ಪ್ರೀತಿಯ ಮಾಯಾಮೃಗ

Vijayasakshi (Gadag News) :

ಪ್ರೀತಿಯ ಎರಡಕ್ಷರದ ಅರ್ಥ ತಿಳಿದವನು ಮನಸ್ಸನ್ನು ಎಷ್ಟು ಸಹನೆ ತಾಳ್ಮೆಯಿಂದ ನಡೆಸುವುದನ್ನು ಕಲಿಯುವುವನು ..

ಕಣ್ಣಾದವಳು…….

“ಪ್ರೀತಿ ಸಿಗಲಿಲ್ಲ ಅಂತ ಮೂರ್ಖರ ಹಾಗೆ ಪ್ರಾಣ ಕಳೆದುಕೊಳ್ಳೋದು …
ಪ್ರೀತಿಸಿದ ಹುಡುಗಿಯ ಜೀವನ ನಾಶಮಾಡೋದು. ಆಸಿಡ್ ಹಾಕೋದು ಇದು ಪ್ರೀತಿಯ ಅರ್ಥಗಳಲ್ಲ..

“ಪ್ರೀತಿ ಎಂದರೆ ದೇವರು ….
ದೇವರನ್ನು ಪೂಜಿಸಲು ಸಕಲ ಕಾರ್ಯಗಳನ್ನು ಸಿದ್ಧತೆ ಮಾಡಿ ನಂತರ ನೈವೇದ್ಯ ಇಟ್ಟು ಮನಸಿನ ಹರಕೆಯನ್ನು ಎಷ್ಟು ನಿಷ್ಠೆಯಾಗಿ ಹೇಳುವೆವೋ ಹಾಗೆ ಪ್ರೀತಿಯ ಹರಕೆಯನ್ನು ತಾನು ಪ್ರೀತಿಸಿದ ಹುಡುಗಿಗೆ ನಿಷ್ಠೆಯಾಗಿ ಹೇಳಬೇಕು…
ವರ ಕೊಡೋದು ಬಿಡೋದು ಆ ಹೆಣ್ಣಿನ ಮನಸಿಂತಾರಳದ ನಿರ್ಣಯ….
ವರ ಯಾವುದೇ ಇದ್ದರು ಅದನ್ನು ಸ್ವೀಕರಿಸಿ ಮುಂದೆ ನಡೆಯುವುದೇ ಮನುಷ್ಯನ ನಿಜ ಗುಣ …

“ನೀ ಇಷ್ಟ ಪಟ್ಟವರು ಒಪ್ಪಲಿಲ್ಲ ಅಂದ ಮಾತ್ರಕ್ಕೆ ದ್ವೇಷ ಸಾಗಿಸುವುದು ನಿಜ ಗುಣಕ್ಕೆ ಅರ್ಥವಿಲ್ಲ?
ಪ್ರೀತಿ ಎಂದರೆ ನಾಲ್ಕು ದಿನ ಕೈ ಕೈ ಹಿಡಿದು ಸುತ್ತಾಡಿ ಐದನೇ ದಿನಕ್ಕೆ ಬೈ ಎಂದು ಹೇಳಿ ಹೋಗುವುದಲ್ಲ..

“ಪ್ರೀತಿ ಹುಟ್ಟೋಕೆ ಒಂದು ಕಾರಣವಾದರೆ ?
ಅದೇ ಪ್ರೀತಿನ ಕೊಲ್ಲೊಕೆ ನೂರಾರು ಕಾರಣಗಳು ಉದ್ಭವ ಆಗುತ್ತವೆ ಆ ಕಾರಣಗಳನ್ನು ನಾವು ಕೊಲ್ಲುತ್ತ ಹೋದರೆ ಒಂದು ಕಾರಣದಿಂದ ಹುಟ್ಟಿದ ಪ್ರೀತಿ ಗೆಲುತ್ತ ಹೋಗುತ್ತೆ …

