ಬೆಂಗಳೂರು: ಕ್ಷುಲ್ಲಕ ಕಾರಣಕ್ಕೆ ವ್ಯಕ್ತಿಯ ಕೊಲೆಯಾಗಿರುವ ಘಟನೆ ಕನಕಪುರ ರಸ್ತೆಯ ಫೋರಂ ಮಾಲ್ ನಲ್ಲಿ ಮಾರ್ಚ್ 8 ರಂದು ರಾತ್ರಿ 8 ಗಂಟೆಗೆ ನಡೆದಿದೆ. ಬಸವರಾಜು(37) ಮೃತ ವ್ಯಕ್ತಿಯಾಗಿದ್ದು, ಮಾಯಪ್ಪ (60) ಕೊಲೆ ಮಾಡಿದ ಆರೋಪಿಯಾಗಿದ್ದಾನೆ.
Advertisement
ಬಸವರಾಜು ಮತ್ತು ಮಾಯಪ್ಪ ಫೋರಂ ಮಾಲ್ ನಲ್ಲಿ ಕಸ ಎತ್ತುವ ಕೆಲಸ ಕೆಲಸ ಮಾಡ್ತಿದ್ರು. ಈ ವೇಳೆ ಇಬ್ಬರ ನಡುವೆ ಗಲಾಟೆ ಆಗಿದೆ. ಕಸ ಸರಿಯಾಗಿ ಎತ್ತು ಅಂತಾ ಬಸವರಾಜು ಮಾಯಪ್ಪಗೆ ಹೇಳಿದ್ದ,
ಇದೇ ವಿಚಾರವಾಗಿ ಇಬ್ಬರ ಮಧ್ಯೆ ಗಲಾಟೆಯಾಗಿ ಚಾಕುವಿನಿಂದ ಇರಿದು ಕೊಲೆ ಮಾಡಿದ್ದಾನೆ. ಇನ್ನೂ ಘಟನೆ ಸಂಬಂಧ ಆರೋಪಿಯನ್ನು ಬಂಧಿಸಿದ್ದು, ಕೋಣನಕುಂಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.