ವಿಜಯಸಾಕ್ಷಿ ಸುದ್ದಿ, ಹುಲಕೋಟಿ: ಮಹಿಳೆಯರು ಸಚ್ಚಾರಿತ್ರ್ಯವನ್ನು ರೂಢಿಸಿಕೊಳ್ಳಬೇಕು. ಅಂದಾಗ ಮನೆ, ಊರು, ನಾಡು ಸಚ್ಚಾರಿತ್ರ್ಯದಿಂದ ಕೂಡಿರುತ್ತದೆ ಎಚಿದು ಸುಮಿತ್ರಾ ಡಿ.ಪಾಟೀಲ ನುಡಿದರು.
ಹುಲಕೋಟಿಯ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದಲ್ಲಿ ನಡೆದ ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಬ್ರಹ್ಮಕುಮಾರಿ ಉಮಾ ಅಕ್ಕನವರು ದಿವ್ಯ ಸಾನ್ನಿಧ್ಯ ವಹಿಸಿ ಮಾತನಾಡಿ, ಮಹಿಳೆಯು ಶೃಂಗಾರದ ಗೊಂಬೆಯಾಗದೆ ಹೃದಯವಂತ ಸುಶೀಲೆಯರಾಗಬೇಕು. ಜೀವನ ಮೌಲ್ಯಗಳ ಜ್ಞಾನವನ್ನು ಪಡೆದುಕೊಂಡು ಸ್ವರಕ್ಷಣೆಯನ್ನು ನಿರ್ಮಾಣ ಮಾಡಿಕೊಳ್ಳಬೇಕು ಎಂದರು.
ಪದವಿ ಕಾಲೇಜಿನ ಇಂಗ್ಲೀಷ್ ಉಪನ್ಯಾಸಕರಾದ ಸಾವಿತ್ರಿ ಟಿ ಮಾತನಾಡಿ, ಮಹಿಳೆಯರು ಆಧುನಿಕತೆಯ ಅಬ್ಬರದಲ್ಲಿ ನೈತಿಕತೆಯನ್ನು ಮರೆಯಬಾರದು. ಮಹಿಳೆಯು ಮನಸ್ಸು ಮಾಡಿದರೆ ನವ್ಯ ನೂತನ ನೈತಿಕ ಭಾರತ ನಿರ್ಮಾಣ ಸಾಧ್ಯ ಎಂದರು.
ಉದ್ಯಮಿ ಶ್ವೇತಾ ಆನೆ ಅತಿಥಿಗಳಾಗಿ ಆಗಮಿಸಿದ್ದರು. ರೋಹಿಣಿ ಸ್ವ-ಸಹಾಯ ಸಂಘ, ಶಿವಶಕ್ತಿ ಸ್ವ-ಸಹಾಯ ಸಂಘ, ಶ್ರೀ ಮಂಜುನಾಥ ಸ್ವ-ಸಹಾಯ ಸಂಘದ ಮಹಿಳೆಯರು ಮತ್ತು ಹುಲಕೋಟಿ ಸೇರಿದಂತೆ ಸುತ್ತಲಿನ ಗ್ರಾಮದ ಮಹಿಳೆಯರು ಪಾಲ್ಗೊಂಡಿದ್ದರು.
ಲೀಲಾವತಿ ಕಾಲವಾಡ ಸ್ವಾಗತಿಸಿದರು. ಪೂರ್ಣಿಮಾ ಲೋಟಗೇರಿ ನಿರೂಪಿಸಿದರು. ಹನುಮಂತ ಮಡಿವಾಳರ ವಂದಿಸಿದರು.