“ಪ್ರೀತಿ ಗೆಲ್ಲುತ್ತ ಹೋದಷ್ಟು ಜೀವನಕ್ಕೆ ಒಂದು ಅರ್ಥ ಸಿಗೋಕೆ ಪ್ರೀತಿ ಅನ್ನೋದು ಭಾವನೆಗಳ ಮೇಲೆ ಹುಟ್ಟುತ್ತಾದಾರು ಅದು ಬದುಕಿ ಬರೋದು ನಂಬಿಕೆ ಮೇಲೆನೆ .ಆ ಪ್ರೀತಿ ಅನ್ನೋದು ಹೇಗೆಲ್ಲ ತಿರುಳು ಪಡೆದು ಮತ್ತೆಲ್ಲಿಯೂ ತಿರುಗಾಡಿ ಇನ್ನೆಲಿಯೋ ಮರೆಯಾಗಿ ಹೋಗುತ್ತದೆ ಅನ್ನೋದಿಕೆ ಈ ಕಥೆ …

“ಕನಸಾದ ಹುಡುಗಿ …
ಅಂದು ಕಾಯುತ್ತಿದ್ದೆ ನಾನು .ನೀನು ಬಂದೆ ಬರುತ್ತಿಯ ಎಂದು .ನನ್ನ ನಂಬಿಕೆಯನ್ನು ಹುಸಿಗೊಳಿಸದ ನೀನು ನನ್ನನ್ನು ನೋಡಲು ಬಂದು ಬಿಟ್ಟೆ.

“ಇಂದು ಕೂಡ ಮತ್ತೆ ಅದೇ ಸ್ಥಳದಲ್ಲಿಯೇ ಕಾಯುತ್ತಿದ್ದೇನೆ .ಅದು ನೀನು ಬರುವುದಿಲ್ಲ ‘ಎಂದು ಗೊತ್ತಿದ್ದು .ನಿನಿಂದು ಬರುವುದಿಲ್ಲ .ಏಕೆಂದರೆ ಮತ್ತೆ ತಿರುಗಿ ಬರಬಾರದು ಎನ್ನುವ ಉದ್ದೇಶದಿಂದ ಅಲ್ಲವೇ ನಾ ಕೊಟ್ಟ ಪ್ರೀತಿಯ ಕಾಣಿಕೆಗಳನ್ನೆಲ್ಲ ನನ್ನೆದುರು ಎಸೆದು ನಡೆದದ್ದು ?ಅದೆಲ್ಲವೂ ಇಂದು ನೆನೆಪು ಮಾತ್ರ .

“ಆದರೆ ನೀನು ನನನ್ನು ಬಿಟ್ಟು ಹೋದ ಸ್ಥಳದಲ್ಲಿಯೇ…..
ನೀನಿದ್ದಿಯ ಎನ್ನುವಂತಹ ಹುಚ್ಚು ಭ್ರಮೆಯು .ನನ್ನುನ್ನು ಮತ್ತೆ ಇಲ್ಲಿ ಕಾಯುವಂತೆ ಮಾಡಿದೆ…..

“ನಿನ್ನ ಕಾಯುವಿಕೆ ಸಮಯದಲ್ಲಿಯೇ .ನಮಗಾಗಿ ಕಾದಿದ್ದ ಸುಂದರ ಸಂಜೆ ರಕ್ತಮಯವಾಗಿ ಸಾಯುತ್ತಿದೆ .ಸತ್ತ ಸೂರ್ಯನ ನೆನಪಲ್ಲಿ ಆಗಸ .ಮಂಜಿನ ರೂಪದಲ್ಲಿ ಕಣ್ಣೀರು ಸುರಿಸುತ್ತಿದೆ .ಇವೆಲ್ಲದರ ನಡುವೆಯೇ ಮನಸೆಕೋ ಆ ಹಳೆಯ ನೆನಪುಗಳ ಸುತ್ತಲೂ ಗಿರಕಿ ಹೊಡೆಯುತ್ತಿದೆ ..

“ಅತ್ತ ಸಾಗರದಂಚಿನಲ್ಲಿ .ನೀನು ಕುಳಿತುಕೊಳ್ಳುತ್ತಿದ್ದ ಬಂಡೆಗಲ್ಲುಗಳಿಗಿಂದು ಮಹಾರಾಣಿ ಇಲ್ಲದ ಸಿಂಹಾಸನದಂತೆ ಗೋಚರಿಸುತ್ತಿವೆ .

