ವಿಜಯಸಾಕ್ಷಿ ಸುದ್ದಿ, ಗದಗ: ಇಲ್ಲಿ ಎಸ್.ಎಮ್. ಕೃಷ್ಣ ನಗರದ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ ನಂ. 12ರಲ್ಲಿ ಇತ್ತೀಚೆಗೆ ರಾಷ್ಟ್ರೀಯ ವಿಜ್ಞಾನ ದಿನದ ಅಂಗವಾಗಿ ವಿಜ್ಞಾನ ಪ್ರಯೋಗ ಪ್ರದರ್ಶನ, ಪಾಠೋಪಕರಣ ಪ್ರದರ್ಶನ ಮತ್ತು ಚಿತ್ರಕಲಾ ಪ್ರದರ್ಶನವನ್ನು ಏರ್ಪಡಿಸಲಾಗಿತ್ತು.
ಉದ್ಘಾಟನಾ ಸಮಾರಂಭದಲ್ಲಿ ಶಾಲೆಯ ಎಸ್.ಡಿ.ಎಮ್.ಸಿ. ಅಧ್ಯಕ್ಷ ಬಸವರಾಜ ಕಡೇಮನಿ, ಧುರೀಣರಾದ ಅನಿಲ ಸಿದ್ದಮ್ಮನಹಳ್ಳಿ, ಗಣ್ಯರಾದ ಎಲ್.ಎಮ್. ಮುಲ್ಲಾನವರ, ಪ್ರೌಢಶಾಲೆಯ ಮುಖ್ಯೋಪಾಧ್ಯಾಯ ಎಸ್.ಸಿ. ನಾಗರಳ್ಳಿ, ಕಸಾಪ ಅಧ್ಯಕ್ಷರಾದ ವಿವೇಕಾನಂದಗೌಡ ಪಾಟೀಲ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷರಾದ ಎಸ್.ಕೆ. ಮಂಗಳಗುಡ್ಡ, ಶಾಲೆಯ ಮುಖ್ಯೋಪಾಧ್ಯಾಯರಾದ ಎಚ್.ಆರ್. ಕೋಣಿಮನಿ, ಎಸ್.ಡಿ.ಎಮ್.ಸಿ. ಸದಸ್ಯರು ಇದ್ದರು.
ಈ ಸಂದರ್ಭದಲ್ಲಿ ಶಾಲೆಯ ಶಿಕ್ಷಕರಾದ ಎಮ್.ಕೆ. ಹುಯಿಲಗೋಳ, ಜಗದೀಶ ಶೀಲವಂತ, ಚಾಮರಾಜ ಹುಡೇದ, ಶರಣಪ್ಪ ವಕ್ಕಳದ, ಎಸ್.ಬಿ. ಮುಳಗುಂದ, ಎಮ್.ಎಚ್. ಬಳಬಟ್ಟಿ, ಎಸ್.ಬಿ. ಕನಕೆ ಮುಂತಾದವರಿದ್ದರು.