ಬೆಂಗಳೂರು:- ಇಂದು ಬೆಂಗಳೂರಿನ ಹಲವೆಡೆ ಮಳೆಯ ಸಿಂಚನ ಆಗಿದ್ದು, ಬಿಸಿಲಿನ ಬೇಗೆಯಿಂದ ಬಳಲಿ ಬೆಂಡಾಗಿದ್ದ ಸಿಟಿ ಮಂದಿ ಕೂಲ್-ಕೂಲಾಗಿದ್ದಾರೆ.
Advertisement
ಬಿರು ಬಿಸಿಲಿನಿಂದ ಬೇಯುತ್ತಿದ್ದ ಬೆಂದಕಾಳೂರಿನ ಜನರಿಗೆ ಮಳೆಯು ತಂಪು-ತಂಪು, ಕೂಲ್ ಕೂಲ್ ಅನುಭವ ನೀಡಿದೆ. ನಗರದ ಮೆಜೆಸ್ಟಿಕ್, ಕೆ.ಆರ್ ಮಾರ್ಕೆಟ್, ಆನಂದ್ ರಾವ್ ಸರ್ಕಲ್, ಕೆ.ಜಿ ರೋಡ್, ಶಿವಾನಂದ ಸರ್ಕಲ್ ಸೇರಿದಂತೆ ಹಲವೆಡೆ ಸಾಧಾರಣ ಮಳೆಯಾಗಿದೆ. ಸಂಜೆ ಕೆಲಸ ಮುಗಿಸಿ ಮನೆಗೆ ಹೊರಟ್ಟಿದ್ದವರಿಗೆ ವರುಣ ದೇವ ಮಳೆಯ ಸ್ವಾಗತ ನೀಡಿದ್ದಾನೆ. ಆದ್ರೆ ಏಕಾಏಕಿ ಬಂದ ಮಳೆಯಿಂದ ವಾಹನ ಸವಾರರು ಪರದಾಡಿದ್ದಾರೆ.