ನೀನೇ ನನ್ನ ಜನುಮದ ಸಂಗಾತಿ…

Vijayasakshi (Gadag News) :

ಮದುವೆ ವಾರ್ಷಿಕೋತ್ಸವದ ಶುಭಾಶಯಗಳು

“ಆರತಿ ಎತ್ತಿರೆ ವಾರಿಜ ಮುಖಿ ಸೀತಾ ದೇವಿಗೆ
ಭೂಮಿಯನಾಳುವ ರಾಜದೊರೆ ರಾಮ ಚಂದ್ರಗೆ ಆರತಿ
ನಿಮ್ಮ ದಾಂಪತ್ಯ ಸದಾ ಹಾಲು ಜೇನಿನಂತೆ ಸಿಹಿಯಾಗಿರಲಿ ಹುಳಿಯಂತಾಗದಿರಲಿ,,

ಏನೋ ಹೊಸ ಉಲ್ಲಾಸದ ಘಳಿಗೆ ,ಸೂರ್ಯ ಉದಯಿಸಿ ಭೂಮಿಗೆ ಕಿರಣಗಳ ಸೂಸಿದಂತೆ ಎನ್ನ ಬಾಳಲ್ಲಿ ನಿನ್ನ ಪ್ರೀತಿಯ ಒಲುಮೆಯ ಭಾವದ ಬಾಣಗಳು ಆಗಮನವಾಯಿತು,,

ಇರುವೆಗೆ ಸಕ್ಕರೆಯ ಸಿಹಿ ಸಿಕ್ಕಂತೆ ,ನೀ ನನ್ನ ಜೀವನಕ್ಕೆ ಕಡಲ ಮುತ್ತಂತೆ ದೊರೆತೆ,,
ಮಳೆಯಾಗಿ ಸುರಿದ ಎನ್ನ ಭಾವನೆಗಳ ಹನಿಗಳು ನಿನ್ನ ಪ್ರೀತಿಯ ಹಳ್ಳ ಹಳ್ಳಗಳಲಿ ಹರಿದು ಹೃದಯದ ಕಡಲ ನಾ ಸೇರುವಾಗ ನನ್ನ ನಿನ್ನ ಭಂದಕ್ಕೆ ಕಾಮನಬಿಲ್ಲು ಮೂಡಿತ್ತು ಸಾಕ್ಷಿಯಾಗಿ,,

ಉಸಿರ ಉಸಿರಲಿ ಬೆರೆತಿರುವೆ ನೀನು
ಈ ಉಸಿರು ಬಿಸಿಯಾದರು ಅಪ್ಪುಗೆಯ ಬಿಗಿ ಸಡಿಲವಾಗದು ನಲ್ಲ

ಹೆಣ್ಣಿಗೆ ಗಂಡೇ ಸರ್ವಸ್ವ, ಗಂಡಿಗೆ ಹೆಣ್ಣೇ ಬಾಳಿನ ದಿಕ್ಸೂಚಿ , ಹೆಣ್ಣಿಲ್ಲದ ಬಾಳು ಗಂಡಿಗೆ ಪರಿಪೂರ್ಣವಾಗದು , ಹೆಣ್ಣೇ ಗಂಡಿನ ಮೂಲ ,ಅವಳಿಲ್ಲದ ಜೀವನ ಶೂನ್ಯ ,

ಹಣೆಬರಹದಲ್ಲಿ ಬ್ರಹ್ಮ ಯಾರಿಗೆ ಯಾರು ಅಂತ ಮೊದಲೇ ಬರೆದುಬಿಡುತ್ತಾನಂತೆ ನನ್ನ ಹಣೆಯಲ್ಲಿ ಆ ಬ್ರಹ್ಮ ನಿನ್ನನ್ನೇ ಬರೆದಿದ್ದಾನೆ ,,

ನೀನು ನನ್ನ ಬಾಳಲ್ಲಿ ಬಂದಾಗಿನಿಂದ ಈ ಹೆಣ್ಣಿನ ಮನಸ್ಸು ಮಲ್ಲಿಗೆಯಂತೆ ಅರಳಿದೆ ,ನಿನ್ನ ಪ್ರೀತಿಯಲ್ಲಿ ಹೃದಯ ಹಣ್ಣಾಗಿದೆ,ಈ ಹೆಣ್ಣಿನ ಭಾವನೆಗಳು ಹಕ್ಕಿಯಂತೆ ಹಾರಡಿವೆ,

