ನವ ವಿವಾಹಿತೆ ಶವ ‘ನೇಣು’ ಬಿಗಿದ ಸ್ಥಿತಿಯಲ್ಲಿ ಪತ್ತೆ: ಸಾವಿನ ಸುತ್ತ ಅನುಮಾನಗಳ ಹುತ್ತ!

0
Spread the love

ಮಂಡ್ಯ:- ಜಿಲ್ಲೆಯ ಪಾಂಡವಪುರದ ಶಿಂಡಬೋಗನಹಳ್ಳಿಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ನವ ವಿವಾಹಿತೆ ಶವ ಪತ್ತೆಯಾಗಿರುವ ಘಟನೆ ಜರುಗಿದೆ. 23 ವರ್ಷದ ರಾಧಿಕಾ ಮೃತ ದುರ್ದೈವಿಯಾಗಿದ್ದು, ದಾವಣಗೆರೆ ಮೂಲದವರಾಗಿದ್ದಾರೆ. ಸಾವಿನ ಸುತ್ತ ಸಾಕಷ್ಟು ಅನುಮಾನಗಳು ಮೂಡಿದೆ.

Advertisement

ಮಂಡ್ಯ ಜಿಲ್ಲೆಯ ಶಿಂಡಬೋಗನಹಳ್ಳಿಯ ಅಜಯ್ ಗೌಡ ಎಂಬಾತನನ್ನ ಮೃತ ರಾಧಿಕಾ ಪ್ರೀತಿಸಿ ಮದುವೆ ಆಗಿದ್ದರು. ಇಷ್ಟು ದಿನ ದಾವಣಗೆರೆಯಲ್ಲೇ ಇದ್ದರು. ಆದರೆ ಊರಲ್ಲಿ ಹಬ್ಬ ಇದ್ದ ಹಿನ್ನೆಲೆ ಶಿಂಡಬೋಗನಹಳ್ಳಿ ಗ್ರಾಮಕ್ಕೆ ಆಗಮಿಸಿದ್ದರು. ಆದರೆ ಮನೆಗೆ ಸೇರಿಸಲು ಅಜಯ್ ಗೌಡ ಮನೆಯವರ ವಿರೋಧ ವ್ಯಕ್ತಪಡಿಸಿದ್ದರಿಂದಾಗಿ ಅವರ ಚಿಕ್ಕಪ್ಪನ ಮನೆಯಲ್ಲಿ ಇಬ್ಬರ ವಾಸ್ತವ್ಯವಿದ್ದರು. ಆದರೆ ಅದೇನಾಯ್ತೋ ಏನೋ ಅಜಯ್ ಚಿಕ್ಕಪ್ಪನ ಮನೆಯಲ್ಲೇ ರಾಧಿಕಾ ನೇಣು ಬಿಗಿದ ಸ್ಥಿತಿಯಲ್ಲೇ ಶವ ಪತ್ತೆಯಾಗಿದೆ.

ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಪಾಂಡವಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.


Spread the love

LEAVE A REPLY

Please enter your comment!
Please enter your name here