ಮೊಟ್ಟೆ ಆರೋಗ್ಯಕ್ಕೆಒಳ್ಳೆಯದು. ಅದರಲ್ಲೂ ಬೇಯಿಸಿದ ಮೊಟ್ಟೆ ರುಚಿಯಾಗಿಯೂ ಇರುತ್ತದೆ. ಹೆಚ್ಚು ಪೋಷಕಾಂಶಗಳಿರುವ ಆಹಾರಗಳಲ್ಲಿ ಮೊಟ್ಟೆ ಮೊದಲ ಪಂಕ್ತಿಯಲ್ಲಿ ಸಿಗುತ್ತದೆ. ಮೊಟ್ಟೆಯನ್ನು ಹಸಿಯಾಗಿಯೂ ತಿನ್ನುತ್ತಾರೆ. ಮೊಟ್ಟೆಯನ್ನು ಬೇಯಿಸಿ ತಿನ್ನುವವರೇ ಹೆಚ್ಚು. ಆದರೆ ಮೊಟ್ಟೆಯನ್ನು ಬೇಯಿಸುವಾಗ ಅದು ಒಡೆದುಹೋಗುತ್ತದೆ. ಮೊಟ್ಟೆ ಬಿರುಕು ಬಿಟ್ಟಾಗ ಬಿಳಿಯ ಭಾಗಗಳು ನೀರಿನಲ್ಲಿಯೇ ಉಳಿದುಬಿಡುತ್ತದೆ. ಇದರಿಂದ ಮೊಟ್ಟೆಯನ್ನು ತಿನ್ನಲು ಸಾಧ್ಯವಾಗುವುದಿಲ್ಲ.
ಸಾಮಾನ್ಯವಾಗಿ ಬಹುತೇಕ ಜನರು ಕೋಳಿ ಮೊಟ್ಟೆಗಳನ್ನು ಫ್ರಿಡ್ಜ್ ನಲ್ಲಿ ಶೇಖರಿಸಿಡುತ್ತಾರೆ ಮತ್ತು ಅಡುಗೆ ಮಾಡುವ ಸಂದರ್ಭದಲ್ಲಿ ಅದನ್ನು ನೇರವಾಗಿ ಹಾಗೆ ಉಪಯೋಗಿಸುತ್ತಾರೆ. ಆದರೆ ಇದು ತಪ್ಪು.
ಕೋಳಿ ಮೊಟ್ಟೆಯನ್ನು ಮೊದಲು ಕೊಠಡಿಯ ತಾಪಮಾನಕ್ಕೆ ತಂದು ಆನಂತರ ಉಪಯೋಗಿಸುವುದು ಒಳ್ಳೆಯದು. ಅತಿ ಹೆಚ್ಚು ತಂಪಿನ ವಾತಾವರಣದಲ್ಲಿರುವ ಕೋಳಿ ಮೊಟ್ಟೆಯನ್ನು ನೇರ ವಾಗಿ ಬೇಯಿಸಲು ಹೋದರೆ ಅದು ಒಡೆದು ಹೋಗುವ ಸಾಧ್ಯತೆ ಹೆಚ್ಚಾಗಿರುತ್ತದೆ.
ಏಕೆಂದರೆ ಕೋಳಿ ಮೊಟ್ಟೆ ಒಳಗೆ ತಾಪಮಾನ ಜಾಸ್ತಿಯಾಗಿ ಒತ್ತಡ ಜಾಸ್ತಿಯಾಗುತ್ತದೆ. ಹೀಗಾಗಿ ಕೋಳಿ ಮೊಟ್ಟೆಯನ್ನು ಕೊಠಡಿಯ ತಾಪ ಮಾನಕ್ಕೆ ತಂದು ಆನಂತರ ಬೇಯಿಸಿ. ಕೋಳಿ ಮೊಟ್ಟೆ ಬೇಯಿಸುವ ಸಂದರ್ಭದಲ್ಲಿ ನೀರಿಗೆ ಸ್ವಲ್ಪ ಉಪ್ಪು ಹಾಕಿ ಬೇಯಿಸಿದರೆ ಮೊಟ್ಟೆಗಳು ಒಡೆದುಕೊಳ್ಳುವುದಿಲ್ಲ ಎಂದು ಹೇಳುತ್ತಾರೆ. ಹೀಗಾಗಿ ನೀವು ಬಿಸಿ ಮಾಡಲು ಇಟ್ಟಿರುವ ನೀರಿಗೆ ಒಂದು ಟೀ ಚಮಚ ಉಪ್ಪು ಹಾಕಿ ಚೆನ್ನಾಗಿ ಕುದಿಸಿ. ಇದಕ್ಕೆ ಕೋಳಿ ಮೊಟ್ಟೆಗಳನ್ನು ನಿಧಾನ ವಾಗಿ ಸೇರಿಸಿ 10 ನಿಮಿಷಗಳ ಕಾಲ ಚೆನ್ನಾಗಿ ಬೇಯಿಸಿ.
ನೀವು ಕೋಳಿ ಮೊಟ್ಟೆಗಳನ್ನು ಬೇಯಿಸಲು ಮುಂದಾದ ಸಂದರ್ಭದಲ್ಲಿ ಬೇಯಿಸಲು ಇಟ್ಟಿರುವ ಪಾತ್ರೆಯ ವಿಸ್ತೀರ್ಣ ವನ್ನು ನೋಡಿಕೊಳ್ಳಿ. ಅದಕ್ಕೆ ತಕ್ಕಂತೆ ಮೊಟ್ಟೆಗಳನ್ನು ಕಡಿಮೆ ಪ್ರಮಾಣದಲ್ಲಿ ಹಾಕಿ ಬೇಯಿಸಿ.