“ಅಂದು ನಮ್ಮನ್ನು ಕಂಡು ಹುಚ್ಚೆದ್ದು ಕುಳಿತಲ್ಲಿಗೆ ಬಂದು ನಿನ್ನ ಪಾದಕ್ಕೆ ಮುತ್ತಿಕ್ಕಿ ಹೋಗುತ್ತಿದ್ದ ಸಾಗರದ ಅಲೆಗಳು ಇಂದು ವಿರಹ ವೇದನೆಯಲ್ಲಿ ಮಕಡೆ ಮಲಗಿಬಿಟ್ಟಿವೆ .ಕುಡಿದ ಅಮಲಿನಲ್ಲಿ ಕಂದ ಪದ್ಯ ಹಾಡಿದಂತೆ ಬೀಸುತ್ತಿದ್ದ ಆ ತಂಗಾಳಿಯು ಕೂಡ ಇಂದು ವಿರುದ್ಧ ದಿಕ್ಕಿನಲ್ಲಿ ಬಿಸುತ್ತಿದೆ …

“ನನ್ನ ಈ ಸದ್ಯದ ಪರಿಸ್ಥಿತಿ ಜಾತ್ರೆಯಲ್ಲಿ ಅಮ್ಮನಿಂದ ತಪ್ಪಿಸಿಕೊಂಡ ಮಗುವಿನಂತಾಗಿದೆ.ರೈಲು ತಪ್ಪಿಸಿಕೊಂಡ ಪ್ರಯಾಣಿಕನಂತೆ ಅತ್ತಿಂದ ಇತ್ತ ಅಲೆಯುತ್ತಿದ್ದೇನೆ …

“ನಾನು ಮೊದಲಿನಿಂದಲೂ ಕವಿತೆ ಬರೆಯುವ ಒಬ್ಬ ಕಲಾವಿದ ಒಬ್ಬ ಹುಚ್ಚು ಕವಿ …ನನ್ನೊಳಗೊಬ್ಬ ಕವಿ ಅಡಗಿದ್ದ .ನಾ ಬರೆದ ಕವಿತೆಗಳನ್ನು ಇನ್ನೊಬ್ಬರ ಜೊತೆ ಹಂಚಿಕೊಳ್ಳುವುದು ಹೇಗಿದೆ ಎಂದು ಕೇಳುವುದು ಹೀಗೆ ನನ್ನ ಕವಿತೆಯ ಲೋಕದಲ್ಲಿ ನನ್ನದೇ ಆದ ಒಂದು ಬದುಕು ಕಲ್ಪಿಸಿಕೊಂಡಿದ್ದೆ…

“ಒಂದು ವೇಳೆ ಅಂದು ನೀನು ನನ್ನನ್ನು ನೋಡಿ ನನಗಾಗಿ ಕವಿತೆ ಬರೆದು ಕೊಡು ಎಂದು ಕೇಳದೆ ಇದ್ದಿದ್ದರೆ ..ನನ್ನದೇ ಆದ ಕವಿತೆಯ ಲೋಕದೊಳಗೆ ಕವಿತೆಯ ಭಾವದೊಳಗೆ ಒಂಟಿ ಸಂಚಾರಿಯಾಗಿ ನೆಮ್ಮದಿಯಾಗಿ ಇರುತ್ತಿದ್ದೆ..

“ಆದರೆ ನೀನು ಕೇಳಿದ ಮರುಕ್ಷಣ ನಿನಗಾಗಿ ಕವನಗಳ ಬರೆದು ನಿನ್ನೊಂದಿಗೆ ಹೇಳುತ್ತಿದ್ದರೆ ಮೈಮರೆತು ಕೇಳುತ್ತಿದ್ದೆ ….
ಅಂದು ಮೈ ಮರೆತು ಕೇಳಿದ ಎಲ್ಲ ಕವನಗಳಿಗೆ ಸೋತು ಪ್ರೇಮದೊಲೇಯ ಕರೆಯ ಕಣ್ಣಸನ್ನೆಯಲಿ ರವನಿಸಿದ್ದೆ …ಆದರೆ ನನ್ನ ಬದುಕನ್ನು ಒಂದು ಅಲ್ಟಿಮೇಟ್ ಆಘಾತಕ್ಕೆ ಒಡ್ಡುತ್ತಿಯ ಎಂದುಕೊಂಡಿರಲಿಲ್ಲ….

