ವಿಜಯಸಾಕ್ಷಿ ಸುದ್ದಿ, ಗದಗ: ಇಲ್ಲಿನ ಸ್ಪರ್ಶ ನರ್ಸಿಂಗ್ ಕಾಲೇಜ್‌ನಲ್ಲಿ ವಿಶ್ವ ಮಹಿಳಾ ದಿನಾಚರಣೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಧಾರವಾಡದ ಎಸ್.ಡಿ.ಎಂ. ಮೆಡಿಕಲ್ ಕಾಲೇಜಿನ ಅಸಿಸ್ಟೆಂಟ್ ಪ್ರೊಫೆಸರ್ ಡಾ. ರಶ್ಮಿ ಮನಿ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿ, ಗಂಡು-ಹೆಣ್ಣು ಎನ್ನುವ ಭೇದಭಾವ ಬೇಡ. ಎಲ್ಲಾ ಪೋಷಕರು ಹೆಣ್ಣುಮಕ್ಕಳು ಸಾಧನೆ ಮಾಡುವಲ್ಲಿ ಅವರನ್ನು ಪ್ರೋತ್ಸಾಹಿಸಬೇಕು ಎಂದರು.
ಭಾರತೀಯ ಶಿಕ್ಷಣ ಸಂಸ್ಥೆಯ ಸಂಸ್ಥಾಪಕರಾದ ಪ್ರೊ. ಎಸ್.ವಾಯ್. ಚಿಕ್ಕಟ್ಟಿ, ಜೈನ್ ಎ.ಜಿ.ಎಂ. ಆಯುರ್ವೇದಿಕ್ ಮೆಡಿಕಲ್ ಕಾಲೇಜಿನ ಡಾ. ಅನಿತಾ ಕೆಂಭಾವಿ, ಎಲ್.ವೈ.ಡಿ.ಎಂ. ಸ್ಪರ್ಶ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯ ಅಧ್ಯಕ್ಷರಾದ ಡಾ. ಪ್ರಭಾ ದೇಸಾಯಿ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು.
ಮೇಘಾ ಜೋಗಿ ಹಾಗೂ ಸಂಗಡಿಗರು ಪ್ರಾರ್ಥಿಸಿದರು. ಶ್ರೀದೇವಿ ಸ್ವಾಗತಿಸಿದರು. ಚೈತ್ರಾ ಹಾಗೂ ಗೌರಿ ನಿರೂಪಿಸಿದರು. ಲತಾ ರವರು ವಂದಿಸಿದರು. ಈ ಸಂದರ್ಭದಲ್ಲಿ ಶಕುಂತಲಾ ಪಾಟೀಲ, ವಿಶ್ವನಾಥ್ ಪಾಟೀಲ, ಡಾ. ವಿ.ಪಿ. ನಾಗನೂರ, ಪ್ರಾಚಾರ್ಯರಾದ ಡಿ. ಬಿ. ಮಧುಸೂದನ್, ಆಡಳಿತಾಧಿಕಾರಿ ರಂಗನಾಥ ಎಂ.ವಿ ಸೇರಿದಂತೆ ಸ್ಪರ್ಶ ನರ್ಸಿಂಗ್ ಕಾಲೇಜಿನ ಉಪನ್ಯಾಸಕರು, ಸಿಬ್ಬಂದಿ ವರ್ಗದವರು ಹಾಗೂ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.