ರೆಬೆಲ್ ಸ್ಟಾರ್ ಅಂಬರೀಶ್ ಅಗಲಿ 6-7 ವರ್ಷ ಕಳೆಯುತ್ತಿದೆ. ಅಂಬಿ ಈ ಹಿಂದೆ ಯಶ್ ಮಗಳಿಗೆ ಗಿಫ್ಟ್ ಆಗಿ ನೀಡಿದ್ದ ತೊಟ್ಟಿಲು ಸಖತ್ ವೈರಲ್ ಆಗಿತ್ತು. ತಮ್ಮ ಮೊಮ್ಮಕ್ಕಳಿಗೂ ಅದೇ ತೊಟ್ಟಿಲು ಬಳಸಬೇಕು ಎಂದು ಆಸೆ ಪಟ್ಟಿದ್ದರಂತೆ ಹೀಗಾಗಿ ಅಂಬಿ ಮೊಮ್ಮಗನಿಗೂ ಕಲಘಟಗಿ ತೊಟ್ಟಿಲು ರೆಡಿಯಾಗಿ ಬಂದಿದೆ. ರೆಬಲ್ ಸ್ಟಾರ್ ಅಂಬರೀಶ್ ಹಾಗೂ ನಟಿ ಸುಮಲತಾ ಅವರ ಮೊಮ್ಮಗ, ಅಭಿಷೇಕ ಅಂಬರೀಶ್ ಅವರ ಮಗನ ನಾಮಕರಣ ಸಮಾರಂಭ ಮಾ.14ರಂದು ನಿಗದಿಯಾಗಿದ್ದು,
ಇದಕ್ಕಾಗಿ ಕಲಘಟಗಿಯಲ್ಲಿ ವಿಶೇಷ ತೊಟ್ಟಿಲೊಂದು ಸಿದ್ಧವಾಗಿದೆ. ಸಾವಕಾರ ಅವರ ಮನೆಯಲ್ಲಿ ಪುಟ್ಟ ಅಲಂಕೃತ ತೊಟ್ಟಿಲು ಸಿದ್ಧವಾಗಿದ್ದು, ಸದ್ಯದಲ್ಲೇ ಅಂಬರೀಶ ಅವರ ಮನೆ ಸೇರಲಿದೆ. ಈ ಮೊದಲು ಡಾ. ರಾಜಕುಮಾರ್, ಯಶ್ ಅವರ ಮನೆಗೆ ಕಲಘಟಗಿ ತೊಟ್ಟಿಲು ಹೋಗಿದ್ದವು.
ಹೌದು ಯಶ್ ಮಗಳಿಗೆ ಕಲಘಟಗಿ ತೊಟ್ಟಿಲು ಮಾಡಿಸಿಕೊಟ್ಟಿದ್ದ ರೆಬೆಲ್ ಸ್ಟಾರ್ ಅಂಬರೀಷ್ ಇದು ಅಂಬಿ ಆಸೆಯೂ ಆಗಿತ್ತು. ಮಗನಿಗೆ ಮಗುವಾದಾಗ ಇದೇ ತೊಟ್ಟಿಲಲ್ಲೇ ಮಗುವನ್ಮ ಮಲಗಿಸಿ ತೋಗಿಸಬೇಕೆಂದು.. ಆ ಮಾತನ್ನ ನೆನಪಿನಲ್ಲಿಟ್ಟುಕೊಂಡು.. ರಾಕಿಂಗ್ ಸ್ಟಾರ್ ಯಶ್ ಅಭಿಷೇಕ್ ಅಂಬರೀಷ್ ಮಗನ ನಾಮಕರಣಕ್ಕೆ ಆ ಅವಿಸ್ಮರಣೀಯ ಉಡುಗೊರೆಯನ್ನ ನೀಡಿದ್ದಾರೆ.ಅದೇ ತೊಟ್ಟಿಲು ಈಗ ಅಂಬಿ ಮನೆ ಸೇರಿದೆ..
ಇನ್ನೂ ಆರಗು ಮತ್ತು ನೈಸರ್ಗಿಕ ಬಣ್ಣ ಮಿಶ್ರಣ ಮಾಡಿ ತೊಟ್ಟಲಿನ ಮೇಲೆ ಚಿತ್ರಗಳನ್ನು ಬರೆದಿರುವುದು ಮತ್ತು ತೊಟ್ಟಿಲಿನ ಮೇಲೆ ಕೃಷ್ಣಾವತಾರ, ದಶಾವತಾರ, ರಾಮಾಯಣ, ತೊಟ್ಟಿಲಿನಲ್ಲಿ ಮಲಗಿದ ಮಗು ದೇವರ ಸನ್ನಿಧಾನದಲ್ಲಿ ಇರುವ ಚಿತ್ರವಿರುವುದು ವಿಶೇಷವಾಗಿದೆ.