ರಂಗಕಲಾವಿದರನ್ನು ನೆನಪಿಸಿದ ಪ್ರದರ್ಶನ

0
Spread the love

ವಿಜಯಸಾಕ್ಷಿ ಸುದ್ದಿ, ಗೋಕಾಕ: ಮರಳಿ ಬಾರದ ಲೋಕಕ್ಕೆ ಹೋದವರನ್ನು ತಮ್ಮ ಸಂಗ್ರಹದ ಅಭಿರುಚಿಯಲ್ಲಿ ಕಟ್ಟಿಹಾಕಿ, ಮುಂದಿನ ಯುವ ಕಲಾ ಪೀಳಿಗೆಗೆ ತಿಳಿಸಲು ಏರ್ಪಡಿಸುವ ಪ್ರದರ್ಶನ ಅವರ ಅಮೋಘ ಸಾಧನೆಯನ್ನು ಬೆಳೆಸಲಿ, ಕಲಾವಿದರ ಜೊತೆ ಅವರ ಹೆಸರು ಚಿರಕಾಲ ಉಳಿಯಲಿ ಎಂದು ವಿಜಯಪುರದ ಲೇಖಕ, ರಂಗ ನಿರ್ದೇಶಕ ಎಸ್.ಎಮ್. ಖೇಡಗಿ ಹೇಳಿದರು.

Advertisement

ಆಶಾಕಿರಣ ಕಲಾ ಟ್ರಸ್ಟ್ ಬೆಂಗಳೂರು, ಹಿರಿಯ ರಂಗಭೂಮಿ ಕಲಾವಿದರಾದ ಮೈಸೂರು ಮಾಲತಿಶ್ರೀ ಇವರ ನೇತೃತ್ವದಲ್ಲಿ ನಡೆದ ಗೋಕಾವಿ ನಾಡಿನ ವೃತ್ತಿರಂಗಭೂಮಿ ಹಿರಿಯ ಕಲಾವಿದರಾದ ದಿ. ಬಿ.ಆರ್. ಅರಿಷಿಣಗೋಡಿ ಹಾಗೂ ದಿ. ಬಸವೆಣ್ಣೆಪ್ಪ ಹೊಸಮನಿ ರಂಗಸ್ಮರಣೋತ್ಸವ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಗದುಗಿನ ಚಿತ್ರಕಲಾವಿದ ಶಂಕರಗೌಡ ಪಾಟೀಲ ಅವರು ಸಂಗ್ರಹಿಸಿರುವ ರಂಗಭೂಮಿ ಕಲಾವಿದರ ಛಾಯಾಚಿತ್ರ ಹಾಗೂ ಹಳೆಯ ಲೇಖನಗಳ ಪ್ರದರ್ಶನ ವಿಕ್ಷೀಸಿ ಅವರು ಮಾತನಾಡಿದರು.

ಕಾರ್ಯಕ್ರಮದ ಉದ್ಘಾಟನೆ ಹಾಗೂ ಪ್ರಶಸ್ತಿ ಪ್ರದಾನ ನೆರವೇರಿಸಿದ ಲೋಕೋಪಯೋಗಿ ಸಚಿವರು ಹಾಗೂ ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವರಾದ ಸತೀಶ ಜಾರಕಿಹೊಳಿ, ವೇ.ಮೂ. ಡಾ. ಮಹಾಂತೇಶ ಶಾಸ್ತ್ರಿಗಳು ಆರಾದ್ರಿಮಠ ಬೈಲಹೊಂಗಲ, ರಂಗಭೂಮಿ ಹಾಗೂ ಕಿರುತರೆ ಕಲಾವಿದರಾದ ಶ್ರೀನಾಥ್ ವಶಿಷ್ಟ, ತಹಸೀಲ್ದಾರ ಡಾ. ಮೋಹನ ಭಸ್ಮೆ, ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಸಿದ್ದಲಿಂಗ ದಳವಾಯಿ, ಅಶೋಕ ಪೂಜೇರಿ, ಮಹಾಂತೇಶ ಗಂ.ತಾಂವಶಿ, ರಜನಿ ಜಿರಗ್ಯಾಳ ಹಾಗೂ ಸಾರ್ವಜನಿಕರು ಪ್ರದರ್ಶನ ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದರು.


Spread the love

LEAVE A REPLY

Please enter your comment!
Please enter your name here