Virat Kohli: ಕಿಂಗ್ ವಿರಾಟ್ ಕೊಹ್ಲಿ ಈ ವಿಷಯದಲ್ಲಿ ಝೀರೋ ಅಂತೆ: ನೀವು ಒಪ್ತೀರಾ?

0
Spread the love

ರನ್ ಮಷಿನ್, ದಾಖಲೆಗಳ ಸರದಾರ, ಚೇಸಿಂಗ್ ಮಾಸ್ಟರ್, ಹೀಗೆ ಸಾಕಷ್ಟು ಬಿರುದುಗಳನ್ನು ಪಡೆದಿರುವ ಕಿಂಗ್ ಕೊಹ್ಲಿ 2025ರ ಚಾಂಪಿಯನ್ಸ್ ಟ್ರೋಫಿಯಲ್ಲಿ ಅತ್ಯುತ್ತಮ ಪ್ರದರ್ಶನ ತೋರಿದ್ದಾರೆ.

Advertisement

ಇನ್ನೇನೋ ಈ ಚಾಂಪಿಯನ್ ಟ್ರೋಫಿ ಮುಗಿಯಲಿದ್ದು, ಭಾನುವಾರ ನ್ಯೂಝಿಲೆಂಡ್ ಹಾಗೂ ಭಾರತ ತಂಡ ಫೈನಲ್ ನಲ್ಲಿ ಸೆಣಸಾಡಲಿವೆ. ಇದೇ ಪಂದ್ಯದಲ್ಲಿ ಕೊಹ್ಲಿಗೆ ಬೇಕಿರುವುದು ಕೇವಲ 46 ರನ್​ಗಳು ಮಾತ್ರ. ಈ 46 ರನ್​ಗಳೊಂದಿಗೆ ಕ್ರಿಸ್ ಗೇಲ್ ಹೆಸರಿನಲ್ಲಿರುವ 791 ರನ್​ಗಳ ದಾಖಲೆ ಮುರಿಯುವ ಅವಕಾಶ ವಿರಾಟ್ ಕೊಹ್ಲಿ ಮುಂದಿದೆ.

ಇದೀಗ ಫೈನಲ್ ಪಂದ್ಯಕ್ಕೆ ಸಜ್ಜಾಗಿರುವ ಕೊಹ್ಲಿ ಅಂತಿಮ ಪಂದ್ಯದಲ್ಲಿ 46 ರನ್​ ಬಾರಿಸಿ ಈ ಸಾಧನೆ ಮಾಡಲಿದ್ದಾರಾ ಎಂಬುದೇ ಕುತೂಹಲ. ಈ ಕುತೂಹಲದೊಂದಿಗೆ ಕಿಂಗ್ ಕೊಹ್ಲಿ ಬ್ಯಾಟ್​ನಿಂದ ಒಂದೇ ಒಂದು ಸಿಕ್ಸ್ ಮೂಡಿಬರಲಿ ಎಂದು ಅಭಿಮಾನಿಗಳು ಕೂಡ ಆಶಿಸುತ್ತಿದ್ದಾರೆ.

ಏಕೆಂದರೆ ಈ ಬಾರಿಯ ಚಾಂಪಿಯನ್ಸ್ ಟ್ರೋಫಿಯಲ್ಲಿ 4 ಇನಿಂಗ್ಸ್ ಆಡಿರುವ ವಿರಾಟ್ ಕೊಹ್ಲಿ 72.33 ರ ಸರಾಸರಿಯಲ್ಲಿ ಒಟ್ಟು 217 ರನ್ ಗಳಿಸಿದ್ದಾರೆ. ಈ 217 ರನ್​ಗಳಲ್ಲಿ ಒಂದೇ ಒಂದು ಸಿಕ್ಸ್ ಇಲ್ಲ ಎಂಬುದು ವಿಶೇಷ.

ಅಂದರೆ ನಾಲ್ಕು ಇನಿಂಗ್ಸ್ ಆಡಿರುವ ವಿರಾಟ್ ಕೊಹ್ಲಿ ಒಂದೇ ಒಂದು ಸಿಕ್ಸ್ ಬಾರಿಸಿಲ್ಲ. ಇದಾಗ್ಯೂ ಅವರ ಬ್ಯಾಟ್​ನಿಂದ ಒಟ್ಟು 15 ಬೌಂಡರಿಗಳು ಮೂಡಿಬಂದಿವೆ. ಆದರೆ ಕಿಂಗ್ ಕೊಹ್ಲಿ ಬ್ಯಾಟ್​ನಿಂದ ಆಕರ್ಷಕ ಸಿಕ್ಸ್​ ಎದುರು ನೋಡುತ್ತಿದ್ದ ಅಭಿಮಾನಿಗಳಿಗೆ ನಾಲ್ಕು ಪಂದ್ಯಗಳಲ್ಲೂ ನಿರಾಸೆ ಕಾದಿತ್ತು. ಇದೀಗ ಕೊನೆಯ ಪಂದ್ಯಕ್ಕಾಗಿ ವಿರಾಟ್ ಕೊಹ್ಲಿ ಸಜ್ಜಾಗಿದ್ದಾರೆ. ಅದು ಕೂಡ ಕಿವೀಸ್ ಪಡೆ ವಿರುದ್ಧ.

ನಾಳೆ ದುಬೈ ಇಂಟರ್​ನ್ಯಾಷನಲ್ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯಲಿರುವ ಫೈನಲ್ ಪಂದ್ಯದಲ್ಲಿ ನ್ಯೂಝಿಲೆಂಡ್ ವಿರುದ್ಧ ವಿರಾಟ್ ಕೊಹ್ಲಿ ಸಿಕ್ಸ್ ಬಾರಿಸಲಿ ಎಂಬುದೇ ಅಭಿಮಾನಿಗಳ ಅಂಬಲ.

ಏಕೆಂದರೆ ಈ ಪಂದ್ಯದಲ್ಲಿ ಕಿಂಗ್ ಕೊಹ್ಲಿ ಭರ್ಜರಿ ಪ್ರದರ್ಶನ ನೀಡಿದರೆ, ಈ ಬಾರಿಯ ಟೂರ್ನಿಯಲ್ಲಿ ಅತ್ಯಧಿಕ ರನ್​ ಕಲೆಹಾಕಿದ ಬ್ಯಾಟರ್​ಗಳ ಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಲಿದ್ದಾರೆ.


Spread the love

LEAVE A REPLY

Please enter your comment!
Please enter your name here