ಬೆಳಗಾವಿ: ಕೆಎಸ್‌ಆರ್‌ಟಿಸಿ ಡಿಪೋದಲ್ಲೇ ನೇಣಿಗೆ ಶರಣಾದ ಮೆಕ್ಯಾನಿಕ್!

0
Spread the love

ಬೆಳಗಾವಿ:- ಕೆಎಸ್‌ಆರ್‌ಟಿಸಿ ಬಸ್ ಡಿಪೋನಲ್ಲಿ ಮೆಕ್ಯಾನಿಕ್ ಓರ್ವರು ನೇಣಿಗೆ ಶರಣಾದ ಘಟನೆ ಬೆಳಗಾವಿಯಲ್ಲಿ ಜರುಗಿದೆ.

Advertisement

57 ವರ್ಷದ ಕೇಶವ ಕಮಡೊಳಿ ಆತ್ಮಹತ್ಯೆ ಮಾಡಿಕೊಂಡ ಮೆಕ್ಯಾನಿಕ್ ಎಂದು ಗುರುತಿಸಲಾಗಿದೆ. ಮೃತ ವ್ಯಕ್ತಿ ಬಸ್ ವಾಶಿಂಗ್ ನಲ್ಲಿ ಕೆಲಸ ಮಾಡ್ತಿದ್ದ. ಆದರೆ ಡಿಪೋ ಅಧಿಕಾರಿಗಳು, ಪಂಚರ್ ತೆಗೆಯುವ ಕೆಲಸ ಕೊಟ್ಟಿದ್ದರು. ಬೆನ್ನು ನೋವಿನಿಂದ ಬಳಲುತ್ತಿದ್ದ ಕೇಶವ್ ಗೆ ಈ ಕೆಲಸ ಕಷ್ಟ ವಾಗಿತ್ತು. ಅಲ್ಲದೇ ಈ ಬಗ್ಗೆ ಅವರ ಕುಟುಂಬಸ್ಥರು ಕೂಡ ಅಧಿಕಾರಿಗಳ ಗಮನಕ್ಕೆ ತಂದಿದ್ದರು. ಆದರೆ ಡಿಪೋ ಅಧಿಕಾರಿಗಳು ಮಾತ್ರ ಡ್ಯೂಟಿ ಬದಲಿಸಿರಲಿಲ್ಲ. ಇದರಿಂದ ಬೇಸತ್ತ ಮೆಕ್ಯಾನಿಕ್ ಸುರೇಶ್, ಬಸ್ ಒಳಗೆ ನೇಣಿಗೆ ಶರಣಾಗಿದ್ದಾರೆ.

ಘಟನೆ ಹಿನ್ನೆಲೆ ಅಧಿಕಾರಿಗಳ ವಿರುದ್ಧ ಮೃತನ ಕುಟುಂಬಸ್ಥರು ಅಕ್ರೋಶ ಹೊರ ಹಾಕಿದ್ದಾರೆ. ಸ್ಥಳಕ್ಕೆ ಮಾರ್ಕೆಟ್ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ಮಾಡಿದ್ದು, ಮಾರ್ಕೆಟ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ಜರುಗಿದೆ.


Spread the love

LEAVE A REPLY

Please enter your comment!
Please enter your name here