ವಿಜಯಸಾಕ್ಷಿ ಸುದ್ದಿ, ಮುಳಗುಂದ: ಮಕ್ಕಳಲ್ಲಿ ಕನಿಷ್ಠ ಜ್ಞಾನಾರ್ಜನೆ ಬೆಳೆಸುವುದು ಎಫ್‌ಎಲ್‌ಎನ್ ಕಲಿಕಾ ಹಬ್ಬದ ಉದ್ದೇಶ ಎಂದು ಶಿಕ್ಷಣ ಇಲಾಖೆಯ ಗದಗ ಜಿಲ್ಲಾ ಉಪನಿರ್ದೇಶಕ ಆರ್.ಎಸ್. ಬುರಡಿ ಹೇಳಿದರು.
ಅವರು ಪಟ್ಟಣ ಸಮೀಪದ ಬೆಳದಡಿ ಕ್ಲಸ್ಟರ್ ಮಟ್ಟದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಬೆಳದಡಿಯಲ್ಲಿ ಜರುಗಿದ ಎಫ್‌ಎಲ್‌ಎನ್ ಕಲಿಕಾ ಹಬ್ಬ ಉದ್ಘಾಟಿಸಿ ಮಾತನಾಡಿ, 2024/25ನೇ ಸಾಲಿನಲ್ಲಿ ಓದುತ್ತಿರುವ ಎಲ್ಲಾ ಮಕ್ಕಳಲ್ಲಿ ಕಲಿಕೆಯನ್ನು ಗಟ್ಟಿಗೊಳಿಸುವ ಉದ್ದೇಶ ಶಿಕ್ಷಣ ಇಲಾಖೆದ್ದಾಗಿದೆ. ಮಕ್ಕಳಲ್ಲಿ ಕಲಿಕಾ ಬಲವರ್ಧನೆ ಹಾಗೂ ಸಂಖ್ಯಾ ಅಧ್ಯಯನ ಮಾಡುವುದಲ್ಲದೇ ಮಕ್ಕಳಲ್ಲಿ ಕನಿಷ್ಠ ಜ್ಞಾನಾರ್ಜನೆಯನ್ನು ಬೆಳೆಸುವುದು, ಪದಗಳ ಜೋಡಣೆ ಮಾಡಿ ಓದುವಂತೆ ಮಾಡುವುದು ಉದ್ದೇಶವಾಗಿದ್ದು, ಎಲ್ಲಾ ಮಕ್ಕಳು ಸತತ ಅಭ್ಯಾಸದಲ್ಲಿ ತೊಡಗಿಕೊಳ್ಳುವುದರಿಂದ ಮಕ್ಕಳ ಭವಿಷ್ಯ ಉಜ್ವಲಗೊಳ್ಳುತ್ತದೆ ಎಂದರು.
ಗದಗ ಗ್ರಾಮೀಣ ಕ್ಷೇತ್ರ ಶಿಕ್ಷಣಾಧಿಕಾರಿ ವಿ.ವಿ. ನಡುವಿನಮನಿ, ಬೆಳದಡಿ ಗ್ರಾ.ಪಂ ಅಧ್ಯಕ್ಷ ಶಂಕ್ರಣ್ಣಾ ಹೊಸಮನಿ, ಬಸವರಾಜ ಪೂಜಾರ, ಲಕ್ಷ್ಮವ್ವ ಮುಂದಿಲಮನಿ, ಶಾರದಾ ಇನಾಮತಿ, ಪಾರ್ವತಿ ಗುಡಿಮನಿ, ಶಂಭುಲಿAಗಯ್ಯ ಕಲ್ಮಠ, ಶ್ರೀದೇವಿ ಕಮ್ಮಾರ, ಬಸಮ್ಮಾ ವಿರಾಪೂರ, ರಾಜೇಶ ಇನಾಮತಿ, ಲಕ್ಷ್ಮಿ ಯಡಿಯಾಪೂರ, ತಿಪ್ಪಣ್ಣಾ ಹದ್ದಣ್ಣವರ, ವಿ.ಎಂ. ಹಿರೇಮಠ, ಎಸ್.ಆರ್. ಬಂಡಿ, ಟಿ.ಬಿ. ಹಡಪದ, ಎಸ್.ಎಚ್. ಪಾಟೀಲ್, ಸಿಆರ್‌ಪಿ ಚಂದ್ರಶೇಖರ ಪಾಟೀಲ್, ಎಂ.ಎಂ. ನಿಂಬನಾಯ್ಕರ್ ಇದ್ದರು.