ವಿಜಯಪುರ: 5 ಕಂಟ್ರಿ ಪಿಸ್ತೂಲ್​, 6 ಸಜೀವ ಗುಂಡುಗಳು ವಶಕ್ಕೆ – 3 ಮಂದಿ ಸೆರೆ!

0
Spread the love

ವಿಜಯಪುರ: ಅಕ್ರಮವಾಗಿ ಪಿಸ್ತೂಲ್​ಗಳನ್ನು ಹೊಂದಿದ್ದವರ ಮನೆ ಮೇಲೆ ದಾಳಿ ಮಾಡಿದ ಪೊಲೀಸರು ಒಟ್ಟು 5 ಕಂಟ್ರಿ ಪಿಸ್ತೂಲ್​ಗಳು ಹಾಗೂ 6 ಸಜೀವ ಗುಂಡುಗಳನ್ನು ವಶಪಡಿಸಿಕೊಂಡಿದ್ದು, ಪಿಸ್ತೂಲ್​ ಹೊಂದಿದ್ದ 3 ಮಂದಿಯನ್ನೂ ಬಂಧಿಸಲಾಗಿದೆ.

Advertisement

ಪೊಲೀಸರಿಗೆ ಜಿಲ್ಲೆಯಲ್ಲಿ ಅಕ್ರಮ ಪಿಸ್ತೂಲ್​ ಪೂರೈಕೆ ಮಾಡುತ್ತಿರುವ ಬಗ್ಗೆ ಮಾಹಿತಿ ಲಭ್ಯವಾಗಿತ್ತು. ಹೀಗಾಗಿ ಇಂದು ಗೋಲಗುಂಬಜ್ ವೃತ್ತದ ಇನ್ಸಪೆಕ್ಟರ್ ಮಲ್ಲಯ್ಯ ಮಠಪತಿ, ಎಪಿಎಂಸಿ ಪಿಎಸ್ ಐ ಜ್ಯೋತಿ ಖೋತ್, ಹಾಗೂ ಸಿಬ್ಬಂದಿಗಳಿಂದ ದಾಳಿ ನಡೆಸಲಾಗಿದೆ. ನಗರದ ಹವೇಲಿ ಗಲ್ಲಿ ನಿವಾಸಿ ನಯೀಮ್ ಶಾಮಣ್ಣವರ ಬಳಿಯಿದ್ದ 1 ಕಂಟ್ರಿ ಪಿಸ್ತೂಲ್, 1 ಜೀವಂತ ಗುಂಡು ವಶಕ್ಕೆ ಪಡೆಯಲಾಗಿದೆ. ನಗರದ ಭವಾನಿ ನಗರದ ನೇಹಾಲ್ ತಾಂಬೋಳಿ ಬಳಿ 3 ಕಂಟ್ರಿ ಪಿಸ್ತೂಲ್, 4 ಜೀವಂತ ಗುಂಡುಗಳನ್ನು ವಶಕ್ಕೆ ಪಡೆಯಲಾಗಿದೆ. ಯೋಗಾಪೂರ ಕಾಲೋನಿಯ ಸಿದ್ದು ಮೂಡಲಗಿ ಎಂಬಾತನ ಬಳಿ 1 ಕಂಟ್ರಿ ಪಿಸ್ತೂಲ್, 1 ಜೀವಂತ ಗುಂಡು ವಶಕ್ಕೆ ಪಡೆಯಲಾಗಿದೆ. ಒಟ್ಟಾರೆ ಮೂವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ ಪೊಲೀಸರು ತನಿಖೆ ಕೈಗೊಂಡಿದ್ದಾರೆ.


Spread the love

LEAVE A REPLY

Please enter your comment!
Please enter your name here