡರ, ಶಿವಕುಮಾರ ಅಳವಂಡಿ, ಕುಮಾರಸ್ವಾಮಿ ಅಳವಂಡಿ, ರಿಯಾಜ ಹೊಸಪೇಟೆ ಮುಂತಾದವರು ಉಪಸ್ಥಿತರಿದ್ದರು.