ನೆಲಮಂಗಲ: ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ರಾಷ್ಟ್ರೀಯ ಹೆದ್ದಾರಿ ಬಳಿ ದ್ರಾಕ್ಷಿ ತುಂಬಿದ ಬುಲೆರೊ ವಾಹನ ಅಪಘಾತಕ್ಕೀಡಾಗಿದೆ. ಘಟನೆಯಿಂದ ವಾಹನದಲ್ಲಿದ್ದ ದ್ರಾಕ್ಷಿಯೆಲ್ಲಾ ರಸ್ತೆಯಲ್ಲಿ ಚೆಲ್ಲಾಪಿಲ್ಲಿಯಾಗಿದ್ದು, ರೈತ ಕಂಗಾಲಾಗಿದ್ದಾನೆ.
Advertisement
ಇನ್ನೂ ರಸ್ತೆಯಲ್ಲಿ ಚೆಲ್ಲಾಪಿಲ್ಲಿಯಾದ ದ್ರಾಕ್ಷಿ ಕಂಡು ನಾ ಮುಂದು ತಾ ಮುಂದು ಎಂದು ದ್ರಾಕ್ಷಿಯನ್ನು ಜನತೆ ಹೊತ್ತೊಯ್ದಿದ್ದಾರೆ. ಅಪಘಾತ ಹಿನ್ನೆಲೆಯಲ್ಲಿ ರಾಷ್ಟ್ರೀಯ ಹೆದ್ದಾರಿಯಲ್ಲಿ ವಾಹನ ದಟ್ಟಣೆ ಉಂಟಾಗಿತ್ತು.
ಘಟನೆಯಲ್ಲಿ ತುಮಕೂರು ಮಾರ್ಗದಲ್ಲಿ ಬೆಂಗಳೂರು ನಗರಕ್ಕೆ ಬರುತ್ತಿದ್ದ ಬುಲೆರೋ ವಾಹನ ಚಾಲಕನಿಗೆ ಗಾಯವಾಗಿದೆ. ಸ್ಥಳಕ್ಕೆ ನೆಲಮಂಗಲ ಸಂಚಾರಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ.