ರಶ್ಮಿಕಾ ಮಂದಣ್ಣ ಪರ ನಿಂತ ಸ್ಯಾಂಡಲ್‌ ವುಡ್‌ ಕ್ವೀನ್‌ ರಮ್ಯಾ

0
Spread the love

ಖ್ಯಾತ ನಟಿ ರಶ್ಮಿಕಾ ಮಂದಣ್ಣ ಒಂದಲ್ಲ ಒಂದು ಕಾರಣಕ್ಕೆ ಟ್ರೋಲಿಗರ ಕೆಂಗಣ್ಣಿಗೆ ಗುರಿಯಾಗುತ್ತಿರುತ್ತಾರೆ. ಆಕೆ ಏನೆ ಮಾಡಿದ್ರು ನೆಟ್ಟಿಗರು ಆಕೆಯನ್ನ ಟ್ರೋಲ್‌ ಮಾಡ್ತಾನೆ ಇರ್ತಾರೆ. ರಶ್ಮಿಕಾ ಮಂದಣ್ಣಗೆ ಬುದ್ಧಿ ಕಲಿಸಬೇಕು ಎಂದ ಶಾಸಕ ರವಿ ಗಣಿಗ ಹೇಳಿಕೆಗೆ ತಿರುಗೇಟು ರಮ್ಯಾ ನೀಡಿದ್ದು ರಶ್ಮಿಕಾ ಮಂದಣ್ಣ ಪರವಾಗಿ ಮಾತನಾಡಿದ್ದಾರೆ.

Advertisement

16ನೇ ಬೆಂಗಳೂರು ಚಲನಚಿತ್ರೋತ್ಸವದಲ್ಲಿ ಮಾತನಾಡಿದ ರಮ್ಯಾ, ರಶ್ಮಿಕಾರನ್ನ ಪ್ರಾರಂಭದ ದಿನಗಳಿಂದಲೂ ಟ್ರೋಲ್ ಮಾಡ್ತಿರುವ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಅಲ್ಲದೇ ರಶ್ಮಿಕಾ ಹೈದರಾಬಾದ್‌ನಲ್ಲಿ ಮನೆಯನ್ನ ಮಾಡಿರಬಹುದು. ಅದಕ್ಕೆ ಹಾಗೆ ಹೇಳಿರಬಹುದು ಎಂದು ರಮ್ಯಾ ಹೇಳಿದ್ದಾರೆ. ಇತ್ತೀಚೆಗೆ ಕಾರ್ಯಕ್ರಮವೊಂದರಲ್ಲಿ ಭಾಗಿಯಾಗಿದ್ದ ರಶ್ಮಿಕಾ ತಾನು ಹೈದರಾಬಾದ್‌ ನವಳು ಎಂದು ಹೇಳಿ ಸಾಕಷ್ಟು ಟೀಕೆಗೆ ಗುರಿಯಾಗಿದ್ದರು.

ವಿಧಾನಸೌಧ ಶಾಸಕ ಗಣಿಗ ರವಿ ಅವರು ಸಿನಿಮಾದವರು ಬಾಯಿಮುಚ್ಚಿಕೊಂಡು ಇರಬೇಕು. ರಶ್ಮಿಕಾ ಮಂದಣ್ಣ ‘ಕಿರಿಕ್ ಪಾರ್ಟಿ’ ಸಿನಿಮಾದಿಂದ ಬೆಳೆದವರು. ಅವರನ್ನು ಕಳೆದ ವರ್ಷ ಚಲನಚಿತ್ರೋತ್ಸವಕ್ಕೆ ಆಹ್ವಾನ ಮಾಡಿದ್ವಿ. ಆದರೆ ನಾನು ಹೈದರಾಬಾದ್‌ನಲ್ಲಿ ಇರೋದು, ನನಗೆ ಟೈಂ ಇಲ್ಲ, ಬರಲ್ಲ ಎಂದು ಹೇಳಿದ್ದರು. ಇವರಿಗೆ ಬುದ್ದಿ ಕಲಿಸಬೇಕಲ್ವಾ? ಎಂದು ಕೆಂಡಕಾರಿದರು. ಇದೇ ವಿಚಾರದ ಬಗ್ಗೆ ರಶ್ಮಿಕಾ ಮಂದಣ್ಣ ಪರ ರಮ್ಯಾ ಮಾತನಾಡಿದ್ದಾರೆ.


Spread the love

LEAVE A REPLY

Please enter your comment!
Please enter your name here