ಮಂಗಳೂರು: ಸಂವಿಧಾನಕ್ಕೆ ಅನುಗುಣವಾಗಿ ಇದ್ದರೆ ದೇಶದ ಎಲ್ಲಾ ಜನರು ಸಂತೋಷವಾಗಿ ಇರ್ತಾರೆ ಎಂದು ಸ್ಪೀಕರ್ ಯು.ಟಿ.ಖಾದರ್ ಹೇಳಿದ್ದಾರೆ. ಮಂಗಳೂರಿನಲ್ಲಿ ಮಾತನಾಡಿದ ಅವರು, ಅಂಬೇಡ್ಕರ್ ಸಂವಿಧಾನಕ್ಕೆ ಅನುಗುಣವಾಗಿ ಇದ್ದರೆ ದೇಶದ ಎಲ್ಲಾ ಜನರು ಸಂತೋಷವಾಗಿ ಇರ್ತಾರೆ.
ಇವತ್ತು ಈ ತಿದ್ದುಪಡಿ ಸಂವಿಧಾನ ವಿರೋಧಿಯಾಗಿದೆ. ಅದನ್ನ ಜನರು ಒಪ್ಪಲು ಸಾಧ್ಯವಿಲ್ಲ. ಏನೋ ದುರುದ್ದೇಶಪೂರ್ವಕವಾಗಿ ರೂಪಿಸಲಾದ ತಿದ್ದುಪಡಿ ಕಾಯಿದೆ ಆಗಿದೆ ಎಂದು ಹೇಳಿದರು.
ಏನೋ ಒಂದು ಉದ್ದೇಶದಿಂದ ಧ್ವನಿವರ್ಧಕ ಬಂದ್ ಮಾಡಿ ಬಿಂಬಿಸಿದ್ರು. ತಿಂಗಳುಗಟ್ಟಲೇ ನಾಟಕ ಆಯ್ತು, ಜನರಲ್ಲಿ ಗೊಂದಲ ಮೂಡಿಸಿದ್ರು. ಈಗ ಅಧಿಕಾರಿಗಳು ಬಂದು ಯಕ್ಷಗಾನವನ್ನೇ ನಿಲ್ಲಿಸ್ತಾ ಇದ್ದಾರೆ. ಯಾಕೆ ನಿಲ್ಲಿಸ್ತಾರೆ ಅಂದರೆ,
ಇವರು ಮಾಡಿದ ಕಾನೂನಿನ ಕಾರಣಕ್ಕಾಗಿ ನಿಲ್ಲಿಸ್ತಾರೆ. ಕಾನೂನನ್ನ ದುರುದ್ದೇಶ ಇಟ್ಟುಕೊಂಡು ಮಾಡಿದ್ರೆ ಹೀಗೇ ಆಗೋದು. ಒಬ್ಬೊಬ್ಬ ಅಧಿಕಾರಿ ಬಂದಾಗ ಅವರಿಗೆ ಇಷ್ಟ ಬಂದ ಹಾಗೆ ಕಾನೂನು ಪಾಲಿಸ್ತಾರೆ. ಹಾಗಾಗಿ ಸಮಸ್ಯೆಯಿಂದ ಮತ್ತೆ ಮತ್ತೆ ಸಮಸ್ಯೆ ಸೃಷ್ಟಿಸಬಾರದು ಎಂದು ತಿಳಿಸಿದರು.