ವಾಹನ ಸವಾರರ ಗಮನಕ್ಕೆ: ನಾಳೆ ವಿಧಾನಸೌಧ ಸುತ್ತಮುತ್ತ ಸಂಚಾರ ಸ್ಥಗಿತ!

0
Spread the love

ಬೆಂಗಳೂರು:- ನಗರದ ವಿಧಾನಸೌಧದ ಸುತ್ತಮುತ್ತಲಿನ ಪ್ರದೇಶಗಳಲ್ಲಿ ನಾಳೆ ಸಂಚಾರ ಸ್ಥಗಿತ ಮಾಡಲಾಗಿದೆ ಎಂದು ಸಂಚಾರಿ ಪೊಲೀಸರು ತಿಳಿಸಿದ್ದಾರೆ.

Advertisement

ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯ ವತಿಯಿಂದ 2ನೇ ಆವೃತ್ತಿಯ ರಾಜ್ಯ ಮಟ್ಟದ ಕರ್ನಾಟಕ ಪೊಲೀಸ್ ರನ್ ಕಾರ್ಯಕ್ರಮವನ್ನು ನಾಳೆ ಬೆಂಗಳೂರಿನಲ್ಲಿ ಹಮ್ಮಿಕೊಳ್ಳಲಾಗಿದೆ. ಹೀಗಾಗಿ ವಿಧಾನಸೌಧ ಮುಂಭಾಗದಲ್ಲಿರುವ ಗ್ರಾಂಡ್ ಸ್ಟೆಪ್ ಮೆಟ್ಟಿಲುಗಳಿಂದ ಆರಂಭವಾಗಲಿದ್ದು, ಕೆ.ಆರ್ ವೃತ್ತ, ನೃಪತುಂಗರಸ್ತೆ, ಕಸ್ತೂರಬಾ ರಸ್ತೆ, ಸಿದ್ದಲಿಂಗಯ್ಯ ವೃತ್ತ, ಸಿಟಿಒ ಜಂಕ್ಷನ್, ಪೊಲೀಸ್ ತಿಮ್ಮಯ್ಯ ವೃತ್ತದ ಮೂಲಕ ವಿಧಾನಸೌಧವನ್ನು ತಲುಪಲಿದೆ. ಈ ಹಿನ್ನೆಲೆಯಲ್ಲಿ ವಿಧಾನಸೌಧ ರಸ್ತೆಯಲ್ಲಿ ವಾಹನ ಸಂಚಾರ ನಿರ್ಬಂಧಿಸಲಾಗಿದೆ ಎಂದು ಬೆಂಗಳೂರು ಸಂಚಾರಿ ಪೊಲೀಸರು ತಿಳಿಸಿದ್ದಾರೆ.

ವಾಹನ ಸಂಚಾರ ನಿರ್ಬಂಧ:
ವಿಧಾನಸೌಧದ ಕಡೆಗೆ ಸಂಚರಿಸುವ ವಾಹನಗಳನ್ನು ಕೆ.ಆರ್ ಸರ್ಕಲ್‌ನಲ್ಲಿ ಮಾರ್ಗ ಬದಲಾಯಿಸಿ ಪೊಲೀಸ್‌ ಕಾರ್ನರ್ ಕಡೆಗೆ ಚಲಿಸಲು ಅವಕಾಶ ಕಲ್ಪಿಸಲಾಗಿದೆ ಹಾಗೂ ವಿಧಾನಸೌಧದ ಕಡೆಗೆ ಯಾವುದೇ ವಾಹನಗಳ ಪ್ರವೇಶಕ್ಕೆ ಬೆಳಗ್ಗೆ 06:00 ರಿಂದ 10:00 ಗಂಟೆಯವರೆಗೆ ಅವಕಾಶವಿರುವುದಿಲ್ಲ.

ಬಾಳೇಕುಂದ್ರಿ ವೃತ್ತ ಮತ್ತು ಸಿಟಿಒ ಜಂಕ್ಷನ್‌ನಿಂದ ವಿಧಾನಸೌಧ ಕಡೆಗೆ ಹೋಗುವ ವಾಹನಗಳನ್ನು ಪೊಲೀಸ್ ತಿಮ್ಮಯ್ಯ ಜಂಕ್ಷನ್‌ನಲ್ಲಿ ರಾಜಭವನದ ಕಡೆಗೆ ಹಾಗೂ ಕನ್ನಿಂಗ್ ಹ್ಯಾಮ್ ರಸ್ತೆ ಕಡೆಗೆ ಕಳುಹಿಸಲಾಗುವುದು. ವಿಧಾನಸೌಧ ಕಡೆಗೆ ಯಾವುದೇ ವಾಹನಗಳ ಪ್ರವೇಶಕ್ಕೆ ಬೆಳಗ್ಗೆ 06:00 ರಿಂದ 10:00 ಗಂಟೆಯವರೆಗೆ ಅವಕಾಶವಿರುವುದಿಲ್ಲ.

ಹಳೆ ಮದ್ರಾಸ್ ರಸ್ತೆ ಮತ್ತು ಹಳೆ ವಿಮಾನ ನಿಲ್ದಾಣ ರಸ್ತೆಯ ಕಡೆಗೆ ಹೋಗುವ ವಾಹನಗಳನ್ನು ಪಡ್ಲನ್ ಜಂಕ್ಷನ್‌ನಿಂದ ದೇವಾಂಗ ರಸ್ತೆ, ಶಾಂತಿನಗರ ಮತ್ತು ರಿಚ್ಮಂಡ್​ ವೃತ್ತಕ್ಕೆ ಕಳುಹಿಸಲಾಗುವುದು.


Spread the love

LEAVE A REPLY

Please enter your comment!
Please enter your name here