ನಿರಂತರ ಪ್ರೇಮ ಕಾವ್ಯ

Vijayasakshi (Gadag News) :

ಒಂದು ಸಣ್ಣ ಪ್ರೇಮ ಕಥೆ ನಿಮ್ಮ ಮುಂದೆ,

“ನಾನು ಪ್ರತಿದಿನವೂ ಅಲ್ಲಿಗೆ ಹೋಗುತ್ತಿದ್ದೆ, ಆ ಮರದಡಿಯಲ್ಲಿನ ಖಾಲಿ ಬೆಂಚುಗಳನ್ನು ನೋಡುತ್ತೇನೆ ,ಹೌದು ಅವುಗಳು ಈಗ ಬೆಂಚುಗಳಾಗಿ ಉಳಿದಿವೆ,

“ಆದರೆ ಆ ಬೆಂಚುಗಳು ,ಒಂದು ಪ್ರೇಮ ಕಥೆಗೆ ಸಾಕ್ಷಿ ಯಾಗಿವೆ ,ಅವನಿಗಾಗಿ ಅವಳು ,ಅವಳಿಗಾಗಿ ಅವನು , ಕಾಯುತ್ತ ಕನವರಿಸುತ್ತ ,ಕಂಡ ಹುಸಿ ಮುನಿಸು ತೋರಿಸುತ್ತ ,ಇರುತ್ತಿದ್ದ ಆ ಕಣ್ಣುಗಳು ,

“ಅವರ ಮನದಲ್ಲಿ ಪುಟಿದೇಳುತ್ತಿದ್ದ ತುಮುಲುಗಳು,ಒಬ್ಬರನೊಬ್ಬರು ಕಾಯುತ್ತಿದ್ದ ಕಾತರತೆಯ ಕಣ್ಣುಗಳು ,ಈಗಂತೂ ಕಾಣುತ್ತಿಲ್ಲ ಏಕೆಂದರೆ ಅವರಿಬ್ಬರ ಜೀವನದಲ್ಲಿ ಬಂದ ಪ್ರೀತಿ ಎಂಬ ತಂಗಳಿಯು ಈ ಸಮಾಜದ ಬಿಸಿಯುಸಿರಲ್ಲಿ ಬಿಸಿಯಾಗಿ ಅವರಿಬ್ಬರ ಜೀವನವನ್ನು ದಹಿಸಿ ಮತ್ತೆಲ್ಲಿಯೂ ಸಾಗಿ ಹೋಗಿದೆ,

“ಅವನು ಈಗಲೂ ಅಲ್ಲಿಗೆ ಬರುತ್ತಾನೆ , ಅದೇ ಕಾತರತೆ ,ಅದೇ ತುಮುಲ, ಆದರೆ ಅದೆಲ್ಲ ಬರೀ ನಿರೀಕ್ಷೆ ,ನಿರೀಕ್ಷೆ ಗಳಷ್ಟೇ ,ಏಕೆಂದರೆ ,ಅವನ ಜೀವನ ತಿರುಗಿ ನೋಡಲಾಗದಷ್ಟು ಹಾಳಾಗಿ ಹೋಗಿದೆ, ತಿರುಗಿ ನೋಡಿದರೆ, ಬರೀ ಹಾಳಾದ ರಸ್ತೆ ಯಲ್ಲಿ ಕಾಣುವ ಗುಂಡಿ ಗಳಂತೆ ಇಲ್ಲೊಂದು ಅಲ್ಲೊಂದು ಕಾಡುವ ನೆನಪು, ನೆನಪುಗಳಷ್ಟೇ,

