ಆತ್ಮರಕ್ಷಣೆಗೆ ಗನ್ ಬೇಕು: ಹೋರಾಟದ ಹಾದಿ ಹಿಡಿದ ಕುರಿಗಾಹಿಗಳು!

0
Spread the love

ಬಾಗಲಕೋಟೆ:- ಕುರುಬ ಸಮುದಾಯದ ಜನರು ಆತ್ಮರಕ್ಷಣೆಗೆ ಗನ್ ಬೇಕೆಂದು ಹೋರಾಟದ ಹಾದಿ ಹಿಡಿದಿರುವಂತಹ ಘಟನೆ ಬಾಗಲಕೋಟೆಯಲ್ಲಿ ಜರುಗಿದೆ.

Advertisement

ಇದೇ ತಿಂಗಳು 9 ರಂದು ಬಾದಾಮಿ ತಾಲ್ಲೂಕಿನ ಹಳಗೇರಿ ವ್ಯಾಪ್ತಿಯ ಹೊಲದಲ್ಲಿ ಶರಣಪ್ಪ ಜಮ್ಮನಕಟ್ಟಿ ಎಂಬ ಕುರಿಗಾಹಿಯ ಕೊಲೆಯಾಗಿದೆ.

ಕುರಿ ದಡ್ಡಿಗೆ ಕುರಿಕಳ್ಳತನಕ್ಕೆ ಯಾಕುಬ್, ಸಲ್ಮಾನ್, ಸಚಿನ್ ಎಂಬ ಕುರಿಗಳ್ಳರು ಬಂದಿದ್ದರು. ಶರಣಪ್ಪ ಕುರಿ ಕದ್ದೊಯ್ಯುತ್ತಿದ್ದ ಅವರನ್ನು ಹಿಡಿಯಲು ಹೋದಾಗ ಆತನ ಕೊಡಲಿಯಿಂದಲೇ ಕೊಚ್ಚಿ ಕೊಲೆ ಮಾಡಿದ್ದಾರೆ. ಇದರಿಂದ ಕುರಿಗಾಹಿಗಳಿಗೆ ಆತಂಕ ಶುರುವಾಗಿದ್ದು, ರಕ್ಷಣೆ ನೀಡಬೇಕು. ಅವರ ಆತ್ಮರಕ್ಷಣೆಗೆ ಗನ್ ನೀಡಬೇಕೆಂದು ಕುರಿಗಾಹಿಗಳು ಹಾಗೂ ಕುರುಬ ಸಮುದಾಯದ ಡಿಸಿ ಹಾಗೂ ಎಸ್ಪಿ ಕಚೇರಿ ಎದುರು ಧರಣಿ ನಡೆಸಿ ಮನವಿ ಸಲ್ಲಿಸಿದರು.

ಬಾದಾಮಿ ತಾಲ್ಲೂಕಿನ ಉಗಲವಾಟ ಗ್ರಾಮದ ಕುರಿಗಾಹಿ ಶರಣಪ್ಪ ಕುಟುಂಬಕ್ಕೆ ಆಸರೆಯಾಗಿದ್ದ. ಆತನ ಮೇಲೆಯೇ ಮನೆ ಅವಲಂಬಿತವಾಗಿತ್ತು. ಅಂತಹ ವ್ಯಕ್ತಿಯನ್ನೇ ದುಷ್ಟರು ಕೊಲೆ‌ ಮಾಡಿದ್ದಾರೆ. ಅವರಿಗೆ ಕಠಿಣ ಶಿಕ್ಷೆಯಾಗಬೇಕೆಂದು ಆಗ್ರಹಿಸಲಾಗಿದೆ. ಮೃತನ ಕುಟುಂಬಕ್ಕೆ ಸರಕಾರದಿಂದ ಸೂಕ್ತ ಪರಿಹಾರ ನೀಡಬೇಕೆಂದು ಒತ್ತಾಯ ಮಾಡಲಾಗಿದೆ.


Spread the love

LEAVE A REPLY

Please enter your comment!
Please enter your name here