ಬೆಂಗಳೂರು: ದುಬೈನಿಂದ ಅಕ್ರಮವಾಗಿ ಚಿನ್ನ ತಂದ ನಟಿ ರನ್ಯಾ ರಾವ್ ಕೇಸ್ನ ತನಿಖೆ ದಿನದಿಂದ ದಿನಕ್ಕೆ ಚುರುಕುಗೊಳ್ಳುತ್ತಿದ್ದು, ಇನ್ನೂ ಈ ಘಟನೆಗೆ ಸಂಬಂಧಿಸಿದಂತೆ ಇಂದಿಗೆ 3 ದಿನಗಳ ರನ್ಯಾ ರಾವ್ DRI ಕಸ್ಟಡಿ ಅಂತ್ಯವಾಗಿದೆ. DRI ಅಧಿಕಾರಿಗಳು ಇಂದು ಸಂಜೆ ಮತ್ತೆ ಕೋರ್ಟ್ ಗೆ ಹಾಜರುಪಡಿಸಲಿದ್ದಾರೆ.
Advertisement
ಮತ್ತೆ ರನ್ಯಾಳನ್ನ DRI ಅಧಿಕಾರಿಗಳು ಕಸ್ಟಡಿಗೆ ಕೇಳುವ ಸಾಧ್ಯತೆಯಿದೆ. ಮೂರು ದಿನದ ವಿಚಾರಣೆ ವೇಳೆ ಸ್ಮಗ್ಲಿಂಗ್ ವಿಚಾರ ಸಂಬಂಧ ಮಹತ್ವದ ಮಾಹಿತಿ ಸಂಗ್ರಹ ಮಾಡಿದ್ದು,
ಹೀಗಾಗಿ ಹೆಚ್ಚಿನ ವಿಚಾರಣೆಗೆ ಮತ್ತೆ ಕಸ್ಟಡಿಗೆ ಕೇಳುವ ಸಾಧ್ಯತೆಯಿದೆ. DRI ಆರೋಪಿಯನ್ನ 40 ದಿನಗಳ ಕಾಲ ಕಸ್ಟಡಿಗೆ ಪಡೆಯಬಹುದು. ಈ ಅವಕಾಶ ಬಳಸಿಕೊಂಡು ಮತ್ತೆ ಕಸ್ಟಡಿಗೆ ಕೇಳುವ ಸಾಧ್ಯತೆಯಿದೆ.