“ಅಂದು ಸಂಜೆ, ಮಳೆ ಜೋರಾಗಿ ಬಲು ಜೋರಾಗಿ ಬರುತ್ತಿದ್ದ ಸಮಯ ,ಅವಳು ಮಳೆಯಲ್ಲಿ ನೆನೆಯುತ್ತಾ ಹೋಗುತ್ತಿದ್ದಳು, ಅಷ್ಟರಲ್ಲಿ ಅವಳಿಗೆ ಮಳೆ ನಿಂತಂತಹ ಅನುಭವ, ಏಕೆಂದರೆ ಅವಳನ್ನು ಯಾವುದೋ ಒಂದು ವಸ್ತು ಮಳೆಯಿಂದ ರಕ್ಷಿಸುತ್ತಲಿತ್ತು, ಹೌದು ಅವನು ,ಅವಳಿಗೆ ಕೊಡೆಯನ್ನು ಹಿಡಿದಿದ್ದ, ಅವಳಿಗೆ ಬೇಡವೆನ್ನಲು ಸಾಧ್ಯವಾಗದೆ ಬೇಕು ಎಂದು ಹೇಳಲಾಗದೇ ಒಂದು ಕ್ಷಣ ಅವನ ಕಡೆ ನೋಡಿ ಸುಮ್ಮನಾಗಿ ಬಿಟ್ಟಳು,

ಅವನು ತನ್ನ ಪರಿಚಯ ಮಾಡಿಕೊಂಡ ಅವಳು ಮೌನಾವಾಗಿದ್ದಳು,”ಆಯ್ತು ತಗೊಳ್ಳಿ ಮಳೆ ಜೋರಾಗಿ ಬಿಳುತ್ತಿದ್ದೆ “ಎಂದು ಅವಳು ಬೇಡವೆಂದರೂ ,ಕೊಡೆಯನ್ನು ಅವಳಿಗೆ ನೀಡಿ ಕ್ಷಣಾರ್ಧದಲ್ಲಿ ಮಳೆಯಲ್ಲಿ ನೆನೆಯುತ್ತ ಮರೆಯಾಗಿದ್ದ,ಅವಳಲ್ಲಿ ಏನೋ ಆತಂಕ,

ಮರುದಿನ ಅವನು ,ಅವಳಿಗಾಗಿ ಅದೇ ಜಾಗದಲ್ಲಿ ಕಾಯುತ್ತಿದ್ದ,ಅವಳು ಬಂದಳು ,ಅವನು ಅವಳನ್ನು ಹಿಂಬಲಿಸತೊಡಗಿದೆ ,ಪ್ರತಿ ದಿನ ಇದೆ ಆಟ ನಡೆಯತೊಡಗಿತ್ತು,ಒಮ್ಮೆ ಅವಳು ಹಿಂತಿರುಗಿ ನಿಂತು ಅವನ್ನೋನಮ್ಮೆ ದಿಟ್ಟಿಸಿ ನೋಡಿ,ನಿನಗೆ ನಾಚಿಕೆಯಗಲ್ವಾ !ಯಾವತ್ತೂ ಒಂದು ದಿನ ಸಹಾಯ ಮಾಡಿದೇ ಅಂತ ಹಿಂದೆ ಬರ್ತೀರಲ್ಲ “ಎಂದಳು, ತಪ್ಪು ತಿಳ್ಕೋಬೇಡ್ರಿ ನಾನು ನಿಮನ್ನು ಹಿಂಬಾಲಿಸುತ್ತಿಲ್ಲ ,ನಾನು ನಿಮ್ಮ ಹಿಂದೇ ಬರುತ್ತಿರುವುದು ನಿಮಗಾಗಿ ಅಲ್ಲ,ನಾನು ಅಂದು ಕೊಟ್ಟ ಕೊಡೆಗಾಗಿ ,ನೀವೇ ಅರ್ಥ ಮಾಡಿಕೊಂಡು ಕೊಡ್ತೀರಾ ಅಂತ ಕಾದೆ ,ನೀವು ತಪ್ಪು ತಿಳಿದುಕೊಂಡರಿ,ನನಗೆ ಆ ಕೊಡೆಯ ಮೇಲೆ ಪ್ರೀತಿ ,ಮೋಹ,ಆರಾಧನಾ ಭಾವ,ಯಾಕ್ ಗೊತ್ತಾ?ಅದೊಂದೇ ನಮ್ಮಪ್ಪ ನನಗೆ ಅಂತ ಬಿಟ್ಟುಹೋದಂತಹ ನೆನಪು,ಅದು ನನ್ನ ಜೊತೆ ಇಲ್ಲ ಅಂದರೆ ಏನೋ ಕಳೆದುಕೊಂಡತಹ ಅನುಭವ,ಅದಕ್ಕೆ ನಿಮ್ಮನ್ನು ಹಿಂಬಾಲಿಸಿದೇ “ಎಂದು ಹೇಳತೊಡಗಿದೆ ,ಅವನನ್ನು ಅವಳು ಗಾಬರಿಯಿಂದ ನೋಡತೊಡಗಿದಳು ,ಏಕೆಂದರೆ ,ಆ ಕೊಡೆ ಕಳೆದು ಹೋಗಿ ತುಂಬಾ ದಿನಗಳೇ ಆಗಿ ಹೋಗಿದ್ದವು,ಅವಳು ಬಿಕ್ಕಳಿಸತೊಡಗಿದಳು ,ಅವನ ಮುಂದೆ ತಲೆ ತಗ್ಗಿಸಿ ನಿಂತಳು “ರಿ ಯಾಕ್ರೀ ಅಳ್ತಿದ್ದೀರ ?ನಾನು ಕೇಳಿದ್ದು ಕೋಡೇನ ,ನಿಮ್ಮ ಹೃದಯಾನ ಅಲ್ಲ”ಎಂದ ಕ್ಷಣದಲ್ಲಿಯೇ ಹುಡುಗನಿಗೆ ಗೊತ್ತಾಗಿ ಹೋಯಿತು ,ಮಾತನಾಡದೆ ,ಅವಳು ಕೂಗಿದರು ತಿರುಗಿ ನೋಡದೆ ಹೊರಟು ಹೋಗಿದ್ದ,

