ರಾಯಚೂರಿನಲ್ಲಿ ಖೋಟಾ ನೋಟಿನ ಜಾಲ ಪತ್ತೆ: ಕಾನ್ಸ್‌ಟೇಬಲ್ ಸೇರಿ ನಾಲ್ವರ ಬಂಧನ

0
Spread the love

ರಾಯಚೂರು: ರಾಯಚೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನೇತೃತ್ವದಲ್ಲಿ ಪಶ್ಚಿಮ ಠಾಣೆ ಪೊಲೀಸರು ಕಾರ್ಯಾಚರಣೆ ನಡೆಸಿ ಖೋಟಾ ನೋಟಿನ ಜಾಲವನ್ನು ಲಾಕ್‌ ಮಾಡಿದ್ದಾರೆ. 10 ಲಕ್ಷ ಅಸಲಿ ಹಣ ಕೊಟ್ರೆ 30 ಲಕ್ಷ ಖೋಟಾ ನೋಟು ಕೊಡ್ತಿದ್ದ ಗ್ಯಾಂಗ್ ಅನ್ನು ಬೇದಿಸಿ ರಾಯಚೂರಿನ ಶಶಸ್ತ್ರ ಮೀಸಲು ಪಡೆದ ಕಾನ್ಸ್‌ಟೇಬಲ್ ಸೇರಿ ನಾಲ್ವರನ್ನು ಅರೆಸ್ಟ್‌ ಮಾಡಲಾಗಿದೆ.

Advertisement

ಸದ್ದಾಂ@ ಮೊಹಮ್ಮದ್ ಯಾಸಿನ್, ಶಶಸ್ತ್ರ ಮೀಸಲು ಪಡೆಯ ಕಾನ್ಸ್‌ಟೇಬಲ್ ಮರಿಲಿಂಗ, ರಮೇಶ್ ಆದಿ ಹಾಗೂ ಶಿವಲಿಂಗ ಬಂಧಿತ ಆರೋಪಿಗಳಾಗಿದ್ದು, ಹೈದರಾಬಾದ್‌ನ ಕಿಂಗ್ ಪಿನ್ ಒಬ್ಬನ ಮಾತಿನಂತೆ ಮರಿಲಿಂಗ ಟೀಂ ಈ ದಂಧೆಯನ್ನು ಮಾಡುತ್ತಿತ್ತು.

ಗ್ಯಾಂಗ್ ಸದ್ದಾಂನಿಂದ 10 ಲಕ್ಷ ರೂ. ಹಣ ಪಡೆದು 30 ಲಕ್ಷ ರೂ. ಖೋಟಾ ನೋಟು ನೀಡುವ ವ್ಯವಹಾರ ಕುದುರಿತ್ತು. ಮೊದಲ ಹಂತವಾಗಿ ಸದ್ದಾಂ 4 ಲಕ್ಷ ರೂ. ನೀಡಿದ್ದ ಎಂದು ತನಿಖೆ ವೇಳೆ ತಿಳಿದು ಬಂದಿದೆ. ಖೋಟಾ ನೋಟು ತಯಾರಿಕೆಗೆ ಬೇಕಾಗುವ ವೈಟ್ ಪೇಪರ್ ಗಳು ಕೆಲ ಕಚ್ಚಾ ವಸ್ತುಗಳನ್ನು ಗ್ಯಾಂಗ್ ನೀಡಿತ್ತು.
ಬಾಡಿಗೆ ಪಡೆದ ಮನೆಯಲ್ಲೇ ಖೋಟಾ ನೋಟು ತಯಾರಿಕೆಗೆ ಸಿದ್ಧತೆ ನಡೆಸಲಾಗಿತ್ತು. ಈ ವೇಳೆ ದಾಳಿ ನಡೆಸಿದ್ದ ಪೊಲೀಸರು ವೈಟ್ ಪೇಪರ್ ಹಾಗೂ ಕಚ್ಚಾ ವಸ್ತುಗಳನ್ನು ಜಪ್ತಿ ಮಾಡಿದ್ದಾರೆ. ಇನ್ನೂ ಈ ಬಗ್ಗೆ ರಾಯಚೂರಿನ ಪಶ್ಚಿಮ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


Spread the love

LEAVE A REPLY

Please enter your comment!
Please enter your name here