ಬಿಗ್ ಬಾಸ್ ಮನೆಯಲ್ಲಿ ಪ್ರೀತಿಸಿ ಬಳಿಕ ಅದ್ದೂರಿಯಾಗಿ ಮದುವೆಯಾಗಿದ್ದ ರ್ಯಾಪರ್ ಚಂದನ್ ಶೆಟ್ಟಿ ಹಾಗೂ ನಿವೇದಿತಾ ಗೌಡ ಮದುವೆಯಾದ ನಾಲ್ಕೇ ನಾಲ್ಕು ವರ್ಷಕ್ಕೆ ದೂರ ದೂರವಾಗಿದ್ದರು. ಚಂದನ್ ಹಾಗೂ ನಿವೇದಿತಾ ಡಿವೋರ್ಸ್ ಪಡೆದು ಹಲವು ತಿಂಗಳೇ ಕಳೆದಿದೆ. ಇದೀಗ ಮತ್ತೆ ಇಬ್ಬರು ಒಟ್ಟಿಗೆ ಪ್ರೇಸ್ ಮೀಟ್ ಮಾಡಿದ್ದಾರೆ. ಅಂದ ಹಾಗೆ ಇದು ಸಿನಿಮಾದ ಪ್ರೇಸ್ ಮೀಟ್ ಆಗಿದ್ದು ಈ ವೇಳೆ ತಮ್ಮ ಪರ್ಸನಲ್ ಜೀವನದ ಬಗ್ಗೆಯೂ ಮಾತನಾಡಿದ್ದಾರೆ.
‘ಮುದ್ದು ರಾಕ್ಷಸಿ’ ಸಿನಿಮಾದಲ್ಲಿ ನಿವೇದಿತಾ ಮಾಜಿ ಪತಿ ಚಂದನ್ ಶೆಟ್ಟಿ ಜೊತೆ ನಟಿಸಿದ್ದಾರೆ. ಇಬ್ಬರು ಚಿತ್ರದಲ್ಲಿ ಲವರ್ಸ್ ಪಾತ್ರ ಮಾಡಿದ್ದಾರೆ. ಈ ಸಿನಿಮಾದ ಸುದ್ದಿಗೋಷ್ಠಿಯಲ್ಲಿ ಹಲವು ಪ್ರಶ್ನೆಗಳು ಎದುರಾದವು. ವೈಯಕ್ತಿಕ ಜೀವನದ ಬಗ್ಗೆ ಕೇಳಿಬಂದ ಮತ್ತೆ ಒಂದಾಗಿ ಬಾಳುವ ಪ್ರಶ್ನೇಗೆ ನಿವೇದಿತಾ ನೇರವಾಗಿ ಉತ್ತರಿಸಿದ್ದಾರೆ.
‘ಆಗಿನ ಸಂದರ್ಭ ಬೇರೆ, ಈಗಿನ ಸಂದರ್ಭ ಬೇರೆ. ಡಿವೋರ್ಸ್ ಪಡೆದವರು ಮತ್ತೆ ಒಂದಾದ ಉದಾಹರಣೆ ಕೂಡ ಇದೆ. ನಿಮಗೂ ಆ ರೀತಿ ಏನಾದರೂ ಅನಿಸಿದೆಯಾ. ಈಗ ಚಂದನ್ ಶೆಟ್ಟಿ ಅವರನ್ನು ನೋಡಿದಾಗ ನೀವು ಎಮೋಷನಲ್ ಆಗಿದ್ದೀರಲ್ಲ’ ಎಂದು ಕೇಳಿದ ಪ್ರಶ್ನೆಗೆ ಉತ್ತರಿಸಿದ ನಿವಿ, ‘ಖಂಡಿತವಾಗಿಯೂ ನಾನು ಎಮೋಷನಲ್ ಆಗಿದ್ದೇನೆ. ಇಂಥ ಪ್ರಶ್ನೆ ಕೇಳಿದರೆ ಸ್ವಲ್ಪ ಟ್ರಿಕ್ಕಿ ಆಗಿರುತ್ತದೆ. ಏನೂ ಫೀಲ್ ಆಗಿಯೇ ಇಲ್ಲ ಅಂತ ಹೇಳೋಕೆ ಆಗಲ್ಲ. ಅಷ್ಟು ವರ್ಷ ಜೊತೆಗಿದ್ದ ಮೇಲೆ ಖಂಡಿತಾ ಫೀಲ್ ಆಗುತ್ತದೆ. ಬೇರೆ ಜೋಡಿಗಳ ಬಗ್ಗೆ ನನಗೆ ಗೊತ್ತಿಲ್ಲ. ಪರಸ್ಪರ ಪ್ರೀತಿ ಜಾಸ್ತಿ ಇದ್ದಿದ್ದರಿಂದ ಅವರೆಲ್ಲ ಒಂದಾಗಿರಬಹುದು. ಆದರೆ ನಮ್ಮಲ್ಲಿ ಅಷ್ಟೊಂದು ಹೊಂದಾಣಿಕೆ ಇರಲಿಲ್ಲ. ಹಾಗಾಗಿ ಮತ್ತೆ ನಾವು ಒಂದಾಗಲ್ಲ’ ಎಂದು ನಿವೇದಿತಾ ಗೌಡ ಹೇಳಿದ್ದಾರೆ.