“ಕಣ್ಣಲ್ಲಿ ಪ್ರೇಮದ ಪಾರಿಜಾತವನ್ನು ಅರಳಿಸಿ ನಿಂತ ನಿನ್ನನು ತಿರಸ್ಕರಿಸುವುದಕ್ಕೆ ನನ್ನಿಂದಾಗದೇ .
ಒಂದೇ ಉಸಿರಿನಲ್ಲಿ. ಐ ಲವ್ ಯು ಎಂದು ಹೇಳಿ ಬಿಟ್ಟೆ .
ನಂತರ ಶುರುವಾಯಿತ್ತು ನಮ್ಮ ಪ್ರೀತಿಯ ದಂಡಯಾತ್ರೆ .
ದಿನೇ ದಿನೇ ಮನಸ್ಸಿನಲ್ಲಿ ನಿನ್ನ ಮೇಲಿನ ನಿರೀಕ್ಷೆಗಳ ಮೆರವಣಿಗೆಯೇ ಆರಂಭವಾಯಿತು .ಇಬ್ಬರು ಸುತ್ತದ ಪಾರ್ಕುಗಳಿಲ್ಲ….ಅಲ್ಲಿ ಕುಳಿತು ನಿನಗಾಗಿ ರಚಿಸಿದ ಕವನಗಳು ನನಗೆ ಕಮ್ಮಿ ಎನಿಸಲಿಲ್ಲ ನಾ ನಿನಗಾಗಿ ಬರೆದ ಕವನಗಳ ಹೇಳುತ್ತಿದ್ದರೆ ಆ ಕವನದ ಸಾಲುಗಳಂತೆ ನೀನು ಅಭಿನಯಿಸುತ್ತಿದ್ದೆ..

“ನಮ್ಮಿಬ್ಬರ ಮಾತುಗಳಿಗೆ ಕೊರತೆನೆ…ಇರಲಿಲ್ಲ ….ಅಮೋಘ ಒಂದು ವರ್ಷ ಪ್ರೇಮಲೋಕದ ಪಕ್ಷಿಗಳ ತರ ಬಹುದೂರ ಸಾಗಿದ್ದೆವು…..ಆ ಸಂಜೆ ಸಾಗರದ ತಟದಲ್ಲಿ ನಿನಗೋಸ್ಕರ ಕಾಯುತ್ತ ನಿಂತಿದ್ದೆ..

“ಬಂದವಳೇ ಮನಸ್ಸು ಮೌನಾವಾಗುವ ರೀತಿಯಲ್ಲಿ
ಮತ್ತೆ ತುಟಿಗಳು ಪ್ರೀತಿ ಎಂಬ ಪದವ ಹೇಳದ ಹಾಗೆ
ಕಡಲಿನ ಅಲೆಗಳು ಮತ್ತೆ ನಿನ್ನ ಸೋಕದ ಹಾಗೆ ಇನ್ನು ಈ ಸುತ್ತಾಟ ಸಾಕು ..
ನನ್ನನ್ನು ನೋಡುವ ಯತ್ನ ಮಾಡಬೇಡ ಗುಡ್ ಬೈ ಎಂದು ಹೇಳಿ ನಿ ಹೊರಟು ಹೋದೆ…

“ಇಂದು ನನ್ನನ್ನು ನಿ ಏಕೆ ಬಿಟ್ಟು ಹೋದೆ?
ಎಂದು ಕೇಳುವುದಿಲ್ಲ ..ಕಾರಣಗಳು ಸಾವಿರಾರು ಇರಬಹುದು ..ಒಂದು ಮಾತು. ಒಂದು ಹುಸಿ ಮುನಿಸು …ಏನೇ ಇರಬಹುದು ..

