ಚಿಕ್ಕಮಗಳೂರು:- ಜಿಲ್ಲೆಯ ಕಳಸ ತಾಲೂಕಿನ ಬಾಳೆಖಾನ್ ಎಸ್ಟೇಟ್ ಬಳಿ ಪಿಕಪ್ ವಾಹನ ಪಲ್ಟಿ ಹೊಡೆದು 18 ಮಂದಿ ಕಾರ್ಮಿಕರು ಗಾಯಗೊಂಡ ಘಟನೆ ಜರುಗಿದೆ.
Advertisement
18 ಮಂದಿ ಕಾರ್ಮಿಕರಲ್ಲಿ 6 ಜನರಿಗೆ ಗಂಭೀರ ಗಾಯವಾಗಿದೆ. ಉಳಿದಂತೆ ಕೆಲವರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಗಾಯಾಳುಗಳನ್ನು ಕಳಸದ ತಾಲೂಕು ಆಸ್ಪತ್ರೆಗೆ ದಾಖಲಿಸಲಾಗಿದೆ. ಪಿಕಪ್‍ನಲ್ಲಿ 18 ಜನರನ್ನ ಕುರಿಗಳಂತೆ ತುಂಬಿಕೊಂಡು ಹೋದ ಚಾಲಕನ ವಿರುದ್ಧ ಸ್ಥಳಿಯರು ಆಕ್ರೋಶ ಹೊರಹಾಕಿದ್ದಾರೆ.
ಸ್ಥಳಕ್ಕೆ ಕಳಸ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದರು.