ವಿಜಯಸಾಕ್ಷಿ ಸುದ್ದಿ, ನವದೆಹಲಿ
2 ರಾಜ್ಯಗಳಲ್ಲಿ ಅಧಿಕಾರ ಉಳಿಸಿಕೊಳ್ಳುವುದರ ಮೂಲಕ ಬಿಜೆಪಿ ತನ್ನ ಆಡಳಿತದಲ್ಲಿರುವ ರಾಜ್ಯಗಳ ಸಂಖ್ಯೆಗಳನ್ನು ಹೆಚ್ಚಿಸಿದೆ. ಈ ಮೂಲಕ ಬಿಜೆಪಿ ಅಧಿಕಾರದಲ್ಲಿರುವ ರಾಜ್ಯಗಳ ಸಂಖ್ಯೆ 18ಕ್ಕೆ ಏರಿಕೆಯಾಗಿದೆ.
ಬಿಜೆಪಿ ಸ್ವಂತ ಬಲ ಮತ್ತು ಮಿತ್ರ ಪಕ್ಷಗಳ ಜೊತೆ ಸೇರಿ ಒಟ್ಟು 17 ರಾಜ್ಯಗಳಲ್ಲಿ ಅಧಿಕಾರದಲ್ಲಿತ್ತು. ಆದರೆ, ಈ ಚುನಾವಣೆಯಲ್ಲಿ ಆಸ್ಸಾಂ ಉಳಿಸಿಕೊಳ್ಳುವುದರೊಂದಿಗೆ ಪುದುಚೇರಿಯನ್ನೂ ಕಮಲ ಪಡೆ ಗೆದ್ದು ಬೀಗಿದೆ. ಆದರೆ, ಪಂಚ ರಾಜ್ಯಗಳ ಪೈಕಿ ಬಿಜೆಪಿಯು ಪಶ್ಚಿಮ ಬಂಗಾಳದ ಮೇಲೆ ಹೆಚ್ಚಿನ ಕಣ್ಣು ನೆಟ್ಟಿತ್ತು. ಆದರೆ, ಮಮತಾ ಬ್ಯಾನರ್ಜಿ ಅವರ ಹೋರಾಟಕ್ಕೆ ಇದಕ್ಕೆ ಆಸ್ಪದ ನೀಡಲಿಲ್ಲ. ಆದರೆ, ಬಿಜೆಪಿ ಅಲ್ಲಿ ಎರಡನೇ ಅತಿ ದೊಡ್ಡ ಪಕ್ಷವಾಗಿ ಹೊರ ಹೊಮ್ಮಿದೆ.
ತಮಿಳುನಾಡಿನಲ್ಲಿ ಕೂಡ ಬಿಜೆಪಿಯ ನಿರೀಕ್ಷೆ ಸುಳ್ಳಾಗಿದೆ. ಎಐಎಡಿಎಂಕೆ ಜೊತೆ ಈ ಬಾರಿ ಬಿಜೆಪಿ ಮೈತ್ರಿ ಮಾಡಿಕೊಂಡಿತ್ತು. ಆದರೆ, ಎಐಎಡಿಎಂಕೆ ಪಕ್ಷವು ಡಿಎಂಕೆ ವಿರುದ್ಧ ಸೋಲು ಕಂಡಿದೆ. ಹೀಗಾಗಿ ಒಂದು ಸ್ಥಾನ ಹೆಚ್ಚಿಸಿಕೊಂಡಿರುವ ಬಿಜೆಪಿ 18 ರಾಜ್ಯಗಳಲ್ಲಿ ತನ್ನ ದರ್ಬಾರ್ ನಡೆಸುತ್ತಿದೆ.
ಬಿಜೆಪಿಯು ಸದ್ಯ ಅಸ್ಸಾಂ, ಅರುಣಾಚಲ ಪ್ರದೇಶ, ಬಿಹಾರ, ಗೋವಾ, ಗುಜರಾತ್, ಹರಿಯಾಣ, ಹಿಮಾಚಲ ಪ್ರದೇಶ, ಪುದುಚೇರಿ, ಕರ್ನಾಟಕ, ಮಧ್ಯಪ್ರದೇಶ, ಮಿಜೋರಾಂ, ನಾಗಾಲ್ಯಾಂಡ್, ಸಿಕ್ಕಿಂ, ತ್ರಿಪುರಾ, ಉತ್ತರಾಖಂಡ, ಉತ್ತರ ಪ್ರದೇಶ, ಮಣಿಪುರ, ಮೇಘಾಲಯ ರಾಜ್ಯಗಳಲ್ಲಿ ದರ್ಬಾರ್ ನಡೆಸುತ್ತಿದೆ.