ಈ ಬಜೆಟ್‌ʼನಲ್ಲಿ ಯಾವ ಕ್ಷೇತ್ರಕ್ಕೆ ಆದ್ಯತೆ ಕೊಡಬೇಕಿತ್ತೋ ಅದಕ್ಕೆ ಕೊಟ್ಟಿಲ್ಲ: ಜಗದೀಶ್‌ ಶೆಟ್ಟರ್‌

0
Spread the love

ಹುಬ್ಬಳ್ಳಿ: ಈ ಬಜೆಟ್‌ನಲ್ಲಿ ಯಾವ ಕ್ಷೇತ್ರಕ್ಕೆ ಆದ್ಯತೆ ಕೊಡಬೇಕಿತ್ತೋ ಅದಕ್ಕೆ ಕೊಟ್ಟಿಲ್ಲ ಎಂದು ಬಿಜೆಪಿ ಸಂಸದ ಜಗದೀಶ್‌ ಶೆಟ್ಟರ್‌ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಹುಬ್ಬಳ್ಳಿಯಲ್ಲಿ ಮಾತನಾಡಿದ ಅವರು, ರಾಜ್ಯದ ಅದರಲ್ಲೂ ಪ್ರಮುಖವಾಗಿ ಉತ್ತರ ಕರ್ನಾಟಕ ಭಾಗದ ನೀರಾವರಿ ಯೋಜನೆಗೆ ಈ ಬಾರಿಯ ಬಜೆಟ್‌ನಲ್ಲಿ ಒತ್ತು ಕೊಡಬೇಕಿತ್ತು.

Advertisement

ಆದರೆ ಕೃಷ್ಣಾ ಮೇಲ್ದಂಡೆ ಯೋಜನೆಗೆ ಯಾವುದೇ ಆದ್ಯತೆ ಕೊಟ್ಟಿಲ್ಲ. ರಾಜ್ಯದ ಅಭಿವೃದ್ಧಿಯನ್ನೂ ಈ ಬಾರಿಯ ಬಜೆಟ್‌ನಲ್ಲಿ ಸಂಪೂರ್ಣವಾಗಿ ಕಡೆಗಣಿಸಲಾಗಿದೆ ಕಿಡಿಕಾರಿದ್ದಾರೆ.

ಸಾಲ ಮಾಡುವುದೇ ಸಿದ್ದರಾಮಯ್ಯನವರ ಮೂಲ ಉದ್ದೇಶವಾಗಿದೆ. ಬರೋಬ್ಬರಿ 7.50 ಲಕ್ಷ ಕೋಟಿ ರೂ.ನಷ್ಟು ಅಗಾಧ ಮೊತ್ತದ ಸಾಲದ ಹೊರೆಯನ್ನು ರಾಜ್ಯದ‌ ಜನರ ಮೇಲೆ ಹೇರಿದ್ದಾರೆ. ರಾಜ್ಯದ ಆರ್ಥಿಕ ಸ್ಥಿತಿ ಅಯೋಮಯವಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಆರ್ಥಿಕ‌ ಆಡಳಿತ ವ್ಯವಸ್ಥೆಯಲ್ಲಿ‌ ಸಿದ್ಧರಾಮಯ್ಯ ಸಂಪೂರ್ಣ ವಿಫಲರಾಗಿದ್ದಾರೆ. ಅಲ್ಪಸಂಖ್ಯಾತರ ಅದರಲ್ಲೂ ಮುಸ್ಲಿಮರ ತುಷ್ಠೀಕರಣವನ್ನು ಮುಂದುವರೆಸಿದ್ದಾರೆ. ಇದು‌ ಮುಸ್ಲಿಮರ ಪರವಾಗಿರುವ ಬಜೆಟ್ ಆಗಿದೆಯೇ ಹೊರತು, ರಾಜ್ಯದ ಸಮಸ್ತ ಜನರ ಪರವಾಗಿರುವ ಬಜೆಟ್‌ ಅಲ್ಲ ಎಂದರು.


Spread the love

LEAVE A REPLY

Please enter your comment!
Please enter your name here