“ಅವಳಲ್ಲಿ, ಅವಳಿಗೆ ಗೊತ್ತುಗದ ಹಾಗೆ ಅವನ ಬಗ್ಗೆ ಭಾವನೆಗಳು ಬೆಳೆಯತೊಡಗಿದಳು,ಕ್ಷಣ ಕ್ಷಣಗಳು ಕೂಡಿ ದಿನವಾಗಿ,ದಿನಗಳು ಕೂಡಿ ತಿಂಗಳಾಗಿ, ತಿಂಗಳು ಕೊಡಿ ಯುಗವಾಗಿ,ಯುಗದ ಯುಗಳ ಗೀತೆ ಹಾಡಲು,ಅವಳ ಮನಸ್ಸು ಹಾತೊರೆಯುತ್ತಿತ್ತು ,ದಿನವೂ ಅವನಿಗಾಗಿ ,ಅವನು ಅವಳಿಗಾಗಿ ಕಾಯುತ್ತಿದ್ದ ಜಾಗದಲ್ಲಿ ಅವಳು ಕಾಯತೊಡಗಿದಳು,ಆದರೂ ಅವನು ಬರಲೇ ಇಲ್ಲ ,

“ಅಂದು ,ಅವನು ಅವಳ ಎದುರಿನಲ್ಲಿ ನಿಂತಿದ್ದು,ಅವಳಲ್ಲಿ ತುಮುಲಗಳು, ಒಂದು ಬಗೆಯ ಗೊಂದಲಗಳು ಕಾಡ ತೊಡಗಿದವು,ಅದನ್ನು ತೋರ್ಗಡದೆ ಅವಳು ಸಾಗಿದಳು ಇವನು ಅವಳ ಪಕ್ಕದಲ್ಲಿ ನಡೆಯುತ್ತಿದ್ದ, ಅವಳು ನಿಂತು ,”ಸಾರಿ ರೀ,ಎಂದಳು ರೀ ನಾನ್ ನನ್ನ ಕೊಡೆಗಾಗಿ ಬರಲಿಲ್ಲ ಕಣ್ರೀ,ಎಂದ, ಮತ್ತೆ ! ಎಂದಳು ” ಕಳೆದುಹೋಗಿರೋ ನನ್ನ ಹೃದಯನಾ ಹುಡುಕಿಕೊಂಡು ಬಂದೆ ,ಅದೇನಾದರು ನಿಮ್ಮ ಏರಿಯಾ ಕಡೆ ಬಂದಿದಿಯೇನೋ ಅಂತ ಬಂದೆ”