ನೀವು ಹೆಚ್ಚಿನ ಪ್ರಮಾಣದಲ್ಲಿ ಕೋಳಿ ಮೊಟ್ಟೆಗಳನ್ನು ಹಾಕುವು ದರಿಂದ ಕುದಿಯುವ ಸಂದರ್ಭದಲ್ಲಿ ಅವು ಒಂದಕ್ಕೊಂದು ತಾಗಿ ಒಡೆದು ಹೋಗುವ ಸಾಧ್ಯತೆ ಇರುತ್ತದೆ. ಹೀಗಾಗಿ ಒಂದು ಬಾರಿ ಮೂರರಿಂದ ನಾಲ್ಕು ಮೊಟ್ಟೆಗಳನ್ನು ಮಾತ್ರ ಬೇಯಿಸಿ.
ಇದು ಬಹಳ ಸುಲಭವಾಗಿ ಮತ್ತು ಅತ್ಯಂತ ಪರಿಣಾಮಕಾರಿ ಯಾದ ಟ್ರಿಕ್ ಆಗಿದೆ. ಕೋಳಿ ಮೊಟ್ಟೆ ಒಡೆದು ಹೋಗದೆ ಇರಲಿ ಎಂದು ಬೇಯುವ ಸಂದರ್ಭದಲ್ಲಿ ನೀರಿಗೆ ವಿನೆಗರ್ ಸೇರಿಸುತ್ತಾರೆ.
ಆದರೆ ಇಲ್ಲಿ ಒಂದು ಅಂಶವನ್ನು ನೆನಪಿನಲ್ಲಿ ಇಟ್ಟುಕೊಳ್ಳಬೇಕು. ಏನೆಂದರೆ ಒಂದು ಕೋಳಿ ಮೊಟ್ಟೆಗೆ ಒಂದು ಟೀ ಚಮಚ ವಿನೆಗರ್ ಹಾಕಬೇಕು. ಇದರಿಂದ ಕೋಳಿ ಮೊಟ್ಟೆಯ ಹೊರಗಿನ ಶೆಲ್ ಗಟ್ಟಿ ಯಾಗುತ್ತದೆ ಮತ್ತು ಬೇಯುವ ಸಂದರ್ಭದಲ್ಲಿ ಒಡೆದು ಕೊಳ್ಳುವುದಿಲ್ಲ. ಮೊದಲಿಗೆ ಒಂದು ಪಾತ್ರೆಯಲ್ಲಿ ನೀರನ್ನು ಕುದಿಯಲು ಇಡಿ.
ಇದಕ್ಕೆ ಮೇಲೆ ಹೇಳಿದಂತೆ ಉಪ್ಪು ಅಥವಾ ವಿನೆಗರ್ ಸೇರಿಸಿ. ಕೋಳಿ ಮೊಟ್ಟೆಗಳು ಸಾಧ್ಯವಾದಷ್ಟು ಕಡಿಮೆ ಪ್ರಮಾಣದಲ್ಲಿರಲಿ ಮತ್ತು ಕೊಠಡಿಯ ತಾಪಮಾನದಲ್ಲಿ ಇರಲಿ.
ನಿಧಾನವಾಗಿ ನೀರಿನಲ್ಲಿ ಕೋಳಿ ಮೊಟ್ಟೆಗಳನ್ನು ಹಾಕಿ ಮೇಲೆ ಮುಚ್ಚಳ ಮುಚ್ಚಿ.
ಸುಮಾರು 6 ನಿಮಿಷಗಳ ಕಾಲ ಬೇಯಿಸಿದರೆ ಮೊಟ್ಟೆ ಒಳಗಿನ ಹಳದಿ ಬಣ್ಣ ನೀರಿನ ರೀತಿ ಇರುತ್ತದೆ.
ಎಂಟು ನಿಮಿಷಗಳ ಕಾಲ ಬೇಯಿಸಿದರೆ ಕೋಳಿ ಮೊಟ್ಟೆ ಮೀಡಿಯಂ ಕುಕ್ ಆಗಿರುತ್ತದೆ. ಅದೇ ಹತ್ತರಿಂದ ಹನ್ನೆರಡು ನಿಮಿಷಗಳು ಬೇಯಿಸಿದರೆ ಕೋಳಿ ಮೊಟ್ಟೆ ಸಂಪೂರ್ಣವಾಗಿ ಬೆಂದಿರುತ್ತದೆ. ಕೋಳಿ ಮೊಟ್ಟೆ ಬೇಯಿಸುವಾಗ ಗ್ಯಾಸ್ ಸ್ಟವ್ ಮೀಡಿಯಂ ಉರಿಯಲ್ಲಿರಲಿ. ಈಗ ಬೇಯಿಸಿದ ಕೋಳಿ ಮೊಟ್ಟೆಗಳನ್ನು ತಂಪಾದ ನೀರು ಹೊಂದಿರುವ ಇನ್ನೊಂದು ಬೌಲ್ ನಲ್ಲಿ ಮೂರರಿಂದ ನಾಲ್ಕು ನಿಮಿಷಗಳು ಇರುವಂತೆ ನೋಡಿಕೊಳ್ಳಿ.
ಈಗ ಸುಲಭವಾಗಿ ನೀವು ಮೊಟ್ಟೆಯ ಹೊರಭಾಗದ ಬಿಳಿ ಪದರ ವನ್ನು ತೆಗೆದು ಹಾಕಬಹುದು ಮತ್ತು ಮೊಟ್ಟೆಯನ್ನು ಆರಾಮ ವಾಗಿ ತಿನ್ನಬಹುದು.