ವಿಜಯಸಾಕ್ಷಿ ಸುದ್ದಿ, ಗದಗ: ಅಖಿಲ ಕರ್ನಾಟಕ ಮುಸ್ಲಿಂ ಮಹಾಸಭಾದ ಗದಗ ಜಿಲ್ಲಾ ಕಾರ್ಯದರ್ಶಿಗಳನ್ನಾಗಿ ಇಂಜಿನಿಯರಿಂಗ್ ಪದವೀಧರರಾದ ರಹೀಂಸಾಬ್ ಎಸ್.ದೊಡ್ಡಮನಿ ಇವರನ್ನು ರಾಜ್ಯಾಧ್ಯಕ್ಷರಾದ ಮಹ್ಮದಶಫಿವುದ್ದೀನ ಎಸ್.ನಾಗರಕಟ್ಟಿಯವರು ನೇಮಕ ಮಾಡಿ ಆದೇಶ ಹೊರಡಿಸಿದ್ದಾರೆ.
Advertisement
ಶ್ರೀಯುತರು ಗದಗ ಜಿಲ್ಲೆಯಲ್ಲಿರುವ ಮುಸ್ಲಿಂ ಸಮುದಾಯದವರನ್ನು ಸಂಘಟಿಸಿ ಅವರನ್ನು ಆರ್ಥಿಕವಾಗಿ, ಸಾಮಾಜಿಕವಾಗಿ, ಶೈಕ್ಷಣಿಕವಾಗಿ ಮತ್ತು ರಾಜಕೀಯವಾಗಿ ಸಮಾಜದ ಮುಖ್ಯವಾಹಿನಿಗೆ ತರುವಲ್ಲಿ ಶ್ರಮ ವಹಿಸಬೇಕೆಂದು ಆದೇಶಿಸಿದ್ದಾರೆ. ಮುಂಬರುವ ದಿನಗಳಲ್ಲಿ ಮುಸ್ಲಿಂ ಸಮುದಾಯದವರ ಭವಿಷ್ಯವು ಉಜ್ವಲವಾಗುವಲ್ಲಿ ಮತ್ತು ದೇಶದ ಪ್ರಗತಿಯಲ್ಲಿ ಪ್ರಮುಖ ಪಾತ್ರ ವಹಿಸುವಂತೆ ಮಾಡಲು ಕಾರ್ಯಪ್ರವೃತ್ತರಾಗಬೇಕೆಂದು ಆಶಿಸಿದ್ದಾರೆ.