ನವದೆಹಲಿ:- ವಿದೇಶಿ ಮಹಿಳೆ ಮೇಲೆ ಗ್ಯಾಂಗ್ ರೇಪ್ ನಡೆಸಿರುವ ಘಟನೆ ದೆಹಲಿಯ ವಸಂತ್ ಕುಂಜ್‌ನ ಮಹಿಪಾಲಪುರದಲ್ಲಿ ಜರುಗಿದೆ.
ದೆಹಲಿಯ ಮಯೂರ್ ವಿಹಾರ್ ನಿವಾಸಿ ಕೈಲಾಶ್ ಮತ್ತು ವಾಸಿಮ್‌ನಿಂದ ಈ ಕೃತ್ಯ ನಡೆದಿದ್ದು, ಪೊಲೀಸರು ಅರೆಸ್ಟ್ ಮಾಡಿ ತನಿಖೆ ಕೈಗೊಂಡಿದ್ದಾರೆ.
ಸಂತ್ರಸ್ತ ಯುವತಿ ಮತ್ತು ಕೈಲಾಶ್ ಸೋಶಿಯಲ್ ಮೀಡಿಯಾ ಸ್ನೇಹಿತರಾಗಿದ್ದರು. ಕೈಲಾಶ್ ರೀಲ್ಸ್ ಮೂಲಕ ಆಕ್ಟಿವ್ ಆಗಿದ್ದ. ಈ ನಡುವೆ ಸಂತ್ರಸ್ತೆ ಭಾರತದ ಪ್ರವಾಸಕ್ಕೆ ಆಗಮಿಸಿದ್ದಳು. ಗೋವಾದಲ್ಲಿ ಭೇಟಿಯಾಗಲು ಕೈಲಾಶ್‌ಗೆ ಹೇಳಿದ್ದಳು. ಗೋವಾದಲ್ಲಿ ಭೇಟಿಯಾಗಲು ಸಾಧ್ಯವಿಲ್ಲ ಎಂದಾಗ ಕೈಲಾಶ್ ಭೇಟಿಗೆ ದೆಹಲಿಗೆ ಬಂದಿದ್ದಳು.
ಯುವತಿಯನ್ನು ಭೇಟಿ ಮಾಡಲು ವಾಸಿಮ್ ಜೊತೆಗೆ ಕೈಲಾಶ್ ತೆರಳಿದ್ದ. ರಾತ್ರಿ ಪಾರ್ಟಿ ಬಳಿಕ ಯುವತಿ ಜೊತೆಗೆ ರೂಂಗೆ ಕೈಲಾಶ್ ತೆರಳಿದ್ದ. ಈ ವೇಳೆ ಮದ್ಯದ ಅಮಲಿನಲ್ಲಿ ಅತ್ಯಾಚಾರ ಎಸಗಿದ್ದಾನೆ.
ಯುವತಿ ಕಿರುಚುತ್ತಿದ್ದಂತೆ ವಾಸಿಮ್‌ನ ಕೋಣೆಗೆ ಕರೆಸಿಕೊಂಡಿದ್ದಾನೆ. ಬಳಿಕ ಆತನು ರೇಪ್ ಮಾಡಿದ್ದು, ಸದ್ಯ ಯುವತಿಯನ್ನು ಪೊರ್ಟಿಸ್ ಆಸ್ಪತ್ರೆಗೆ ದಾಖಲಿಸಿ ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗಿದೆ. ಆರೋಪಿಗಳನ್ನು ವಶಕ್ಕೆ ಪಡೆದು, ಬ್ರಿಟಿಷ್ ಹೈಕಮಿಷನ್‌ಗೂ ಪೊಲೀಸರು ಮಾಹಿತಿ ರವಾನೆ ಮಾಡಿದ್ದಾರೆ.