ಈ ಹೃದಯದ ಗುಡಿಯಲ್ಲಿ ನೀನೇ ದೇವರ ರೂಪವಾಗಿರುವಾಗ ,ನಿನ್ನ ದಿನನಿತ್ಯ ಪೂಜಿಸುವ ಭಕ್ತೆ ನಾನು ,ನನಗಾಗಿ ಹೊಲಿದಿರುವ ವರವು ನೀನು ,,

ಏಳೇಳು ಜನ್ಮಕ್ಕೂ ನೀನೇ ನನ್ನವನಾಗಿರುವ ಎಂದು ನಾ ನಿನ್ನಲ್ಲಿ ಹೇಳಲಾರೆ ,
ಆದರೆ ಆ ಏಳೇಳು ಜನ್ಮಕ್ಕೂ ನೀಡುವ ಪ್ರೀತಿಯನ್ನು ಈ ಒಂದು ಜನ್ಮದಲ್ಲಿ ನನಗಾಗಿ ಮಿಸಲಿಡು ಎಂದು ನಿನ್ನಲ್ಲಿ ಪ್ರಾರ್ಥಿಸುವೆ,,,

ಪ್ರತಿದಿನವು ನಿನ್ನನ್ನು ನೋಡುವಾಗ ಹೊಸಹೊಸದಾದ ಭಾವನೆಗಳ ಅನಾವರಣ ಈ ಎದೆ ಗೂಡಲ್ಲಿ ,
ನಿನ್ನಿಂದಲೇ ಚಿಲುಮೆಯ ಹೊಂಗಿರಣದ ಮುಗುಳುನಗೆ ದಿನವೂ ನನ್ನ ಮೊಗದಲ್ಲಿ ,,

ಆಲಿಸುವೆ, ಆಲಿಂಗಿಸುವೆ ,ಆರಾಧಿಸುವೆ ,ಆಸೆಗಳ ಅಲೆಯಲ್ಲಿ ತೇಲಿಸುವೇ ,ಅಂದದ ಹೂ ಮುತ್ತುಗಳನಿತ್ತು ಮುದ್ದಿಸುವೆ ,ಛೇಡಿಸುವೆ , ಹಂಬಲಿಸುವೆ ,ಹಠ ಮಾಡುವೆ ಆದರೂ ಅಂತರವಿಲ್ಲ ನಮ್ಮ ಪ್ರೀತಿಗೆ ಬಾರದಿರಲಿ ಕೂಡ ,

ಹೇಳಿಬಿಡು ನಲ್ಲ
ನಾ ನಿನಗೆ ಸಿಹಿ ಗೆಣಸ
ಕಹಿಯಾಗುವ ಮರಗೆಣಸ

ಈ ಹೆಣ್ಣಿನ ಹೃದಯದೊಳಗೆ ಗಂಡ ಎಂದು ನಿನ್ನ ಪ್ರತಿಮೆಯ ಪ್ರತಿದಿನವೂ ಪೂಜಿಸುವಾಗ ,,
ಪಚ್ಚೆ ಕರ್ಪೂರದಂತೆ ,ಗಂಧದ ಕಡ್ಡಿಯಂತೆ ,
ಬೆಳಗುವ ಜ್ಯೋತಿಯಂತೆ ನೀ ನರ್ತನ ಮಾಡುವಾಗ ನಿನ್ನೆಸರ ಹೇಳಿ ನೀ ಕಟ್ಟಿದ ಮಾಂಗಲ್ಯಕ್ಕೆ ಆರಿಸಿಣ ಕುಂಕುಮ ಹಚ್ಚುವಾಗ ಎದುರಿಗೆ ನೀ ಬಂದು ನಿಂತು ದೀರ್ಘ ಸುಮಂಗಲಿ ಭವ ಶೀಘ್ರ ಪುತ್ರ ಪ್ರಾಪ್ತಿರಸ್ತು ಎಂದು ನನ್ನ ನೀ ಆಶೀರ್ವಾದಿಸುವಾಗ ಈ ಜೀವಕ್ಕೆ ಇನ್ನೇನು ಬೇಕು ಇನ್ನೊಂದು ಜನ್ಮ ನಾ ಬೇಡೆನು ,,,

✍️ಕವಿತೆಗಳ ಸಾಲಲ್ಲಿ ಲೋಹಿತ್

ಕ್ಷಣ ಕ್ಷಣದ ಸುದ್ದಿ, ಮಾಹಿತಿ ಮನೋರಂಜನೆಗಾಗಿ ನಮ್ಮ FacebookTwitterYouTube ಅನುಸರಿಸಿ.

Leave A Reply

Your email address will not be published.