ನಡುರಸ್ತೆಯಲ್ಲೇ ಕಳಚಿ ಬಿದ್ದ ಬಸ್ ಟಯರ್: ಚಾಲಕನ ಸಮಯ ಪ್ರಜ್ಞೆಯಿಂದ ತಪ್ಪಿದ ದುರಂತ!

0
Spread the love

ಮೊಳಕಾಲ್ಮುರು:- ರಸ್ತೆಯಲ್ಲಿ ಚಲಿಸುತ್ತಿದ್ದಾಗಲೇ ಖಾಸಗಿ ಬಸ್ ನ ಟಯರ್ ಕಳಚಿ ಬಿದ್ದಿದ್ದು, ಚಾಲಕನ ಸಮಯ ಪ್ರಜ್ಞೆಯಿಂದ ಭಾರೀ ಅನಾಹುತ ತಪ್ಪಿರುವ ಘಟನೆ ಸೂಲೇನಹಳ್ಳಿ ಬಳಿ ನಡೆದಿದೆ.

Advertisement

ಮೊಳಕಾಲ್ಮುರು ಕಡೆ ಹೋಗುತ್ತಿದ್ದ ಖಾಸಗಿ ಬಸ್ ನ ಮುಂಭಾಗದ ಎಡಬದಿಯ ಟೈಯರ್ ಏಕಾಏಕಿ ಕಳಚಿ ಬಿದ್ದಿದ್ದು, ಅದೃಷ್ಟವಶಾತ್ ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ. ಚಾಲಕನ ಸಮಯ ಪ್ರಜ್ಞೆಯಿಂದ ಸುಮಾರು ಬಸ್ಸಿನಲ್ಲಿದ್ದ 40ಕ್ಕೂ ಹೆಚ್ಚು ಪ್ರಯಾಣಿಕರು ಪ್ರಾಣಪಾಯದಿಂದ ಪಾರಾಗಿದ್ದಾರೆ.

ಬಸ್ ನ ಎಡಭಾಗದ ಟೈಯರ್ ಏಕಾಏಕಿ ಕಳಚಿದ ಪರಿಣಾಮ ಬಸ್ ಒಂದೆಡೆ ವಾಲಿದೆ. ಚಾಲಕ ನಿಧಾನವಾಗಿ ಬಸ್ ಅನ್ನು ನಿಯಂತ್ರಿಸಿದರಿಂದ ಭಾರಿ ಅನಾಹುತ ತಪ್ಪಿದಂತಾಗಿದೆ. ಇನ್ನು ಇದೇ ವೇಳೆ ರಸ್ತೆಯಲ್ಲಿ ಆಟೋ ಹತ್ತಲು ನಿಂತಿದ್ದ ಮಹಿಳೆಗೆ ಕಳಚಿ ಬಿದ್ದ ಟಯರ್ ತಗುಲಿ ಒಳಪೆಟ್ಟಾಗಿದ್ದು, ಮಹಿಳೆಯನ್ನು ಪಟ್ಟಣದ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿಲಾಗಿದೆ. ಮೊಳಕಾಲ್ಮುರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.


Spread the love

LEAVE A REPLY

Please enter your comment!
Please enter your name here