“ಸಿಕ್ಕಿದ ಹುಡುಗಿಯರೆಲ್ಲರನ್ನು ಕೇಳ್ತೀರಾ,ಎಂದಳು
ಇಲ್ಲರೀ”ನಿಮ್ಮ ಬಳಿ ಬಂದಾಗಲೆಲ್ಲ ನನ್ನ ಹೃದಯದ ಬಡಿತ “ಲಭ್ ಡಬ್ ಎನ್ನುವ ಬದಲು love -dove ಅನ್ನೋದು ರೀ ಅದಕ್ಕೆ ಹಾಗೇನಾದರು ಆದಿ ತಪ್ಪಿ ಈ ಕಡೆ ಬ0ದಿದ್ದರೆ ಅಂತ ,ಅವಳು ನಕ್ಕಳು,

“ಇಬ್ಬರ ಮನಗಳು ಬೆರೆತು ,ಸ್ವಂಚದವಾಗಿ ಹಾರತೊಡಗಿದವು,ಅಂದಿನಿಂದ ಅವರಿಗೆ ,ಆ ಮರಡಿಯ ಖಾಲಿ ಬೆಂಚು, ಮನೆಯಗತೊಡಗಿತ್ತು ಪ್ರತಿ ದಿನ ಅಲ್ಲೇ ಪ್ರೇಮ ಸಲ್ಲಾಪಗಳು,ಯಾರಾದರೂ ಬೇಗ ಬಂದರೆ ಖಾಲಿ ಬೆಂಚಿನ ಜೊತೆ ಮಾತನಾಡುತ್ತಿದ್ದ ಆ ಕ್ಷಣಗಳು ಅವರಿಗೆ ಇಳೆಗೆ ಸ್ವರ್ಗವಿಳಿದಂತೆ ಆಗಿ ಹೋಗಿತ್ತು,

“ಒಬ್ಬರನೊಬ್ಬರು ಬಿಟ್ಟಿರಲಾರದಷ್ಟು ಪ್ರೇಮಿಸತೊಡಗಿದರು ,ಪ್ರೀತಿನೇ ಹಾಗೆ ರೀ ತನ್ನ ಕಂಬಂದ ಬಾಹುಗಳಿಂದ ಪ್ರೇಮಿಗಳನ್ನು ಅಪ್ಪಿಕೊಂಡರೆ ಮುಗಿತು ಅಲ್ಲಿ ಮತ್ತೆಲ್ಲ ಹೂ ಕಾವ್ಯ ,ಅವರಿಗೆ ಪ್ರೀತಿನೇ ಉಸಿರು ,ಪ್ರೀತಿನೇ ದೇವರು ,ಪ್ರೀತಿನೇ ಭಾಷೆ ,ಜಾತಿ ಎಲ್ಲವೂ ,

