ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದ ಖ್ಯಾತ ನಟ ಮತ್ತು ಚಲನಚಿತ್ರ ನಿರ್ಮಾಪಕ ದೇಬ್ ಮುಖರ್ಜಿ ನಿಧನ ಹೊಂದಿದ್ದಾರೆ. ‘ಬ್ರಹ್ಮಾಸ್ತ್ರ’ ನಿರ್ದೇಶಕ ಅಯಾನ್ ಮುಖರ್ಜಿ ಅವರ ತಂದೆ ದೇಬ್ ಮುಖರ್ಜಿ ನಿವಾಸಕ್ಕೆ ಚಿತ್ರರಂಗದ ನಟ, ನಟಿಯರು ಆಗಮಿಸುತ್ತಿದ್ದಾರೆ. ನಟ ದೇಬ್ ಮುಖರ್ಜಿಯ ಅಂತಿಮ ದರ್ಶನ ಪಡೆಯುತ್ತಿದ್ದು, ಇಂದು ಸಂಜೆಯೇ ಮುಂಬೈನಲ್ಲಿ ನಟನ ಅಂತಿಮ ಸಂಸ್ಕಾರ ನಡೆಯಲಿದೆ.
ಅಂದಹಾಗೆ, ಅಭಿನೇತ್ರಿ, ಏಕ್ ಬಾರ್ ಮುಸ್ಕುರಾದೊ, ಆಸೂ ಬನ್ ಗಯೇ ಪೂಲ್ ಇನ್ನೂ ಕೆಲವು ಸಿನಿಮಾಗಳಲ್ಲಿ ದೇಬ್ ನಟಿಸಿದ್ದಾರೆ. 2009ರಲ್ಲಿ ಬಿಡುಗಡೆ ಆದ ಶಾಹಿದ್ ಕಪೂರ್ ನಟನೆಯ ‘ಕಮೀನೆ’ ಅವರ ಕೊನೆಯ ಸಿನಿಮಾ ಆಗಿತ್ತು. ಆ ನಂತರ ಸಿನಿಮಾರಂಗದಿಂದ ಅಂತರ ಕಾಯ್ದುಕೊಂಡರು.
ದೇಬ್ ಮುಖರ್ಜಿ 1960 ಮತ್ತು 70 ರ ದಶಕಗಳಲ್ಲಿ ಅನೇಕ ಚಿತ್ರಗಳಲ್ಲಿ ನಟಿಸಿದ್ದರು. ಏಕ್ ಬಾರ್ ಮುಸ್ಕುರಾ ದೋ (1972), ಜೋ ಜೀತಾ ವೋಹಿ ಸಿಕಂದರ್ (1992), ಮತ್ತು ಲಾಲ್ ಪತ್ತಾರ್ (1971) ನಂತಹ ಚಲನಚಿತ್ರಗಳು ಅವರಿಗೆ ಉತ್ತಮ ಮನ್ನಣೆಯನ್ನು ತಂದುಕೊಟ್ಟವು.