ಸಕ್ರಿಯತೆಯಿಂದ ಮನೋಲ್ಲಾಸ ಸಾಧ್ಯ

0
Spread the love

ವಿಜಯಸಾಕ್ಷಿ ಸುದ್ದಿ, ಗದಗ: ನಮ್ಮ ನಕಾರಾತ್ಮಕ ಗುಣಗಳು ಹಾರ್ಮೋನ್‌ಗಳ ಸ್ರವಿಸುವಿಕೆಯನ್ನು ನಿಷ್ಕ್ರೀಯಗೊಳಿಸುತ್ತವೆ. ಅದು ಅನೇಕ ವ್ಯಾಧಿಗಳಿಗೆ ದಾರಿ ಮಾಡಿಕೊಡುತ್ತದೆ. ಆದ್ದರಿಂದ ನಾವು ಯಾವಾಗಲೂ ಸಕಾರಾತ್ಮಕ ಗುಣಗಳನ್ನು ಹೊಂದಿ ಸಕ್ರಿಯವಾಗಿ ಎಲ್ಲದರಲ್ಲೂ ಪಾಲ್ಗೊಳ್ಳುವುದರಿಂದ ನಮ್ಮ ಮನಸ್ಸು ಉತ್ಸಾಹದಿಂದಿರುತ್ತದೆ ಎಂದು ಆಯುರ್ವೇದಿಕ್ ಮೆಡಿಕಲ್ ಕಾಲೇಜಿನ ಪ್ರಾಧ್ಯಾಪಕಿ ಡಾ. ಸುವರ್ಣಾ ನಿಡಗುಂದಿ ಹೇಳಿದರು.

Advertisement

ನಗರದ ಶ್ರೀ ಕರಿಯಮ್ಮ ದೇವಿ ಮಹಿಳಾ ಮಂಡಳವು ಆಚರಿಸಿದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯಲ್ಲಿ ಅವರು ಮಾತನಾಡಿ, ಮಹಿಳೆಯು ತನ್ನ ದೈನಂದಿನ ಚಟುವಟಿಕೆಗಳ ನಡುವೆಯೂ ತನ್ನ ಬಗ್ಗೆ ಸ್ವಲ್ಪ ಕಾಳಜಿ ವಹಿಸಿದರೆ ಮುಂದೆ ಬರಬಹುದಾದ ಅನೇಕ ಕಾಯಿಲೆಗಳನ್ನು ದೂರವಿಡಬಹುದು. ಪ್ರಸನ್ನ ಚಿತ್ತ ಮನಸ್ಸು ಸದಾ ಚೈತನ್ಯವಿರುವಂತೆ ಮಾಡುತ್ತದೆ ಎಂದರು.

ಸಂಘದ ಕಾರ್ಯದರ್ಶಿ ಅನಿತಾ ಜಕಬಾಳ ಪ್ರಸ್ತಾವಿಕವಗಿ ಮಾತನಾಡಿ, ಒಂದು ಮಗುವನ್ನು ಸತ್ಪ್ರಜೆಯನ್ನಾಗಿ ಮಾಡುವಲ್ಲಿ ತಾಯಿಯ ಪಾತ್ರ ಪ್ರಮುಖವಾಗಿದೆ ಎಂದು ಹೇಳಿದರು.

ಡಾ. ಸಂಗೀತಾ ಹುಡೇದ ಮಾತನಾಡಿ, ಮಹಿಳೆಯು ಮಾತೃತ್ವ, ನೇತೃತ್ವ ಹಾಗು ಕರ್ತೃತ್ವ ಎಂಬ ತತ್ವದ ಅಡಿಯಲ್ಲಿ ತನ್ನನ್ನು ತಾನು ನಿರೂಪಿಸುತ್ತಾ ಬಂದು, ಯಶಸ್ಸಿನ ಮುಂಚೂಣಿಯಲ್ಲಿ ನಿಂತಿದ್ದಾಳೆ ಎಂದು ಹೇಳಿದರು.

ಅಧ್ಯಕ್ಷತೆ ವಹಿಸಿ ಮಾತನಾಡಿದ ರೇಣುಕಾ ಕೇಸರಿ ಮಾತನಾಡಿದರು. ಅನ್ನಪೂರ್ಣಾ ಹುಳ್ಳಿ, ಪುಷ್ಪಲತಾ ಚಿಕ್ಕನ್ನವರ ಪ್ರಾರ್ಥಿಸಿದರು. ತನುಜಾ ಗೋವಿಂದಪ್ಪನವರ ಸ್ವಾಗತಿಸಿದರು. ಲಕ್ಷ್ಮವ್ವ ಕುರಿಯವರು ಪುಷ್ಪಾರ್ಪಣೆಗೈದರು. ಶ್ರೀದೇವಿ ಗುಡ್ಲಾನೂರ ವಂದಿಸಿದರು. ನಿರ್ಮಲಾ ಹವಳನ್ನವರ ನಿರೂಪಿಸಿದರು. ಅನ್ನಪೂರ್ಣಾ ದೇವರವರ ಹಾಗೂ ಅಕ್ಕಮಹಾದೇವಿ ಕಳ್ಳಿಯವರು ಊಟದ ನಿರ್ವಹಣೆ ಮಾಡಿದರು.


Spread the love

LEAVE A REPLY

Please enter your comment!
Please enter your name here