ವಿಜಯಸಾಕ್ಷಿ ಸುದ್ದಿ, ಮುಳಗುಂದ: ಮುಳಗುಂದ ಪಟ್ಟಣದ ಅಭಿವೃದ್ಧಿಗೆ ಸಾರ್ವಜನಿಕರ ಸಹಕಾರ ಅತ್ಯಗತ್ಯವಾಗಿದೆ ಎಂದು ಪ.ಪಂ ಮುಖ್ಯಾಧಿಕಾರಿ ಮಂಜುನಾಥ ಗುಳೇದ ಹೇಳಿದರು.
ಅವರು ಪ.ಪಂ ಸಭಾಭವನದಲ್ಲಿ 2025/26ನೇ ಸಾಲಿನ ಅಂದಾಜು ಆಯವ್ಯಯ ಮಂಡಿಸಿ ಮಾತನಾಡಿ, ಪಟ್ಟಣದ ಸಾರ್ವಜನಿಕರ ಸಹಾಯ-ಸಹಕಾರದಿಂದ ಇಂದು ಅಭಿವೃದ್ಧಿಯ ಫಥದಲ್ಲಿ ಸಾಗುತ್ತಿದ್ದು, ಸಾರ್ವಜನಿಕರು ಎಲ್ಲೆಂದರಲ್ಲಿ ಕಸವನ್ನು ಹಾಕದೇ ಪ.ಪಂ ಕಸ ವಿಲೇವಾರಿ ವಾಹನಗಳಿಗೆ ಹಾಕುವುದರಿಂದ ಪಟ್ಟಣವನ್ನು ಸುಂದರವಾಗಿಟ್ಟುಕೊಳ್ಳಲು, ಸಾರ್ವಜನಿಕರ ಆರೋಗ್ಯ ಕಾಪಾಡಲು ಸಹಕಾರಿಯಾಗುತ್ತದೆ. ಪಟ್ಟಣದ ಅಭಿವೃದ್ಧಿಗಾಗಿ ಸಮಯಕ್ಕೆ ಸರಿಯಾಗಿ ನೀರಿನ ಕರ ಹಾಗೂ ಆಸ್ತಿ ಕರಗಳನ್ನು ಕಟ್ಟಿ ಅಭಿವೃದ್ಧಿಗೆ ಸಹಕರಿಸಬೇಕು ಎಂದರು.
ಪ.ಪಂ ಅಧ್ಯಕ್ಷೆ ಯಲ್ಲವ್ವ ಕವಲೂರ, ಉಪಾಧ್ಯಕ್ಷೆ ಅನಸೂಯಾ ಸೋಮಗೇರಿ, ಸ್ಥಾಯಿ ಸಮಿತಿ ಅಧ್ಯಕ್ಷ ಎಂ.ಎಂ. ಶೇಖ, ಪ.ಪಂ ಸದಸ್ಯರಾದ ಕೆ.ಎಲ್. ಕರಿಗೌಡರ, ಎಸ್.ಸಿ. ಬಡ್ನಿ, ಬಸವರಾಜ ಹಾರೋಗೇರಿ, ನಾಗರಾಜ ದೇಶಪಾಂಡೆ, ಮಾಹಾದೇವಪ್ಪಾ ಗಡಾದ, ವಿಜಯ ನೀಲಗುಂದ, ದ್ಯಾಮಣ್ಣಾ ನೀಲಗುಂದ, ಖೃಷಿದಾ ಕಲ್ಲಾನವರ, ಚಂಪಾವತಿ ಗುಳೇದ, ಅನಿಮ್ಮಾ ಅಸುಂಡಿ, ಪಾರವ್ವ ಅಳ್ಳಣ್ಣವರ, ಉಮಾ ಮಟ್ಟಿ, ದಾವುದ ಜಮಾಲ, ಮರಿಯಪ್ಪ ನಡಗೇರಿ, ಹಾಗೂ ಪ.ಪಂ ಸಿಬ್ಬಂದಿಗಳು, ಪೌರಕಾರ್ಮಿಕರು ಇದ್ದರು.