“ಅಂದು ಅವಳಿಗೆ ನಿಜವನ್ನು ಹೇಳಿದ್ದ ,ಅವಳಿಗೆ ಕೊಟ್ಟಿದ್ದ ಕೊಡೆಯನ್ನು ಕದಿದ್ದು ಬೇರೆ ಯಾರು ಅಲ್ಲ ಅದು ಅವನೇ ,ಎಲ್ಲ ಅವಳಿಗಾಗಿ ,ಅವಳ ಪ್ರೀತಿಗಾಗಿ, ಮರುದಿನ ಅವಳಿಗಾಗಿ ಕಾಯುತ್ತ ,ಕನವರಿಸುತ್ತ ಕುಳಿತಿದ್ದ,ಆ ಕ್ಷಣಗಳು ಯುಗಗಳಗತೊಡಗಿದವು ,ತುಂತುರು ಮಳೆ ಶುರುವಾಗತೊಡಗಿತ್ತು,ಅವನು ಅಲ್ಲಿಂದ ಏಳಲಿಲ್ಲ ,ಅವಳ ಮೊಬೈಲ್ ಗೆ ರಿಂಗ್ ಮಾಡಿದ ,ರಿಸೀವ್ ಮಾಡಲೇ ಇಲ್ಲ ಅವನು ಚಡಪಡಿಸತೊಡಗಿದೆ ,ಮಳೆ ಜೋರಾಗ ತೊಡಗಿತ್ತು ಅವನು ಕದಲಲಿಲ್ಲ ,ಅವನ ಮನದಲ್ಲಿ ಯಾವುದೋ ಒಂದು ದುಃಸ್ವಪ್ನ ಕಾಡತೊಡಗಿತ್ತು,

“ಇವನ ಮೊಬೈಲ್ ರಿಂಗಾಯಿತು,ಆ ಕಡೆಯಿಂದ ಯಾರದೋ ಬಂದ ಧ್ವನಿ ಪುರುಷನದು, ಕ್ಷಣಾರ್ಧದಲ್ಲಿ ಅವನಿಗೆ ತಿಳಿಯಿತು ,ಆದರೆ ಅದು ಅವನಿಗೆ ಕೇಳಿಸದೆ ಹೋಗಿತ್ತು ,ಏಕೆಂದರೆ ಅವನು ಸರ್ವಸ್ವವೆ ಅವಳೆಂದು ತಿಳಿದುಕೊಂಡು ಪ್ರೀತಿಸಿದ ಅವನ ಆ ಹುಡುಗಿ ತನ್ನ ಇಹಲೋಕ ಯಾತ್ರೆಯನ್ನು ಮುಗಿಸಿ ಪಂಚಭೂತಗಳಲ್ಲಿ ಲೀನಳಾಗಿದ್ದಳು,ಮಳೆ ನಿಂತಿತು ಅವನು ಅವಳನ್ನು ಎಷ್ಟು ಪ್ರೀತಿಸುತ್ತಿದ್ದ ಎಂದರೆ ಈಗಲೂ ಸಹ ಅವನು ಖಾಲಿ ಬೆಂಚಿನ ಬಳಿ ಬರುತ್ತಾನೆ ,ಅದು ಇಂದು ,ಅಥವಾ ನಾಳೆ ಅವಳು ಬಂದೆ ಬರಬಹುದು ಎಂದು,ಕಾಯುತ್ತ ಕನವರಿಸುತ್ತ ಮತ್ತೆ ಅವಳ ಹುಡುಕಾಟದಲ್ಲಿ ಅತ್ತಿಂದಿತ್ತ ನೋಡುತ್ತಾ ಕೂರುತ್ತಾನೆ,ಅವನ ಕಂಗಳಲ್ಲಿ ತುಂಬಿ ಬರುತ್ತವಾದರು ಕಾಯುತ್ತ ಕೂರುತ್ತಾನೆ,ಈಗ ಪ್ರೀತಿಯ ಸೋನೆ ಮಳೆಯು ನಿಂತಿದೆ ಆದರೆ ಅದರ ಹನಿಗಳಿನ್ನು ನಿಂತಿಲ್ಲ,

ಮುಕ್ತಾಯ”

“ನೆನಪು ಎಂದಿಗೂ ಅಮರ ಅಮರ ಮಧುರ “

✍️ಕವಿತೆಗಳ ಸಾಲಲ್ಲಿ ಲೋಹಿತ್

ಕ್ಷಣ ಕ್ಷಣದ ಸುದ್ದಿ, ಮಾಹಿತಿ ಮನೋರಂಜನೆಗಾಗಿ ನಮ್ಮ FacebookTwitterYouTube ಅನುಸರಿಸಿ.

Leave A Reply

Your email address will not be published.