ಬೆಂಗಳೂರು: ಹಿಂದಿನ ಬಿಜೆಪಿ ಸರ್ಕಾರ 3 ವರ್ಷಗಳಿಂದ ಹೊಸ ಕಾರ್ಡ್ ಕೊಟ್ಟಿರಲಿಲ್ಲ ಎಂದು ಸಚಿವ ಮುನಿಯಪ್ಪ ಆರೋಪ ಮಾಡಿದ್ದಾರೆ. ವಿಧಾನ ಪರಿಷತ್ ಪ್ರಶ್ನೋತ್ತರ ಕಲಾಪದಲ್ಲಿ ಮಾತನಾಡಿದ ಅವರು, ಎಪಿಎಲ್ ಕಾರ್ಡ್ ಕೊಡೋದು ಈಗ ನಿಲ್ಲಿಸಿದ್ದೇವೆ. 91 ಸಾವಿರ ಬಿಪಿಎಲ್ ಕಾರ್ಡ್ ಕೊಡೋದು ಬಾಕಿ ಇದೆ. ಆದಷ್ಟು ಬೇಗ ಇದನ್ನ ಪರಿಶೀಲನೆ ಮಾಡಿ ಕ್ರಮ ತೆಗೆದುಕೊಳ್ಳುತ್ತೇವೆ.
ಹಿಂದಿನ ಬಿಜೆಪಿ ಸರ್ಕಾರ 3 ವರ್ಷಗಳಿಂದ ಹೊಸ ಕಾರ್ಡ್ ಕೊಟ್ಟಿರಲಿಲ್ಲ. ನಾನು ಬಂದ ಮೇಲೆ ಹೊಸ ಕಾರ್ಡ್ ಕೊಡುತ್ತಿದ್ದೇವೆ. 2 ತಿಂಗಳಲ್ಲಿ ಬಾಕಿ ಇರೋ ಬಿಪಿಎಲ್ ಕಾರ್ಡ್ ಅರ್ಜಿ ವಿಲೇವಾರಿ ಮಾಡುತ್ತೇವೆ ಎಂದು ತಿಳಿಸಿದರು.
ಇನ್ನೂ ಎಪಿಎಲ್ ಕಾರ್ಡ್‌ಗೆ ಅರ್ಹತೆ ಇರೋ 15-20% ಜನ ಬಿಪಿಎಲ್ ಕಾರ್ಡ್ ಪಡೆದಿದ್ದಾರೆ. ಇದನ್ನು ಪರಿಷ್ಕರಣೆ ಮಾಡುವ ಕೆಲಸ ಶುರು ಮಾಡಿದ್ದೆವು. ಇದರಿಂದ ಗೊಂದಲ ನಿರ್ಮಾಣ ಆಯಿತು. ಈಗ ಮತ್ತೆ ಪರಿಷ್ಕರಣೆ ಕೆಲಸ ಗೊಂದಲ ಇಲ್ಲದ ರೀತಿ ಮಾಡುತ್ತೇವೆ. ವಿಪಕ್ಷಗಳು ಪರಿಷ್ಕರಣೆ ಬೆಂಬಲ ಕೊಡಬೇಕು. ಅನರ್ಹತೆ ಇಲ್ಲದೆ ಇರೋ ಬಿಪಿಎಲ್ ಕಾರ್ಡ್ ಪರಿಷ್ಕರಣೆ ಆದರೆ ಅರ್ಹರಿಗೆ ಬಿಪಿಎಲ್ ಕಾರ್ಡ್ ಕೊಡಬಹುದು ಎಂದು ಹೇಳಿದರು.