“ಆದರೆ ನಾನು ಕೇಳುವುದು ಇಷ್ಟೇ .ವಿನಾಕಾರಣ ನನ್ನನ್ನು ಪ್ರೀತಿಸಿದ್ದೆಕ್ಕೆ? ಪ್ರೀತಿಸಿದ ರೀತಿ ಮಾಡಿದ್ದೇಕೆ? ಕಾರಣ ನನಗೆ ತಿಳಿಯುತ್ತಿಲ್ಲ ನಿನ್ನ ಬಲವಂತ ಪ್ರೀತಿಯು ನನಗೆ ಬೇಕಿಲ್ಲ …

“ಗಿಳಿಯನ್ನು ಪಂಜರದಲ್ಲಿ ಕೂಡಿಟ್ಟು ಘಳಿಗೆ ಘಳಿಗೆಗೆ ಊಟ ನೀರು ಕೊಟ್ಟರೆ ಆ ಗಿಳಿಯನ್ನು ನಾನು ಪ್ರೀತಿ ಮಮತೆ, ವಾತ್ಸಲ್ಯದಿಂದ ಸಾಕುತ್ತಿದ್ದೇನೆ ಎಂದುಕೊಳ್ಳುವುದು ನನ್ನ ಮೂರ್ಖತನ ….

“ಪ್ರೀತಿ ಎಂದರೆ ಜೀವನ ಎನ್ನುತ್ತಾರೆ .ಆದರೆ ಅದು ಜೀವನದ ದಿಕ್ಕನ್ನು ತಪ್ಪಿಸುವ ಮಾಯಾಮೃಗ ಎಂದು ನಿನ್ನಿಂದ ತಿಳಿದುಕೊಂಡೆ ಆದರೂ ನಿನ್ನ ಮೇಲೇ ನನಗೆ ದ್ವೇಷವಿಲ್ಲ ನೀನು ಕೆಟ್ಟವಳಲ್ಲ.ಇಬ್ಬರಲ್ಲಿಯೂ
ಇಷ್ಟ ಎಂಬ ಪದವು ಪ್ರೀತಿಯಾಗಿ ಪರಿಣಮಿಸಿತು ಆದರೆ ಕೊನೆವರೆಗೂ ಇಷ್ಟದ ಪದವು ಕಷ್ಟದ ನೆನಪು ಕೊಟ್ಟು ಹೋಗುವೇ ಎಂಬ ಸುಳಿವು ಕೊಡಲಿಲ್ಲ ಅಷ್ಟೇ”

“ಸದ್ಯಕ್ಕಂತೂ ನಿನ್ನ ಮೇಲಿನ ನಿರೀಕ್ಷೆಗಳ ಮೆರವಣಿಗೆ ಸ್ತಬ್ಧವಾಗಿದೆ .ಆದರೆ ನೀನು ನನ್ನಲಿಯೇ ಇದ್ದಿಯೇ ಎನ್ನುವ ಭ್ರಾಂತಿ ಅಧಿಕವಾಗಿದೆ..ಹೀಗಾಗಿ ಮತ್ತೆ ಮತ್ತೆ ನೀನು ಬಿಟ್ಟು ಹೋದ ಸ್ಥಳದಲ್ಲಿಯೇ ನಾ ಕಾಯುತ್ತಿರುತ್ತೇನೆ ..ಕೈಯಲ್ಲಿ ಒಂದು ಪೆನ್ನು ಹಿಡಿದು ನಿನಗಾಗಿ ಕವಿತೆ ಬರೆದು ಹೇಳಲು…

ಆದರೂ ನೀನು ನನ್ನ ಬಾಳಿಗೆ ವ್ಯತೆಯಾದೇ ನನ್ನ ಕವಿತೆಯ ಸಾಲಿಗೆ ಕತೆಯಾದೇ….

✍️ಕವಿತೆಗಳ ಸಾಲಲ್ಲಿ ಲೋಹಿತ್

ಕ್ಷಣ ಕ್ಷಣದ ಸುದ್ದಿ, ಮಾಹಿತಿ ಮನೋರಂಜನೆಗಾಗಿ ನಮ್ಮ FacebookTwitterYouTube ಅನುಸರಿಸಿ.

Leave A Reply

Your email address will not be published.