ತಮಿಳುನಾಡು ಬಿಜೆಪಿ ಅಧ್ಯಕ್ಷ ಕೆ. ಅಣ್ಣಾಮಲೈ ಅವರನ್ನು ಪೊಲೀಸರು ಮಾರ್ಚ್ 17ರಂದು ವಶಕ್ಕೆ ಪಡೆದಿದ್ದರು. ತಮಿಳುನಾಡು ರಾಜ್ಯ ಮಾರುಕಟ್ಟೆ ನಿಗಮದಲ್ಲಿ ನಡೆದಿದೆ ಎನ್ನಲಾದ ಅಕ್ರಮಗಳ ವಿರುದ್ಧ ಬಿಜೆಪಿ ಪ್ರತಿಭಟನೆಗೆ ಮುಂದಾಗಿತ್ತು. ಸೋಮವಾರ ಚೆನ್ನೈನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅಣ್ಣಾಮಲೈ, ನಟ ವಿಜಯ್ “ಮನೆಯಿಂದಲೇ ರಾಜಕೀಯ ಮಾಡುತ್ತಿದ್ದಾರೆ” ಎಂದು ಆರೋಪ ಮಾಡಿದ್ದಾರೆ.
ಸೋಮವಾರ ಚೆನ್ನೈನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅಣ್ಣಾಮಲೈ, ನಟ ವಿಜಯ್ “ಮನೆಯಿಂದಲೇ ರಾಜಕೀಯ ಮಾಡುತ್ತಿದ್ದಾರೆ”. ಟಿವಿಕೆ ಮಿತಿ ಮೀರುತ್ತಿದೆ. ವಿಜಯ್ ಮತ್ತು ಟಿವಿಕೆ ನಾಟಕವನ್ನು ಪ್ರದರ್ಶಿಸುತ್ತಿದ್ದಾರೆ ಎಂದು ಅಣ್ಣಾಮಲೈ ಆರೋಪಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅಣ್ಣಾಮಲೈ, “ಟಿವಿಕೆ ಸಿನಿಮಾ ಸೆಟ್‌ನಲ್ಲಿ ಕುಳಿತು ರಾಜಕೀಯ ಮಾಡುವುದು ಹೇಗೆ ಸಾಧ್ಯ, ಅಥವಾ ವಿಜಯ್ ರಾಜಕೀಯದತ್ತ ಗಮನ ಹರಿಸುವ ಬದಲು ಸಿನಿಮಾ ಸೆಟ್‌ನಲ್ಲಿ ಹಾಡುಗಳನ್ನು ಹಾಡುತ್ತಾ, ನಾಯಕಿಯರ ಸೊಂಟವನ್ನು ಗಿಲ್ಲುತ್ತ ಇರುತ್ತಾರಾ?
ನನಗೂ ಮಾತನಾಡಲು ಗೊತ್ತು, ನಾನು ಅವರಂತೆ ನೃತ್ಯ ಮಾಡುವುದಿಲ್ಲ, ಜನರ ಕಲ್ಯಾಣಕ್ಕಾಗಿ ನಾನು ನೆಲದ ಮೇಲೆ ಕೆಲಸ ಮಾಡುತ್ತಿದ್ದೇನೆ. ವಿಜಯ್ ಸ್ವತಃ ಧೂಮಪಾನ ಮತ್ತು ಮದ್ಯಪಾನದ ಬಗ್ಗೆ ಮಾತನಾಡುವಾಗ ಅವರೇ ಹಾಗೆ ಮಾಡುವಾಗ ಹೇಗೆ ಮಾತನಾಡುತ್ತಾರೆ?” ಎಂದು ಪ್ರಶ್ನಿಸಿದರು.



