ಇಂದು ಪುನೀತ್ ರಾಜ್‍ಕುಮಾರ್ 50ನೇ ಹುಟ್ಟುಹಬ್ಬ: ಅಪ್ಪು ಸಮಾಧಿ ಬಳಿ ಅಭಿಮಾನಿಗಳ ಸಂಭ್ರಮಾಚರಣೆ

0
Spread the love

ಬೆಂಗಳೂರು: ಅಭಿಮಾನಿಗಳ ಆರಾಧ್ಯ ದೈವ ಪುನೀತ್ ರಾಜ್‌ಕುಮಾರ್‌ಗೆ0ನೇ ವರ್ಷದ ಹುಟ್ಟುಹಬ್ಬದ ಸಂಭ್ರಮ. ಅಭಿಮಾನಿಗಳು ರಾತ್ರಿಯಿಂದಲೇ ಕಂಠೀರವ ಸ್ಟುಡಿಯೋದಲ್ಲಿರುವ ಅಪ್ಪು ಸಮಾಧಿ ಬಳಿ ಹುಟ್ಟುಹಬ್ಬ ಆಚರಣೆಯಲ್ಲಿ ತೊಡಗಿದ್ದಾರೆ.

Advertisement

ಇನ್ನೂ ರಾಜ್ಯಾದ್ಯಂತ ಅಭಿಮಾನಿಗಳು ನಟ ಪುನೀತ್ ರಾಜ್​ಕುಮಾರ್​ ಜನ್ಮದಿನವನ್ನು ಆಚರಿಸುತ್ತಿದ್ದಾರೆ. 50ನೇ ವರ್ಷದ ಬರ್ತ್​ಡೇ ಆದ್ದರಿಂದ ಈ ಬಾರಿ ಸ್ಪೆಷಲ್ ಆಗಿದೆ. ಸಮಾಧಿ ಸ್ಥಳಕ್ಕೆ ಅಭಿಮಾನಿಗಳು, ಕುಟುಂಬದವರು ಹಾಗೂ ಸೆಲೆಬ್ರಿಟಿಗಳು ಭೇಟಿ ನೀಡುತ್ತಿದ್ದಾರೆ.

ಅಪ್ಪು ಅಭಿಮಾನಿಗಳು ಅನ್ನದಾನ, ರಕ್ತದಾನ, ನೇತ್ರದಾನ ನೋಂದಣಿ ಸೇರಿದಂತೆ ಅನೇಕ ಬಗೆಯ ಕಾರ್ಯಗಳನ್ನು ಕೈಕೊಳ್ಳುತ್ತಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಕೂಡ ಪುನೀತ್ ಅವರಿಗೆ ಜನ್ಮದಿನದ ಶುಭಾಶಯ ಕೋರುವ ಮೂಲಕ ಸ್ಮರಿಸಲಾಗುತ್ತಿದೆ. ಕನ್ನಡ ಚಿತ್ರರಂಗಕ್ಕೆ ಪುನೀತ್ ರಾಜ್​ಕುಮಾರ್ ಅವರು ನೀಡಿದ ಕೊಡುಗೆಯನ್ನು ಮರೆಯುವಂತಿಲ್ಲ.

ಬಾಲನಟನಾಗಿಯೇ ಅಭಿಮಾನಿಗಳ ಮನಗೆದ್ದ ಅವರು ಹೀರೋ ಆಗಿ ಕೂಡ ಗಟ್ಟಿಯಾಗಿ ನೆಲೆನಿಂತರು. ಅಭಿನಯ, ಡ್ಯಾನ್ಸ್, ಫೈಟಿಂಗ್​ನಲ್ಲಿ ಅಪ್ಪು ಅವರಿಗೆ ಸರಿಸಾಟಿ ಯಾರಿಲ್ಲ. ಅದೇ ರೀತಿ ಜನಪರ ಕಾರ್ಯಗಳ ಮೂಲಕ ಕೂಡ ಅವರು ರಿಯಲ್ ಹೀರೋ ಎನಿಸಿಕೊಂಡರು. ಆ ಗುಣಗಳು ಅಭಿಮಾನಿಗಳಿಗೆ ಮಾದರಿ ಆಗಿವೆ.

 


Spread the love

LEAVE A REPLY

Please enter your comment!
Please enter your name here