ಬೆಂಗಳೂರು: ರನ್ಯಾ ರಾವ್ ಕೇಸಲ್ಲಿ ಸಚಿವರು ಭಾಗಿಯಾಗಿರುವ ಆರೋಪಗಳು ಬಿಜೆಪಿಯವರ ಊಹಾಪೋಹ ಎಂದು ಸಚಿವ ಜಮೀರ್ ಅಹ್ಮದ್ ಹೇಳಿದ್ದಾರೆ. ನಗರದಲ್ಲಿ ಮಾತನಾಡಿದ ಅವರು, ತನಿಖೆ ವೇಳೆ ಯಾರ ಕೈವಾಡವಿದೆ ಎನ್ನುವುದು ಗೊತ್ತಾಗುತ್ತದೆ. ಆ ಮಿನಿಸ್ಟರ್ ಕೈವಾಡವಿದೆ. ಈ ಮಿನಿಸ್ಟರ್ ಕೈವಾಡವಿದೆ ಎನ್ನುವುದು ಊಹಾಪೋಹ. ಎಲ್ಲ ಸತ್ಯ ತನಿಖೆಯಿಂದ ಹೊರಗೆ ಬರಲಿ ಎಂದರು.
ರನ್ಯಾ ಗೋಲ್ಡ್ ಸ್ಮಗ್ಲಿಂಗ್ ಪ್ರಕರಣದಲ್ಲಿ ಅನೇಕ ಸ್ಫೋಟಕ ಸಂಗತಿಗಳು ಬಯಲಾಗುತ್ತಿವೆ. ಪ್ರಕರಣದ ಹಿಂದೆ ಪ್ರಭಾವಿ ಸಚಿವರೊಬ್ಬರು ಇದ್ದಾರೆ ಎಂದು ಬಿಜೆಪಿ ಭಾನುವಾರ ಗಂಭೀರ ಆರೋಪ ಮಾಡಿತ್ತು. ಇದೇ ವಿಚಾರ ಸೋಮವಾರ ಸದನದಲ್ಲೂ ಸದ್ದು ಮಾಡಿದ್ದು, ಕೆಲ ಕಾಲ ಕೋಲಾಹಲಕ್ಕೆ ಕಾರಣವಾಯಿತು.



