ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ಮಹಿಳೆಯರು, ದೀನ-ದುರ್ಬಲರು ಹಾಗೂ ಬಡವರ ನೋವನ್ನು ನಿವಾರಿಸಿ ಕರ್ಮವನ್ನು ಕಿತ್ತು- ಧರ್ಮವನ್ನು ಬಿತ್ತಿ, ಬದುಕನ್ನು ಬಂಗಾರಗೊಳಿಸಿದ ಕಾರುಣ್ಯ ಸಿಂಧು ಆದಿ ಜಗದ್ಗುರು ರೇಣುಕಾಚಾರ್ಯರು ವಿಶ್ವ ಮಾನವ ಸಂದೇಶ ಸಾರಿದ್ದಾರೆ ಎಂದು ತಹಸೀಲ್ದಾರ ವಾಸುದೇವ ಸ್ವಾಮಿ ಹೇಳಿದರು.
ಅವರು ತಹಸೀಲ್ದಾರ ಕಚೇರಿಯಲ್ಲಿ ಜಗದ್ಗುರು ರೇಣುಕಾಚಾರ್ಯರ ಜಯಂತ್ಯುತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದರು.
ಬದುಕಿನ ಶ್ರೇಯಸ್ಸಿಗೆ ಸತ್ಯ, ಅಹಿಂಸೆ, ಬ್ರಹ್ಮಚರ್ಯ, ದಯಾ, ಕ್ಷಮಾ ಇತ್ಯಾದಿ ದಶವಿಧ ಧರ್ಮ ಸೂತ್ರಗಳು ಮತ್ತು ಮಾನವೀಯತೆಯ ಆದರ್ಶ ಚಿಂತನಗಳು ಬದುಕಿ ಬಾಳುವ ಜನಾಂಗಕ್ಕೆ ದಾರಿದೀಪವಾಗಿವೆ. ಪಾಲಕರು ಮಕ್ಕಳಿಗೆ ಧರ್ಮ, ಸಂಸ್ಕಾರ, ಪರಂಪರೆ-ಆಚರಣೆ, ಪದ್ಧತಿಗಳ ಬಗ್ಗೆ ತಿಳಿಸಬೇಕು. ವಿಜ್ಞಾನ ಎಷ್ಟೇ ಬೆಳೆದರೂ ಮನುಷ್ಯನ ಮಾನಸಿಕ ನೆಮ್ಮದಿಗೆ ಧರ್ಮ, ಸಂಸ್ಕಾರ ಅಗತ್ಯ. ಈ ಮಾನವ ಕುಲಕೋಟಿಗೆ ಧರ್ಮ-ಸಂಸ್ಕಾರ ನೀಡಿ, ವಿಶ್ವ ಬಂಧುತ್ವ ಸಾರಿ ವೀರಶೈವ ಧರ್ಮದಲ್ಲಿ ಧಾರ್ಮಿಕ, ಸಾಮಾಜಿಕ ಮೌಲ್ಯಗಳನ್ನು ಬಿತ್ತಿದ ಕೀರ್ತಿ ಜ.ರೇಣುಕಾಚಾರ್ಯರಿಗೆ ಸಲ್ಲುತ್ತದೆ ಎಂದರು.
ವಕೀಲರ ಸಂಘದ ಅಧ್ಯಕ್ಷ ಬಿ.ಎಸ್. ಬಾಳೇಶ್ವರವ್ಮಠ, ವೀರಭದ್ರಯ್ಯ ಹಿರೇಮಠ, ಬಿ.ಟಿ. ಪಾಟೀಲ ಮಾತನಾಡಿದರು. ಈ ವೇಳೆ ಪುಟಾಣಿ ಅಮೃತಾ ಪಾಟೀಲ ಜ.ರೇಣುಕಾಚಾರ್ಯರ ವೇಷಭೂಷಣದಲ್ಲಿ ಗಮನ ಸೆಳೆದಳು. ಗ್ರೇಡ್-2 ತಹಸೀಲ್ದಾರ ಮಂಜುನಾಥ ಅಮಾಸಿ, ಶಿರಸ್ತೇದಾರ ಜೆ.ಎ. ಮನಿಯಾರ್, ಆಹಾರ ನಿರೀಕ್ಷಕ ಜಗದೀಶ ಕುರುಬರ, ಶಿವಯೋಗಿ ಗಡ್ಡದೇವರಮಠ, ವೀರಭದ್ರಯ್ಯ ಹಿರೇಮಠ, ಸಿ.ಆರ್. ಲಕ್ಕುಂಡಿಮಠ, ಎನ್.ವಿ. ಹೇಮಗಿರಿಮಠ, ರಾಜು ಅಂದಲಗಿ, ಎಸ್.ಬಿ. ಅಳಗುಂಡಗಿ, ಸಂತೋಷ ಬಾಳಿಕಾಯಿ, ಸೋಮಯ್ಯ ಕಲ್ಮಠ, ಶಂಕ್ರಯ್ಯ ಪೂಜಾರ, ಮುರುಘೇಂದ್ರಸ್ವಾಮಿ ಹಿರೇಮಠ, ಮಲ್ಲಯ್ಯ ಭಕ್ತಿಮಠ, ಪಂಚಾಕ್ಷರಯ್ಯ ಸಾಲಿಮಠ, ರುದ್ರುಮುನಿ ಘಂಟಾಮಠ, ನೀಲಕಂಠಯ್ಯ ವೀರಕ್ತಮಠ, ಮಂಜುನಾಥ ಮುಳುಗುಂದ, ಯಲ್ಲಪ್ಪ ಚಕ್ರಸಾಲಿ, ನೀಲಕಂಠಯ್ಯ ಹಿರೇಮಠ, ಎಸ್.ಜೆ. ಪುರಾಣಿಕಮಠ, ಮಹೇಶ್ವರಯ್ಯ ಹಿರೇಮಠ, ಗಂಗಾಧರಯ್ಯ ಶಿಗ್ಲಿಮಠ, ರಶ್ಮಿಕಾ ಪಾಟೀಲ ಸೇರಿದಂತೆ ತಹಸೀಲ್ದಾರ ಕಚೇರಿಯ ಸಿಬ್ಬಂದಿಗಳಿದ್ದರು.