ಬಿಲ್‌ಗಳನ್ನು ಸಲ್ಲಿಸುವ ಅವಧಿ ವಿಸ್ತರಣೆ

0
Spread the love

ವಿಜಯಸಾಕ್ಷಿ ಸುದ್ದಿ, ಗದಗ: ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಸಿ.ಎಸ್. ಷಡಾಕ್ಷರಿ ಆವರ ನಿರಂತರ ಪ್ರಯತ್ನದಿಂದ ಖಜಾನೆಗೆ ಬಿಲ್ಲುಗಳನ್ನು ಸಲ್ಲಿಸುವ ಅವಧಿಯನ್ನು ವಿಸ್ತರಿಸಿದೆ ಎಂದು ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯ ಉಪಾಧ್ಯಕ್ಷರು ಹಾಗೂ ಗದಗ ಜಿಲ್ಲಾ ಅಧ್ಯಕ್ಷ ರವಿ ಗುಂಜಿಕರ ತಿಳಿಸಿದ್ದಾರೆ.

Advertisement

ಈ ಬಗ್ಗೆ ಪ್ರಕಟಣೆ ನೀಡಿರುವ ಅವರು, 15-01-2025ರ ಆದೇಶದ (ಕ್ರಸಂ 1ರಿಂದ 3) ವೇತನ, ವೇತನೇತರ, ಪ್ರಯಾಣ ಭತ್ಯೆ ಮತ್ತಿತರ ಸಾದಿಲ್ವಾರು ಬಿಲ್ಲುಗಳನ್ನು ಖಜಾನೆಗೆ ಸಲ್ಲಿಸಲು 15-03-2025ರವರೆಗೆ ವಿಸ್ತರಿಸಿದೆ. (ಕ್ರಸಂ 5 ರಲ್ಲಿನ) ಕೇಂದ್ರ ಪುರಸ್ಕೃತ ಯೋಜನೆ, ಮತ್ತಿತರ ಬಿಲ್ಲುಗಳನ್ನು ಖಜಾನೆಗೆ ಸಲ್ಲಿಸಲು ಅವಧಿಯನ್ನು 20-03-2025ಕ್ಕೆ ವಿಸ್ತರಿಸಿದೆ. ಹಬ್ಬದ ಮುಂಗಡ ಬಿಲ್ಲುಗಳನ್ನು 15 ದಿನಕ್ಕಿಂತ ಮುಂಚಿತವಾಗಿ ಪಾವತಿಸಲು ಅವಕಾಶವಿಲ್ಲದಿರುವುದರಿಂದ ಈ ಬಿಲ್ಲುಗಳಿಗೆ 18-03-2025ರವರೆಗೆ ಸಲ್ಲಿಸುವ ಅವಕಾಶವನ್ನು ನೀಡಿದ್ದು, ಈ ಅವಧಿ ವಿಸ್ತರಣೆಯ ಸದುಪಯೋಗ ಪಡೆಯುವಂತೆ ಅವರು ತಿಳಿಸಿದ್ದಾರೆ.


Spread the love

LEAVE A REPLY

Please enter your comment!
Please enter your name here